ನನ್ನ ಉತ್ತರ ಕನ್ನಡ ಜಿಲ್ಲೆ | ಅಕ್ಷತಾ ಜಗದೀಶ, ಕವನ -2

Posted by

·

ಒಂದೆಡೆ ಪಶ್ಚಿಮ ಘಟ್ಟಗಳ ಸಾಲು
ಇನ್ನೊಂದೆಡೆ ಹಬ್ಬಿದ ಕರಾವಳಿಯ ನೋಡು…
ವೈವಿಧ್ಯತೆಯಲ್ಲಿ ಏಕತೆ ಸಾರುವ ಜಿಲ್ಲೆ
ಅದು ನನ್ನ ಉತ್ತರ ಕನ್ನಡ ಎಂದರೆ
ಅತಿಶಯೋಕ್ತಿಯಲ್ಲವೆಂದು ನಾ ಬಲ್ಲೆ!!

ಧಾರ್ಮಿಕ ಕ್ಷೇತ್ರಗಳ ಬೀಡು…
ವನ್ಯ ಜೀವಿಗಳಿಗೆ ನೆಲೆ ನೀಡಿದೆ ಕಾಡು…
ಐತಿಹಾಸಿಕ ಕೋಟೆಯ ತಾಣ
ಜಿಲ್ಲೆಗೆ ಕಲಶ ಇಟ್ಟಂತೆ ಕಾಣುವ
ಶಿವನ ಕ್ಷೇತ್ರ ಯಾಣ…..

ವಿವಿಧ ಬಗೆಯ ಬುಡಕಟ್ಟು ಜನಾಂಗ
ನೆಲೆ ನಿಂತಿದೆ ಇಲ್ಲಿ…
ವಿದೇಶಿಗರನು ಸಹ ಕಾಣಬಹುದು ಗೋಕರ್ಣದಲ್ಲಿ….
ಟಿಬೆಟಿಯನ್ನರಿಗೂ ನೀಡಿದೆ ಸೂರು
ಹೊಸ ಮನ್ವಂತರದತ್ತ ಸಾಗಿದೆ ಚಿಗುರು….

ಕೈ ಬೀಸಿ ಕರೆವ ಕಡಲ ನಡುವಣ
ದ್ವೀಪಗಳ ನೋಟ…
ಮುಗಿಲ ಚುಂಬಿಸುವಂತೆ ನಿಂತ ಸಹ್ಯಾದ್ರಿಯ ಮೈಮಾಟ..
ಧುಮ್ಮಿಕ್ಕುವ ‌ಜಲಪಾತಗಳ ವೈಯಾರ..
ಭಾಷಾ ವೈವಿಧ್ಯತೆಗೆ ನೆಲೆಯಾದ ಮಂದಿರ…

ಹಸಿರು ರಾಶಿಯ ವನಸಿರಿ‌ ನೋಡಿಲ್ಲಿ ನಲ್ಲೇ….
ಸಾಮರಸ್ಯದ ಗೂಡು ನನ್ನ ‌ಉತ್ತರ‌ ಕನ್ನಡ ಜಿಲ್ಲೆ……!!

✍️ ಅಕ್ಷತಾ ಜಗದೀಶ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading