Category: ಕವನ
-

ನಮ್ಮ ಪರಿಸರ – ಅಕ್ಷತಾ ಜಗದೀಶ
ಉಸಿರಿಗೆ ಉಸಿರಾದ ವನಸಿರಿಜೀವರಾಶಿಗೆ ವರವಾದ ಐಸಿರಿ…ಮನುಕುಲಕೆ ವರದಾನ ಈ ಧರಣಿವೃಕ್ಷದೇವತೆ ಭೂ ಮಂಡಲದ ರಮಣಿ… ಜೀವಜಲದ ಏಕೈಕ ತಾಣಜೀವಜಗತ್ತಿಗೆ ಅದುವೇ ಪ್ರಾಣ….ಹಸಿರಾಗಿದ್ದರೆ ಪರಿಸರ..ಉಸಿರಾಡುವುದು ಜೀವ ಸಂಕುಲ…. ಧುಮುಕುವ ಜಲಪಾತದ ನೋಟನರ್ತಿಸುವ ಸಾಗರದಲೆಗಳ ಆಟ…ಮನೋಲ್ಲಾಸದ ಪಶ್ಚಿಮ ಘಟ್ಟಕಣ್ಮನ ಸೆಳೆಯುವ ಸಾಲು ಸಾಲು ಬೆಟ್ಟ.. ಎಲ್ಲೆಲ್ಲೂ ಹಸಿರುಡುಗೆ ಉಟ್ಟ ಕಾಡು ಉತ್ತರ ಕನ್ನಡ ಸೊಬಗದು ನೋಡು..ವೃಕ್ಷ ಮಾತೆ ತುಳಸಜ್ಜಿಯ ಕನಸುಪರಿಸರ ಬೆಳೆಸಿ ಮಾಡಬೇಕು ನನಸು… ಪ್ರಕೃತಿಯ ಬೆಳೆಸೋಣ..ಪರಿಸರ ಉಳಿಸೋಣ…ಸುಂದರ ಪರಿಸರ ನಮ್ಮ ಆಶಯ..ಸರ್ವರಿಗೂ ಪರಿಸರ ದಿನದ ಶುಭಾಶಯ…. ✍️ ಅಕ್ಷತಾ…
-

ನೆನಪಿನ ದೋಣಿ | ಅಕ್ಷತಾ ಜಗದೀಶ್ | ಕವನ – 6
ದಶಕಗಳಹಿಂದೆ ಏರಿದ ದೋಣಿನೆನಪಿನಂಗಳದಿ ಮನೆ ಮಾಡಿಬಾಲ್ಯಕ್ಕೊಂದು ಹುರುಪಾಗಿಮರಳಿ ಬಾರದು ಎಂದಾಗಮತ್ತೆ ಮರಳಿ ಕಂಡಿತುಅದೇ.. ನೆನಪಿನ ದೋಣಿ.. ಮಂಜುಗುಣಿ, ಗಂಗಾವಳಿ ನಡುವೆ ಸಂಪರ್ಕ ಕೊಂಡಿಯಾದ ದೋಣಿ ನದಿಯ ನರ್ತನದ ಮೇಲೆ ಸಂತಸದ ಕ್ಷಣಗಳನು…. ಮತ್ತೆ ಹೊತ್ತು ತಂದ ನೆನಪಿನ ದೋಣಿ…. ಸಹ್ಯಾದ್ರಿಯ ಸಾಲುಗಳ ಕೆಳಗೆಹೊಳೆವ ಬಂಗಾರದ ನೀರುಈ ದಡ.. ಆ ದಡ..ಸೇರಿಸುವ ತವಕದಲಿಮರಳಿ ಬಂದಿತು ನೋಡುನೆನಪಿನ ದೋಣಿ… ನೆನಪಿನ ದೋಣಿಯೊಳು ಮರಳಿ ಪಯಣಿಸುತಿಹೆ ಇಂದು ಹಳೆಯ ನೆನಪುಗಳ ಅಲೆ ನದಿಯ ನರ್ತನದೊಳು ಮಿಂದು ಮತ್ತೆ ದಡ ಸೇರಿಸುತಿದೆ ಅದೇ…
-

ಸ್ವರ್ಗ ಸಿರಿಯ ಮಲೆನಾಡು | ಸಾತು ಗೌಡ | ಕವನ – 8
ಮಲೆನಾಡ ಗಿರಿಶಿಖರ ಹರಿವನದಿ ಕಲರವದಜಲಪಾತದ ಸಿರಿ ಸೊಬಗು ಸಾಹಿತ್ಯದಿಹಚ್ಚ ಹಸಿರಿನಕಾಡು ನಿಸರ್ಗ ಸೋಜಿಗದಚೆಲುವು ತುಂಬಿದೆ ತನುಮನದಿ. ಪ್ರಾಣಿಗಳ ನಲಿದಾಟ ಪಕ್ಷಿಗಳಿಂಪಿನ ರಾಗಮೈಮನ ಪುಳಕಿತವು ಸೊಬಗಸವಿಯು.ದಟ್ಟಕಾಡಿನ ಮದ್ಯ ರವಿರಶ್ಮಿಯ ಮಾಟಭೂಲೋಕದ ಸ್ವರ್ಗ ಮಲೆನಾಡಸಿರಿಯು. ಜಗ ಗೆಲ್ಲು ಶಕ್ತಿಯಿದೆ ಕನ್ನಡದ ಮಣ್ಣಲ್ಲಿಓದಿತಿಳಿವಾ ಸಾಹಿತ್ಯ ಚರಿತೆಯನ್ನು.ನಮ್ಮನೆಲ ನಮ್ಮಜಲ ಹಿರಿಮೆಯ ನೆನೆಯುತ್ತಬೆಳಗಿಸುವ ಕನ್ನಡದ ಕೀರ್ತಿಯನ್ನು. ಹಸಿರಿನ ಪರಿಸರವು ಹಳ್ಳಿ ನೆಲದಲ್ಲಿಮುಗ್ದತೆಯ ಗುಣವು ಜನರ ಮನದಲ್ಲಿಸದ್ದು ಗದ್ದಲವಿರದ ಪ್ರಶಾಂತ ಕಡಲುಶಾಂತಿ ಸಹಬಾಳ್ವೆಯ ನೆಲಗಟ್ಟಿನ ಮಡಿಲು ರಚನೆ: ಸಾತುಗೌಡ, ಬಡಗೇರಿ, ಅಂಕೋಲಾ, ಉತ್ತರ ಕನ್ನಡ.
-

ಹಳ್ಳಿಮನೆ | ಸಾತು ಗೌಡ | ಕವನ – 7
ಚಂದದ ಪರಿಸರ ಹಸಿರಿನ ಹಂದರಹಳ್ಳಿಯ ಸೊಬಗಲಿ ಕಾಣುವೆವು.ಮಾತಿಗೆ ತಪ್ಪದ ಮೋಸವ ಅರಿಯದಮುಗ್ದತೆ ಜನರ ನೋಡುವೆವು. ಕಾಂಕ್ರೀಟ್ ಕಾಣದ ಮಣ್ಣಿನ ಗೋಡೆಯಕಟ್ಟಿಗೆ ಹಲಗೆಯ ಮನೆ ಚಂದ.ಎಲ್ಲೆಡೆ ತಂಪು ಕಾಡಿನ ಕಂಪುಹಳ್ಳಿಯ ಚೆಲುವೆ ಬಲುಅಂದ. ಹಳ್ಳಿಯ ಜನತೆಯ ಇಂತಹ ನಿಲಯವುಮರೆಯಾಗಿದೆ ಇಂದು ಎಲ್ಲೆಲ್ಲೂ.ನನ್ನಯ ಮನದಿ ಕಾತರ ಇಂದುಕಾಡಿದೆ ನೆಲೆಸಲು ಕನಸಲ್ಲೂ. ಶುದ್ದನೆ ಗಾಳಿ ಸಮೃದ್ಧ ಬೆಳಕುಸದಾ ಮನಸಿಗೆ ಸಡಗರವು.ಇಂತಹ ಚೆಲುವು ಎಲ್ಲಿದೆ ಹೇಳಿ?ಹಳ್ಳಿಯ ಮನೆಯೇ ಪಾವನವು. ಬಿಸಿಲಿನ ಝಳವ ತಡೆಯುವ ಶಕ್ತಿಯಚಂದದ ಕಟ್ಟಿಗೆ ಹಂದರವು..ಆರೋಗ್ಯದ ಗುಟ್ಟು ಅಡಗಿದೆ ಇಲ್ಲಿಇದುವೇ ದೇವ…
-

ಅನ್ನದಾತ | ಸಾತು ಗೌಡ | ಕವನ – 6
ರೈತ ಜಗದ ಅನ್ನದಾತದೇಶಕನ್ನವ ನೀಡುವಾ.ಚಳಿ ಮಳೆ ಸಹಿಸಿ ನಿತ್ಯದವಸ ಧಾನ್ಯ ಬೆಳೆಯುವಾ. ಗೆಳೆಯರಂತೆ ಎತ್ತು ಎರಡುಹೊಲದ ಉಳುಮೆ ಮಾಡಲು..ಜೊತೆಗೆ ಮಡದಿ ಇರಲು ಸ್ವರ್ಗಹಸಿದಾಗ ತುತ್ತು ನೀಡಲು. ಹಗಲು ರಾತ್ರಿ ಪರಿವೆ ಇಲ್ಲಾದುಡಿತ ಒಂದೆ ಮನದಲಿ.ಲಾಭದಾಸೆ ಮರೆತು ನಲಿವಛಲವ ತೊಟ್ಟು ಗುರಿಯಲಿ. ಸುಖವು ಎಲ್ಲಿ ರೈತಗಿಂದುನಿತ್ಯ ಸುರಿವ ಮಳೆಯಲಿ.ಕೈಗೆ ಬಂದ ಮಳೆಯು ಕೊಚ್ಚಿಹೋಗಿ ಹರಿವ ಹೊಳೆಯಲಿ. ನಂಬಿ ಬಂದ ಹೊಲದ ಕಸುಬಮರೆತು ಬದುಕ ರೈತನು.ಮುಂದೆ ಸುಖದ ಕನಸಹೊತ್ತುನಿತ್ಯ ದುಡಿವ ಅನ್ನದಾತನು. ವಿಕೋಪದಲ್ಲಿ ನಲುಗಿ ನೊಂದರೈತಗಿಂದು ನೆರವು ಬೇಕಿದೆ.ಬೆಳೆದ ಬೆಳೆಗೆ…
-

ಮೀನು ಪೇಟೆ | ಅಕ್ಷತಾ ಜಗದೀಶ್ | ಕವನ – 5
ಜಾತಿ ಮತದ ಭೇದವಿಲ್ಲದೆ ಎಲ್ಲರೂ ಸೇರುವ ತಾಣ..ಅದುವೇ ನಮ್ಮ ಕರಾವಳಿಯಮೀನು ಪೇಟೆಯ ಅಂಗಣ….ವಿವಿಧ ಬಗೆಯ ಮೀನಿನ ಖಾದ್ಯಕರಾವಳಿಗೆ ಬಂದರೆ ಸವಿಯಲು ಸಾಧ್ಯ..ಮೀನೂಟವೇ ನಮಗೆ ಮೃಷ್ಟಾನ್ನ..ಜೊತೆಗಿರಬೇಕು ಕುಚಲಕ್ಕಿ ಅನ್ನ..ಬಂಗುಡೆ, ತಾರ್ಲೆ,ಜಾಲೆ,ಇಸೋಣಮೀನು ಪೇಟೆ ಒಮ್ಮೆ ಸುತ್ತಣ್ಣ..ಅಣ್ಣ ಬಾರೋ, ಅಕ್ಕ ಬಾರೆ ಎಂದು ಕರೆದಾಗಅರಿವಾಗುವುದು ಸಂಬಂಧದ ಸರಮಾಲೆ…ಚಿಪ್ಪಿಕಲ್ಲಿಗೆ ಮಾವಿನಕಾಯಿ ಬೆರಕೆತಾರ್ಲೆ ಮೀನಿಗೆ ಅರಿಶಿನದೆಲೆಯ ಹೊದಿಕೆ…ಕೆಂಡದಲ್ಲಿ ಬೆಂದ ಬಂಗುಡೆ ಮೀನುಬಾಯಲ್ಲಿ ಸುರಿಯುವುದು ನೀರು..ಉಪ್ಪು ನೀರಲ್ಲಿ ಬೆಂದಾಗ ಬೆಳುಂಜೆಮಸಾಲೆಯೊಡನೆ ಬೆರೆತ ಸಮದಾಳೆ…ರವೆಯೊಡನೆ ಹುರಿದ ನೊಗ್ಲು..ಎಲ್ಲಿಯು ಸಿಗದು ಈ ಖಾದ್ಯಕ್ಕಿಂತ ಮಿಗಿಲು….ಮೀನು ಕರಾವಳಿ ಜನರ ಆಹಾರಮೀನೇ…
-

ವೃಕ್ಷ ಮಾತೆ ತುಳಸಿ ಗೌಡ – ಕವನ
ಜಾವದಿ ಕಾಡಿಗೆ ಹೆಜ್ಜೆಯನಿಟ್ಟುನೋವಿನ ವಿಷಯಗಳೆಲ್ಲವ ಬಿಟ್ಟುಸಾವಿರ ಗಿಡವನು ಹರುಷದಿ ನೆಟ್ಟುಭಾವದಿ ಪೊರೆದಳು ಮಮತೆಯ ಕೊಟ್ಟು// ಅಕ್ಷರ ಕಲಿಯದೆ ಪರಿಸರ ಅರಿತುಲಕ್ಷವನಿಟ್ಟಲು ಗಿಡಗಳ ಕುರಿತುರಕ್ಷಿಸಿ ವನವನು ಜೊತೆಯಲಿ ಬೆರೆತುಶಿಕ್ಷಿತ ಮಂದಿಯು ತಿಳಿದರೆ ಒಳಿತು// ಮೇದಿನಿಯಂತಹ ಸಹನೆಯ ಹೆಣ್ಣು ಮೋದದಿ ಅಗೆದಳು ಹೊನ್ನಿನ ಮಣ್ಣು ಖೇದವು ಕಾಣದ ಮಮತೆಯ ಕಣ್ಣುಮಾದರಿಯಾಗಿಹ ದೇಶದ ಹೊನ್ನು//ಹಳ್ಳಿಯ ಮಹಿಳೆಯ ಸಾಧನೆ ನೋಡಿದಿಲ್ಲಿಯವರೆಗೂ ಸುದ್ದಿಯ ಮಾಡಿಮೆಲ್ಲಗೆ ನುಡಿಯುವ ಭಾಷೆಯ ಮೋಡಿಬಲ್ಲಿದರೊಂದಿಗೆ ಜೊತೆಯಲಿ ಕೂಡಿ//ಮತಿಯನು ಚಂಚಲ ಗೊಳಿಸಲು ಇಲ್ಲ ಪಥವನು ಎಂದಿಗೂ ಬದಲಿಸಲಿಲ್ಲಸತತವು ರಕ್ಷಿಸಿ ಗಿಡಗಳನ್ನೆಲ್ಲಲತೆಯನು ವೃಕ್ಷಕೆ…
-

ಮರಳಿ ಬಾ ಪುಟಾಣಿ ರೈಲು
ದಶಕದ ಹಿಂದೆ ಸಂಚರಿಸಿತ್ತುಕಾರವಾರ ಕಡಲ ತೀರದಲ್ಲಿಪುಟಾಣಿಗಳ ಪ್ರವಾಸಿ ರೈಲು….ಬಾಲ್ಯದ ನೆನಪುಗಳ ಹೊತ್ತ ರೈಲುಸಂಚರಿಸಿತ್ತು ಕಡಲ ಕಿನಾರೆಯ ಮೇಲೆ…ಗಾಳಿ ಮರಗಳ ನಡುವಿನಲ್ಲಿಟ್ಯಾಗೋರ್ ಕಡಲಿನ ಅಂಚಿನಲ್ಲಿ..ಮುಸ್ಸಂಜೆ ಸೇರುತ್ತಿದ್ದ ಜನಸ್ತೋಮಪುಟಾಣಿ ರೈಲಿನಲ್ಲಿ ಮಕ್ಕಳ ಸಂಗಮ…ಚಿಣ್ಣರ ಹೊತ್ತು ಸಾಗುತ್ತಿದ್ದ ರೈಲುಚಿಲಿಪಿಲಿ ನಾದದಲ್ಲಿ ತಿರುಗುತ್ತಿತ್ತು ಕಡಲಂಚಲ್ಲಿ ಒಂದು ಮೈಲು….ದಶಕಗಳ ಹಿಂದಿನ ಮಧುರ ನೆನಪುಬಾಲ್ಯವು ಇಗೊಂದು ಮರಳದ ಕನಸು..ಕಡಲ ಕೊರೆತಕ್ಕೆ ಸಿಲುಕಿ ರೈಲು ಸ್ಥಗಿತಪುಟಾಣಿ ರೈಲೇ!! ನಿನ್ನ ಮತ್ತೆ ಕಾಣುವ ಇಂಗಿತ…ಸುಮಧುರ ನೆನಪಿನ ಪುಟಾಣಿ ರೈಲುಮರಳಿ ಮತ್ತೇ ಬರುವೇಯಾ ನೀನು.?ಇಂದಿನ ಚಿಣ್ಣರಿಗೂ ದೊರಕಲಿ ನಿನ್ನೋಡನಾಟ…ಬಾಲ್ಯದ ದಿನಗಳೇ…
-

ಉತ್ತರ ಕನ್ನಡ ಕಡಲತೀರ | ಕವನ | ಅಕ್ಷತಾ ಜಗದೀಶ – 4
ನಿಸರ್ಗದ ಸೃಷ್ಠಿಗೆ ಸರಿಸಮನಾರಿಲ್ಲಸಹಜ ಸೌಂದರ್ಯಕ್ಕೆ ತಲೆಬಾಗದವರಿಲ್ಲಪ್ರಕೃತಿಯ ಕೊಡುಗೆ ಉತ್ತರ ಕನ್ನಡದ ತಾಣ…ಕಣ್ಣರಳಿಸಿ ನೋಡಿದಷ್ಟು ದೂರಕಡಲಿನ ಮೇಲೆ ನರ್ತನ ಮಾಡುತ್ತ ಸಾಗುತಿದೆ …ಹಾಯಿದೋಣಿಯ ಪ್ರಯಾಣ…ನಾಮಹಲವಿದ್ದರೂ ತೀರಕೆ..ಸೇರುವ ಮಡಿಲೊಂದೆ ತಾನೆ…ಎಲ್ಲೋ ಹುಟ್ಟಿ ಕಾನನದೊಳು ಹರಿದುಅದೆಷ್ಟೋ ಜಲಧಾರೆಗಳಾಗಿಕಣ್ಮನಸೆಳೆವ ಜೀವಜಲ ಈ ತೊರೆ..ಶರಾವತಿ, ಬೇಡ್ತಿ, ಗಂಗಾವಳಿಅಘನಾಶಿನಿ ,ಕಾಳಿ ನದಿಗಳಾಗಿ ಸೇರುವರು ಅರಬ್ಬೀ ಸಮುದ್ರವೆಂಬಅಗಾಧ ಸಾಗರದ ಮಡಿಲು..ಸಹ್ಯಾದ್ರಿಯ ಸಾಲುಗಳು ಒಂದೆಡೆ..ಓಂ ಕಡಲತೀರ, ಟ್ಯಾಗೋರ್ ಕಡಲತೀರ, ನದಿಭಾಗ ಕಡಲತೀರ,ಮುರುಡೇಶ್ವರ ಕಡಲತೀರ…ಹಲವು ನಾಮಗಳೊಂದಿಗೆ ಜನ್ಮತಳಿದಕಡಲತೀರಗಳು ಇನ್ನೊಂದೆಡೆ…ವರ್ಣನೆಗೆ ನಿಲುಕದು ಕಡಲ ಸೊಬಗು..ಉತ್ತರ ಕನ್ನಡದ ಸೌಂದರ್ಯಕ್ಕೆಕಡಲತೀರಗಳೇ ನೀಡಿವೆ ಸುಂದರ ಮೆರಗು………
