ಗುರುವಿಗೆ ಶರಣು |ಸಾತು ಗೌಡ | ಕವನ – 4

Posted by

·

ಅಕ್ಷರ ಕಲಿಕೆಯ
ತಿದ್ದಿದ ಗುರುವೇ
ಪಾದಕೆ ಶರಣು ಬಂದಿಹೆನು|
ಮಣ್ಣಿನ ಮುದ್ದೆಗೆ
ರೂಪವ ನೀಡಿದ
ತಮ್ಮನು ಮನದಿ ಭಜಿಸುವೆನು||

ಜ್ಞಾನದ ಸುಧೆಯ
ರುಚಿಯ ಹತ್ತಿಸಿ
ಸಂಸ್ಕಾರ ಸಂಸ್ಕೃತಿ ಬೆಳೆಸಿದಿರಿ|
ಸಕಲರ ಜೊತೆಯಲಿ
ಬೇಧವ ತೊರೆವ
ಐಕ್ಯದ ಸಿರಿಯ ತುಂಬಿದಿರಿ||

ಜಗವೇ ಇಂದು
ಕುಣಿದು ನಲಿದಿದೆ
ಗುರುವೇ ನಿನ್ನ ಹೆಸರಿನಲ್ಲಿ|
ನಿನ್ನ ನೆನೆಸುತ
ಲೋಕವು ಬೆಳಗಿದೆ
ಒಲುಮೆ ಗೀತೆಯ ಹಾಡುತಲಿ||

ರಚನೆ: ಸಾತು ಗೌಡ, ಬಡಗೇರಿ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading