ನಮ್ಮಯ ಗೋಕರ್ಣ – ಗುಮಟೆ ಪದ 6 | ಅರುಣ್ ಗೌಡ ಕವನ 2

Posted by

·

ನಮ್ಮಯ ಗೋಕಣ೯

ಪ್ರವಾಸಿ ತಾಣಗಳಲಿ ಇದು ಬಲುವಣ೯.
ರಾವಣನ ಜೊತೆ ಬಂದಿರಬೇಕು ಆ ಕುಂಭಕಣ೯.
ಪ್ರತಿಯೊಂದು ದೇವರಲಿ ಹೊಳೆಯುತಿದೆ ಸುವಣ೯.
ಇದುವೆ ಭಕ್ತರ ತಾಣ ನಮ್ಮಯ ಗೋಕಣ೯.

ಗಜಮುಖನ ಪೂಜೆಯೆ ಎಲ್ಲರಿಗಿಂತ ಮೊದಲು.
ಗಮನ ಸೆಳೆಯುತಿದೆ ಓಂ ಕುಡ್ಲೆಯ ಕಡಲು.
ಮಹಾಬಲ ಭದ್ರಕಾಳಿ ನಮ್ಮ ಕಾಯುತ ಇರಲು.
ನಾವು ದೇವರ ಮಡಿಲು ನಮಗಿಲ್ಲ ದಿಗಿಲು.

ಕರೆಯುತಿಹರು ಇದನು ದಕ್ಷಿಣದ ಕಾಶಿ.
ಎಲ್ಲಿ ನೋಡಿದರಲ್ಲಿ ದೇವತೆಗಳೆ ರಾಶಿ.
ಕೋಟಿ ತೀಥ೯ದ ಸ್ನಾನ ಎಲ್ಲ ಪಾಪಗಳ ವಾಸಿ.
ದೇಶ ವಿದೇಶಿಗಳಿಂದ ಬರುವರು ಗೋಕಣ೯ವ ಅರಸಿ.

ಗಂಗೆ ಹಬ್ಬದ ದಿನ ನಮಗೆ ತುಂಬ ಸಡಗರ.
ಕೃಷ್ಣ ಹುಟ್ಟಿದ ದಿನವು ಭಜನೆಗಳು ನಿರಂತರ.
ಜೀವಕ್ಕೆ ಭಯ ಹೇಳತ್ತಿದೆ ಪಶ್ಚಿಮದ ಸಾಗರ.
ರಜಾ ಸಿಕ್ಕರೆ ಸಾಕು ಹಾಜರಾಗುವನು ನೌಕರ.

ಅರುಣ ಗೌಡ, ಗುಮಟೆ ಪಾಂಗ್ (ಕವನ ಸಂಕಲನ), ನಾಗಮ್ಮ ಪ್ರಕಾಶನ, ಅಂಕೋಲಾ.

ಮಾಹಿತಿ ಸಂಗ್ರಹಣೆ: ಜಗದೀಶ್ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading