ಹಾಲಕ್ಕಿ ಹೆಣ್ಣುಮಗಳು

Posted by

·

ಕೊರಳಲಿ ವಿವಿಧ ರಂಗಿನ‌ ಮಣಿಸರ..
ಕಪ್ಪು, ಕೆಂಪು, ಹಸಿರು, ಬಿಳಿ, ಹಳದಿ
ನೀಲಿ ಬಣ್ಣದ ‌ಮಣಿಗಳ‌ ಹಾರ.....
ಉತ್ತರ ಕನ್ನಡ ಜಿಲ್ಲೆಯ ಆದಿಮ ಬುಡಕಟ್ಟಲ್ಲಿ, ಪ್ರಮುಖವಾಗಿದೆ ನಮ್ಮ ಸಮುದಾಯ.....

ನಮ್ಮ ಮುಡಿಯಲ್ಲಿ ನಲಿಯುವುದು ಎಂದಿಗೂ ಬಣ್ಣದ ಹೂವಿನ ‌ಮಾಲೆ..
"ಗೇಟಿ" ಪದ್ದತಿಯಲ್ಲಿ ಸೀರೆಯನ್ನುಡುವುದು ನಮ್ಮ ಸಂಸ್ಕೃತಿ..
ಪ್ರಕೃತಿಯ ಮಡಿಲಲ್ಲಿರುವುದು ನಮ್ಮ ನಿವಾಸ....
ಹಾಲಕ್ಕಿಗಳ ಮನಸೇ ತಿಳಿನೀಲ ಆಗಸ..

ಕರಾವಳಿಗೆ ಮೈಯೊಡ್ಡಿ ನಿಂತಿರುವ ಸಹ್ಯಾದ್ರಿಯ ದೃಶ್ಯ....
ಪ್ರತಿ ನಿತ್ಯ ಕಣ್ತುಂಬಿ ಕೊಳ್ಳುವುದು ನಮ್ಮ ಅದೃಷ್ಟ.....

ನಮ್ಮ ಸಂಸ್ಕೃತಿಯೇ ನಮಗೊಂದು‌ ಹಿರಿಮೆ...
ಹಾಲಕ್ಕಿ ಒಕ್ಕಲಿಗರು ನಾವೆಂದು ಹೇಳಲು ನಮಗಿದೆ ಹೆಮ್ಮೆ...!!

✍️ ಅಕ್ಷತಾ ಜಗದೀಶ (ಸಮಯ ಗೌಡ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading