Category: ಕವನ

  • ಹಾಲಕ್ಕಿ ಮಕ್ಕಳು…

    ಹಾಲಕ್ಕಿ ಮಕ್ಕಳು ಹಾಲನ್ನೇ ನೀಡ್ಯಾರನಾಡಿಗೆ ಹಾಲ ಸುರಿಸ್ಯಾರನಾಡಿಗೆ ಹಾಲ ಸುರಿಸ್ಯಾರ ಅಣ್ಣಯ್ಯನಾಡಿನ ಹೆಸರ ಬೆಳೆಸ್ಯಾರಕಂಬಳಿ ಹೊದ್ದಾರ ಅಂಬಲಿ ಕುಡಿದ್ಯಾರನಾಡಿಗೆ ಉಂಬಳಿ ತಂದಾರನಾಡಿಗೆ ಉಂಬಳಿ ತಂದಾರೋ ಅಣ್ಣಯ್ಯಹಿಂದಿನ ಸಂಸ್ಕೃತಿ ಉಳಿಸ್ಯಾರಇಲ್ಲಿಂದ ದಿಲ್ಲಿಗೂ ಸುಗ್ಗಿಯ ಕುಣಿದಾರ ನಾಡಿಗೆ ಹುಗ್ಗಿಯ ಉಣಿಸ್ಯಾರನಾಡಿಗೆ ಹುಗ್ಗಿಯ ಉಳಿಸ್ಯಾರೋ ಅಣ್ಣಯ್ಯನಮ್ಮಯ ಜನಪದ ಇಟ್ಟಾರಬೆಟ್ಟಾವ ಬೆಳೆದಾರ ಬಯಲಲ್ಲಿ ದುಡಿದ್ಯಾರಬೆವರಲ್ಲೇ ಬೆಲ್ಲ ತಿಂದಾರಬೆವರಲ್ಲೇ ಬೆಲ್ಲ ತಿಂದಾರ ಅಣ್ಣಯ್ಯಬೆಲ್ಲದಂಥ ಸುದ್ದಿಯ ತಂದಾರಹಾಲಕ್ಕಿ ಹಾಲಾಗಿ ಬಯಲೆಲ್ಲ ಹಸಿರಾಗಿನಾಡಿಗೆ ಉಸಿರಾಗಿ ನಿಂತಾರದಿನಕರನ ಜೊತೆಯಲ್ಲಿ ಮಧುಕರನ ಬೆಳಕಂತೆಊರಿನ ಹೆಸರ ಬೆಳೆಸ್ಯಾರ ರಚನೆ – ಶ್ರೀ…

  • ಹಾಲಕ್ಕಿ ಜನರು…

    ಹಾಲಕ್ಕಿ ಜನರು ಕಲ್ತಿದ್ ಕಡಿಮೆಬುದ್ದಿಲಿ ದೊಡ್ಡವರೋಕೊಟ್ಟ ಮಾತನು ತಪ್ಪದೆ ಪಾಲಿಸೊಗೋವಿನ ಮನದವರೋಕುಚ್ಲಕ್ಕಿ ಅನ್ನ, ರಾಗಿ ಅಂಬಲಿಗೌಡರ ಮೃಷ್ಟಾನ್ನಮೀನಪಳದಿ ಅನ್ನ, ಒಣಮೀನ ಚಟ್ನಿಇವರಿಗೆ ಬಲುಚೆನ್ನಕರಿಮಣಿ ಸರ, ಪಟ್ಟೆ ಸೀರೆಹೆಣ್ಣಿಗೆ ಶೃಂಗಾರಮೂಲೆ ಕಚ್ಚೆ,ತಲೆಗೊಂದ ಪಂಚೆಗಂಡಿಗೆ ಬಂಗಾರಸೋಮಾ,ಮಂಗು,ಬುದ್ದು,ಬೊಮ್ಮವಾರದೇಸರಲಿ ಮೆರೆದವರೋಹಬ್ಬದ ದಿನದಿ ನೆಂಟರ ಸೇರಿಒಟ್ಟಿಗೆ ನಲಿಯುವರೋಗುಮಟೆ ಪಾಂಗು,ಸುಗ್ಗಿ ಕುಣಿತದಿಸಗ್ಗವ ಕಂಡವರೋತಮ್ಮದೇ ಹಾಡಿಗೆ,ರಾಗವ ಕಟ್ಟಿರಾಷ್ಟ್ರದಿ ನಲಿದವರೋಹಾಲಕ್ಕಿ ಹಾಡು, ವೇಷಭೂಷಣಎಲ್ಲರೂ ಮೆಚ್ಚುವರೋಹಿರಿಯರು ತುಳಿದ ದಾರೀಲಿ ನಡೆಯೇನಮ್ಮನು ಹರಸುವರೋ ಸಾತು ಗೌಡ,ಬಡಗೇರಿ ಅಂಕೋಲಾ

You cannot copy content of this page