Category: ಕವನ

  • ಕನ್ನಡ ನಮ್ಮೂಸಿರಾಗಲಿ, ಸಾತು ಗೌಡ, ಕವನ – 5

    ಮೊಳಗಲಿ ಎಲ್ಲೆಡೆ ಕನ್ನಡ ಕಹಳೆಕರುನಾಡಿನ ಮೂಲೆಮೂಲೆಯಲಿ..ನಮ್ಮೆಲ್ಲರ ಉಸಿರು ಕನ್ನಡ ಎನುತಲಿಎಳೆಯುವ ತೇರನು ಹರುಷದಲಿ. ಮಾತಲಿ ಮುತ್ತು ಕನ್ನಡ ಗತ್ತಿಗೆಮಧುರ ಭಾವದ ಸೆಳೆತವಿದೆ..ಮೈತ್ರಿಯ ಬಯಸಿ ತನ್ನೆಡೆ ಬರಲುಕರಪಿಡಿದು ಪೊರೆವ ಪ್ರೀತಿಯಿದೆ. ಸಹಸ್ರಾರು ವರುಷ ಇತಿಹಾಸದಿ ಮಿಂಚಿದೆಕನ್ನಡ ಲಿಪಿಯ ಸಿರಿತನವು..ಸಾಹಿತ್ಯ ಸಂಸ್ಕೃತಿ ಜಗದಲಿ ಬೆಳಗಲುಕರುನಾಡಿನ ಜನತೆಯ ಹಿರಿಗುಣವು. ಕನ್ನಡ ಮಣ್ಣಿನ ಹೊನ್ನಿನ ಬೀಡುನಿಸರ್ಗ ಸಿರಿಯಾ ಆಗರವು..ನಾಡಿನ ತುಂಬಾ ಹರಿದಿವೆ ನದಿಗಳುಎಲ್ಲೆಡೆ ಹಸಿರಿನ ಹಂದರವು. ಸಾಹಿತ್ಯ ಕ್ಷೇತ್ರದಿ ಕನ್ನಡ ಕೀರ್ತಿಯುರಾಷ್ಟ್ರದ ಗಮನವ ಸೆಳೆಯುತ್ತಿದೆ..ಶಾಂತಿಯ ಮಂತ್ರಕೆ ಜಗವೇ ಸೋತುಕನ್ನಡಿಗರ ಕೀರ್ತಿಯು ಮಿನುಗುತ್ತಿದೆ. ಶಿಲ್ಪ…

  • ಸಾಧಕರು ಹಾಲಕ್ಕಿಗರು | ಅಕ್ಷತಾ ಜಗದೀಶ್ | ಕವನ 3

    *ಸಾಧಕರು-ಹಾಲಕ್ಕಿಗರು*ಜಾನಪದ ಕೋಗಿಲೆ ಸುಕ್ರಜ್ಜಿಯಜಾನಪದದಲ್ಲಿ ನಲಿದಾಡಿತುಹಾಲಕ್ಕಿಗಳ ಸಂಸ್ಕೃತಿ …..ದಿನಕರರ ಚುಟುಕಿನಲ್ಲಿ ಮೆರೆದಾಡಿತುಹಾಲಕ್ಕಿ ಗಳ ಸೊಬಗು…ವೃಕ್ಷಮಾತೆ ತುಳಸಿಯ ವನಸಿರಿಯಲ್ಲಿಪಸರಿಸಿತು ಹಾಲಕ್ಕಿ ಗಳಹೃದಯ ವೈಶಾಲ್ಯತೆ..‌‌‌ಆಯುರ್ವೇದ ಔಷಧಿಗಳ ಜೊತೆ ಪ್ರಖ್ಯಾತಿ ಪಡೆಯಿತು ಹಾಲಕ್ಕಿಸಮುದಾಯ….ಲೇಖನನ ಲೇಖನಿಯೊಳು ಸಾಲುಗಳಾಗಿಹೊರ ಹೊಮ್ಮಿತು ಹೊತ್ತಿಗೆಯಾಗಿಹಾಲಕ್ಕಿ ಗಳ ಆಚಾರ-ವಿಚಾರ…ಬಡತನವನು ದೂರಲಿಲ್ಲಸಾಧಿಸಿದೆನೆಂದು ಮೆರೆಯಲಿಲ್ಲ…ಸಂಘರ್ಷ-ಸಂಕಷ್ಠಗಳ ಮೇರೆ ಮೀರಿನವದಿಗಂತದೆಡೆಗೆ ನೋಟ ಚೆಲ್ಲಿಬಾನೆತ್ತರಕೆ ಚುಂಬಿಸಲಿಹಾಲಕ್ಕಿ ಗಳ ಸಾಧನೆಯ ಪತಾಕೆ……. ರಚನೆ: ಅಕ್ಷತಾ ಜಗದೀಶ್ (ಸಮಯಾ)

  • ನಮ್ಮಯ ಗೋಕರ್ಣ – ಗುಮಟೆ ಪದ 6 | ಅರುಣ್ ಗೌಡ ಕವನ 2

    ನಮ್ಮಯ ಗೋಕಣ೯ ಪ್ರವಾಸಿ ತಾಣಗಳಲಿ ಇದು ಬಲುವಣ೯.ರಾವಣನ ಜೊತೆ ಬಂದಿರಬೇಕು ಆ ಕುಂಭಕಣ೯.ಪ್ರತಿಯೊಂದು ದೇವರಲಿ ಹೊಳೆಯುತಿದೆ ಸುವಣ೯.ಇದುವೆ ಭಕ್ತರ ತಾಣ ನಮ್ಮಯ ಗೋಕಣ೯. ಗಜಮುಖನ ಪೂಜೆಯೆ ಎಲ್ಲರಿಗಿಂತ ಮೊದಲು.ಗಮನ ಸೆಳೆಯುತಿದೆ ಓಂ ಕುಡ್ಲೆಯ ಕಡಲು.ಮಹಾಬಲ ಭದ್ರಕಾಳಿ ನಮ್ಮ ಕಾಯುತ ಇರಲು.ನಾವು ದೇವರ ಮಡಿಲು ನಮಗಿಲ್ಲ ದಿಗಿಲು. ಕರೆಯುತಿಹರು ಇದನು ದಕ್ಷಿಣದ ಕಾಶಿ.ಎಲ್ಲಿ ನೋಡಿದರಲ್ಲಿ ದೇವತೆಗಳೆ ರಾಶಿ.ಕೋಟಿ ತೀಥ೯ದ ಸ್ನಾನ ಎಲ್ಲ ಪಾಪಗಳ ವಾಸಿ.ದೇಶ ವಿದೇಶಿಗಳಿಂದ ಬರುವರು ಗೋಕಣ೯ವ ಅರಸಿ. ಗಂಗೆ ಹಬ್ಬದ ದಿನ ನಮಗೆ ತುಂಬ ಸಡಗರ.ಕೃಷ್ಣ…

  • ಉತ್ತರ ಕನ್ನಡಕ್ಕೆ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಗುಮಟೆ ಪಾಂಗ್

    ಉತ್ತರ ಕನ್ನಡಿಗರ ಬಹುದಿನದ ಬೇಡಿಕೆ ನಮ್ಮ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಹೆಬ್ಬಯಕೆಯು ಗುಮಟೆ ಪಾಂಗ್ ನ (ಕವನ) ಮೂಲಕ ಹೊರಬಂದಿದ್ದು ಹೀಗೆ… ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ ಒಂದು ಉತ್ತರ ಕನ್ನಡಕೆಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ.ಹೇಳವರು ವೈದ್ಯರು ಒಯ್ಯಿರಿ ದೂರಕೆಆಗದು ವಾಸಿಯು ನಮ್ಮ ಹತ್ರೆ. ದಾರಿಯ ಮಧ್ಯಯೆ ಸಾಗುವ ರೋಗಿಗೆಹರಕೆಗೆ ಕುರಿಯು ಹೊರಟಂತೆದಾರಿಯ ಮಧ್ಯಯೆ ಪ್ರಾಣವು ಹೋದರೆಆಗುವುದು ತ್ರಿಶಂಕು ಸ್ಥಿತಿಯಂತೆ. ಅಪಘಾತವಾದರೆ ಇಲ್ಲ ತುತು೯ ಚಿಕಿತ್ಸೆಯುಬದುಕುವ ದಾರಿಯು ಬರಿ ಕನಸೆ.ಹೋದರೆ ನಾವು…

  • ಗುರುವಿಗೆ ಶರಣು |ಸಾತು ಗೌಡ | ಕವನ – 4

    ಅಕ್ಷರ ಕಲಿಕೆಯತಿದ್ದಿದ ಗುರುವೇಪಾದಕೆ ಶರಣು ಬಂದಿಹೆನು|ಮಣ್ಣಿನ ಮುದ್ದೆಗೆರೂಪವ ನೀಡಿದತಮ್ಮನು ಮನದಿ ಭಜಿಸುವೆನು||ಜ್ಞಾನದ ಸುಧೆಯರುಚಿಯ ಹತ್ತಿಸಿಸಂಸ್ಕಾರ ಸಂಸ್ಕೃತಿ ಬೆಳೆಸಿದಿರಿ|ಸಕಲರ ಜೊತೆಯಲಿಬೇಧವ ತೊರೆವಐಕ್ಯದ ಸಿರಿಯ ತುಂಬಿದಿರಿ||ಜಗವೇ ಇಂದುಕುಣಿದು ನಲಿದಿದೆಗುರುವೇ ನಿನ್ನ ಹೆಸರಿನಲ್ಲಿ|ನಿನ್ನ ನೆನೆಸುತಲೋಕವು ಬೆಳಗಿದೆಒಲುಮೆ ಗೀತೆಯ ಹಾಡುತಲಿ|| ರಚನೆ: ಸಾತು ಗೌಡ, ಬಡಗೇರಿ

  • “ಹಾಲಕ್ಕಿಗಳ ಹಾಡು ಪಾಡು.” | ಸಾತು ಗೌಡ, ಕವನ – 3

    ಹಾಲಕ್ಕಿ ಗೌಡರ ನೆನೆದರೆ ಮನದಿನಂಬಿಕೆ ಪ್ರೀತಿ ನೆನಪಾಗುವುದು.ಸಂಸ್ಕೃತಿ ಬೆಳೆಸಿ ಉಳಿಸುವ ಪರಿಗೆನಾಡೇ ಜೈ ಜೈ ಎನುತಿಹುದು.ಕೂಲಿಯ ನಂಬಿ ಮುಂಜಾನೆ ಎದ್ದುಹಗಲು ರಾತ್ರಿ ದುಡಿವವರು..ರಾಗಿ ಅಂಬಲಿಯೇ ತೀರ್ಥ ಎನ್ನುತಲಿಕುಡಿದು ನೆಮ್ಮದಿ ಕಂಡವರು.ಬಡತನ ಬವಣೆಯಲಿ ಬೆಂದು ನೊಂದರು ಕಪಟದಿ ದೂರ ಉಳಿದವರು..ಸಬಲರ ಬಣ್ಣದ ಮಾತಿಗೆ ನಂಬಿತಾವೇ ಹಳ್ಳಕೆ ಬಿದ್ದವರು.ತುಂಡು ಭೂಮಿಲಿ ಬೆವರು ಸುರಿಸುತದುಡಿತದಿ ಕಷ್ಟ ಉಂಡವರು..ಗುಡ್ಡದಿ ದೊರೆತ ಗಡ್ಡೆ ಗೆಣಸನುಹಬ್ಬದ ಅಡುಗೆ ಎಂದವರು.ಮದುವೆ ಮುಂಜಿ ಜಾತ್ರೆ ಸಿದ್ಧತೆಯಯಶದಲಿ ಗೌಡರೆ ಮುಂದಿಹರು..ದುಡಿತದಿ ಕಲಿಕೆ ಘಮವನು ಮರೆತುಜೀವನ ಪಥದಲಿ ನೊಂದವರು.ಮಾತಿಗೆ ತಪ್ಪದ ಸ್ವಾಮಿ…

  • ನನ್ನ ಉತ್ತರ ಕನ್ನಡ ಜಿಲ್ಲೆ | ಅಕ್ಷತಾ ಜಗದೀಶ, ಕವನ -2

    ಒಂದೆಡೆ ಪಶ್ಚಿಮ ಘಟ್ಟಗಳ ಸಾಲುಇನ್ನೊಂದೆಡೆ ಹಬ್ಬಿದ ಕರಾವಳಿಯ ನೋಡು…ವೈವಿಧ್ಯತೆಯಲ್ಲಿ ಏಕತೆ ಸಾರುವ ಜಿಲ್ಲೆಅದು ನನ್ನ ಉತ್ತರ ಕನ್ನಡ ಎಂದರೆಅತಿಶಯೋಕ್ತಿಯಲ್ಲವೆಂದು ನಾ ಬಲ್ಲೆ!! ಧಾರ್ಮಿಕ ಕ್ಷೇತ್ರಗಳ ಬೀಡು…ವನ್ಯ ಜೀವಿಗಳಿಗೆ ನೆಲೆ ನೀಡಿದೆ ಕಾಡು…ಐತಿಹಾಸಿಕ ಕೋಟೆಯ ತಾಣಜಿಲ್ಲೆಗೆ ಕಲಶ ಇಟ್ಟಂತೆ ಕಾಣುವಶಿವನ ಕ್ಷೇತ್ರ ಯಾಣ….. ವಿವಿಧ ಬಗೆಯ ಬುಡಕಟ್ಟು ಜನಾಂಗನೆಲೆ ನಿಂತಿದೆ ಇಲ್ಲಿ…ವಿದೇಶಿಗರನು ಸಹ ಕಾಣಬಹುದು ಗೋಕರ್ಣದಲ್ಲಿ….ಟಿಬೆಟಿಯನ್ನರಿಗೂ ನೀಡಿದೆ ಸೂರುಹೊಸ ಮನ್ವಂತರದತ್ತ ಸಾಗಿದೆ ಚಿಗುರು…. ಕೈ ಬೀಸಿ ಕರೆವ ಕಡಲ ನಡುವಣದ್ವೀಪಗಳ ನೋಟ…ಮುಗಿಲ ಚುಂಬಿಸುವಂತೆ ನಿಂತ ಸಹ್ಯಾದ್ರಿಯ ಮೈಮಾಟ..ಧುಮ್ಮಿಕ್ಕುವ ‌ಜಲಪಾತಗಳ…

  • ನಮ್ಮ ರೈತ | ಸಾತು ಗೌಡ ಕವನ – 2

    ಮಣ್ಣೆ ಹೊನ್ನು ಬಾಳಲಿಂದುತಿಳಿದು ದುಡಿದು ನಲಿಯುವಾ।ನಾಡಜನತೆ ನಲಿದು ಉಣಲುದವಸ ಧಾನ್ಯ ಬೆಳೆಯುವಾ॥ಜಗದ ಏಳ್ಗೆ ನೇಗಿಲಲ್ಲಿಅಡಗಿರುವ ಸತ್ಯ ತಿಳಿಸುವಾ।ಎತ್ತುಗಳ ಜೊತೆಗೆ ನಗುತತನ್ನ ಜೀವ ಸವೆಸುವಾ॥ಹೊಲದಿ ದುಡಿಯೆ ಚಳಿಮಳೆಯಬಾಧೆ ಸಹಿಸಿ ದುಡಿಯುವಾ।ಭರತ ಭೂಮಿ ತನ್ನಮನೆಎನುತ ಅನ್ನ ನೀಡುವಾ॥ಕಪ್ಪು ಮೋಡ, ಸುಳಿದು ಬರಲುಮುಗಿಲ ಕಡೆ ನೋಡುವಾ।ಮಳೆಯ ಬರುವ, ತಿಳಿದು ಹೊಲವಹಸನು ಮಾಡಿ ಬಿತ್ತುವಾ॥ಹೊಟ್ಟೆ ತಣಿಸಿ, ಜಗವ ನಲಿಸೋಅನ್ನದಾತನನ್ನು ಸದಾ ನೆನೆಯುವಾ।ಅವನ ಮಹಿಮೆ, ಹಾಡಿ ದಿನವೂಜಗದ ಏಳ್ಗೆ ಬಯಸುವಾ॥ ಲೇಖಕರು: ಸಾತು ಗೌಡ, ಅಂಕೋಲಾ

  • ಹಾಲಕ್ಕಿ ಹೆಣ್ಣುಮಗಳು

    ಕೊರಳಲಿ ವಿವಿಧ ರಂಗಿನ‌ ಮಣಿಸರ..ಕಪ್ಪು, ಕೆಂಪು, ಹಸಿರು, ಬಿಳಿ, ಹಳದಿನೀಲಿ ಬಣ್ಣದ ‌ಮಣಿಗಳ‌ ಹಾರ…..ಉತ್ತರ ಕನ್ನಡ ಜಿಲ್ಲೆಯ ಆದಿಮ ಬುಡಕಟ್ಟಲ್ಲಿ, ಪ್ರಮುಖವಾಗಿದೆ ನಮ್ಮ ಸಮುದಾಯ….. ನಮ್ಮ ಮುಡಿಯಲ್ಲಿ ನಲಿಯುವುದು ಎಂದಿಗೂ ಬಣ್ಣದ ಹೂವಿನ ‌ಮಾಲೆ..”ಗೇಟಿ” ಪದ್ದತಿಯಲ್ಲಿ ಸೀರೆಯನ್ನುಡುವುದು ನಮ್ಮ ಸಂಸ್ಕೃತಿ..ಪ್ರಕೃತಿಯ ಮಡಿಲಲ್ಲಿರುವುದು ನಮ್ಮ ನಿವಾಸ….ಹಾಲಕ್ಕಿಗಳ ಮನಸೇ ತಿಳಿನೀಲ ಆಗಸ..ಕರಾವಳಿಗೆ ಮೈಯೊಡ್ಡಿ ನಿಂತಿರುವ ಸಹ್ಯಾದ್ರಿಯ ದೃಶ್ಯ….ಪ್ರತಿ ನಿತ್ಯ ಕಣ್ತುಂಬಿ ಕೊಳ್ಳುವುದು ನಮ್ಮ ಅದೃಷ್ಟ…..ನಮ್ಮ ಸಂಸ್ಕೃತಿಯೇ ನಮಗೊಂದು‌ ಹಿರಿಮೆ…ಹಾಲಕ್ಕಿ ಒಕ್ಕಲಿಗರು ನಾವೆಂದು ಹೇಳಲು ನಮಗಿದೆ ಹೆಮ್ಮೆ…!! ✍️ ಅಕ್ಷತಾ ಜಗದೀಶ…

You cannot copy content of this page