
*ಸಾಧಕರು-ಹಾಲಕ್ಕಿಗರು*
ಜಾನಪದ ಕೋಗಿಲೆ ಸುಕ್ರಜ್ಜಿಯ
ಜಾನಪದದಲ್ಲಿ ನಲಿದಾಡಿತು
ಹಾಲಕ್ಕಿಗಳ ಸಂಸ್ಕೃತಿ .....
ದಿನಕರರ ಚುಟುಕಿನಲ್ಲಿ ಮೆರೆದಾಡಿತು
ಹಾಲಕ್ಕಿ ಗಳ ಸೊಬಗು...
ವೃಕ್ಷಮಾತೆ ತುಳಸಿಯ ವನಸಿರಿಯಲ್ಲಿ
ಪಸರಿಸಿತು ಹಾಲಕ್ಕಿ ಗಳ
ಹೃದಯ ವೈಶಾಲ್ಯತೆ..
ಆಯುರ್ವೇದ ಔಷಧಿಗಳ ಜೊತೆ
ಪ್ರಖ್ಯಾತಿ ಪಡೆಯಿತು ಹಾಲಕ್ಕಿ
ಸಮುದಾಯ....
ಲೇಖನನ ಲೇಖನಿಯೊಳು ಸಾಲುಗಳಾಗಿ
ಹೊರ ಹೊಮ್ಮಿತು ಹೊತ್ತಿಗೆಯಾಗಿ
ಹಾಲಕ್ಕಿ ಗಳ ಆಚಾರ-ವಿಚಾರ...
ಬಡತನವನು ದೂರಲಿಲ್ಲ
ಸಾಧಿಸಿದೆನೆಂದು ಮೆರೆಯಲಿಲ್ಲ...
ಸಂಘರ್ಷ-ಸಂಕಷ್ಠಗಳ ಮೇರೆ ಮೀರಿ
ನವದಿಗಂತದೆಡೆಗೆ ನೋಟ ಚೆಲ್ಲಿ
ಬಾನೆತ್ತರಕೆ ಚುಂಬಿಸಲಿ
ಹಾಲಕ್ಕಿ ಗಳ ಸಾಧನೆಯ ಪತಾಕೆ.......
ರಚನೆ: ಅಕ್ಷತಾ ಜಗದೀಶ್ (ಸಮಯಾ)

Leave a Reply