ನಮ್ಮ ರೈತ | ಸಾತು ಗೌಡ ಕವನ – 2

Posted by

·

ಮಣ್ಣೆ ಹೊನ್ನು ಬಾಳಲಿಂದು
ತಿಳಿದು ದುಡಿದು ನಲಿಯುವಾ।
ನಾಡಜನತೆ ನಲಿದು ಉಣಲು
ದವಸ ಧಾನ್ಯ ಬೆಳೆಯುವಾ॥

ಜಗದ ಏಳ್ಗೆ ನೇಗಿಲಲ್ಲಿ
ಅಡಗಿರುವ ಸತ್ಯ ತಿಳಿಸುವಾ।
ಎತ್ತುಗಳ ಜೊತೆಗೆ ನಗುತ
ತನ್ನ ಜೀವ ಸವೆಸುವಾ॥

ಹೊಲದಿ ದುಡಿಯೆ ಚಳಿಮಳೆಯ
ಬಾಧೆ ಸಹಿಸಿ ದುಡಿಯುವಾ।
ಭರತ ಭೂಮಿ ತನ್ನಮನೆ
ಎನುತ ಅನ್ನ ನೀಡುವಾ॥

ಕಪ್ಪು ಮೋಡ, ಸುಳಿದು ಬರಲು
ಮುಗಿಲ ಕಡೆ ನೋಡುವಾ।
ಮಳೆಯ ಬರುವ, ತಿಳಿದು ಹೊಲವ
ಹಸನು ಮಾಡಿ ಬಿತ್ತುವಾ॥

ಹೊಟ್ಟೆ ತಣಿಸಿ, ಜಗವ ನಲಿಸೋ
ಅನ್ನದಾತನನ್ನು ಸದಾ ನೆನೆಯುವಾ।
ಅವನ ಮಹಿಮೆ, ಹಾಡಿ ದಿನವೂ
ಜಗದ ಏಳ್ಗೆ ಬಯಸುವಾ॥

ಲೇಖಕರು: ಸಾತು ಗೌಡ, ಅಂಕೋಲಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading