ಉತ್ತರ ಕನ್ನಡಕ್ಕೆ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಗುಮಟೆ ಪಾಂಗ್

Posted by

·

ಉತ್ತರ ಕನ್ನಡಿಗರ ಬಹುದಿನದ ಬೇಡಿಕೆ ನಮ್ಮ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಹೆಬ್ಬಯಕೆಯು ಗುಮಟೆ ಪಾಂಗ್ ನ (ಕವನ) ಮೂಲಕ ಹೊರಬಂದಿದ್ದು ಹೀಗೆ…

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬೇಕಿದೆ ಒಂದು ಉತ್ತರ ಕನ್ನಡಕೆ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ.
ಹೇಳವರು ವೈದ್ಯರು ಒಯ್ಯಿರಿ ದೂರಕೆ
ಆಗದು ವಾಸಿಯು ನಮ್ಮ ಹತ್ರೆ.

ದಾರಿಯ ಮಧ್ಯಯೆ ಸಾಗುವ ರೋಗಿಗೆ
ಹರಕೆಗೆ ಕುರಿಯು ಹೊರಟಂತೆ
ದಾರಿಯ ಮಧ್ಯಯೆ ಪ್ರಾಣವು ಹೋದರೆ
ಆಗುವುದು ತ್ರಿಶಂಕು ಸ್ಥಿತಿಯಂತೆ.

ಅಪಘಾತವಾದರೆ ಇಲ್ಲ ತುತು೯ ಚಿಕಿತ್ಸೆಯು
ಬದುಕುವ ದಾರಿಯು ಬರಿ ಕನಸೆ.
ಹೋದರೆ ನಾವು ಮಂಗಳೂರು ಗೋವಾಕೆ
ಬರುವುದಿಲ್ಲ ಹಿಂದಿ,ತುಳು ಭಾಷೆ.

ನಮ್ಮಲ್ಲಿ ಬೇಡ ಥರ ಥರ ಮುನಿಸು
ಮಳೆಯೆ ಇರದ ಮೋಡದಂತೆ
ಒಟ್ಟಾಗಿ ಸೇರಿದರೆ ಎಲ್ಲರ ಮನಸು
ಗೆಲುವಿನ ದಾರಿಯ ಪಡೆದಂತೆ

ರ‍ಹನೆ: ಅರುಣ ಗೌಡ,
ಗುಮಟೆ ಪಾಂಗ್(ಕವನ ಸಂಕಲನ),
ನಾಗಮ್ಮ ಪ್ರಕಾಶನ, ಅಂಕೋಲಾ.

ಮಾಹಿತಿ ಸಂಗ್ರಹಣೆ: ಜಗದೀಶ್ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading