ನಮ್ಮ ಬಗ್ಗೆ

ಸುಗ್ಗಿ ಸಂಪದ ಜಾಲತಾಣವು ಒಂದೇ ಗುರಿಯನ್ನು ಹೊಂದಿದ ತಂಡವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಕಲೆಹಾಕಿ, ಕ್ರೂಡೀಕರಿಸಿ ಓದುಗರಿಗೆ ಹಾಗು ನಾಡ ಜನತೆಗೆ ಉತ್ತರ ಕನ್ನಡದ ಸೊಗಡನ್ನು, ಹಿರಿಮೆಯನ್ನು ಸಾರುವುದು ಸುಗ್ಗಿ ಸಂಪದ ಜಾಲತಾಣದ ಮುಖ್ಯ ಉದ್ದೇಶವಾಗಿದೆ.

ಈ ವೆಬ್ ಸೈಟ್ ಬಗೆಗಿನ ನಿಮ್ಮ ಅನಿಸಿಕೆ ಹಾಗು ಉತ್ತರ ಕನ್ನಡ ಜಿಲ್ಲೆಗೆ ಸಂಭಂದಿಸಿದ ಕವನ, ಲೇಖನಗಳು ಹಾಗು ಮಾಹಿತಿಯನ್ನು (ಸಂಬಂಧಿತ ಛಾಯಾಚಿತ್ರಗಳ ಸಮೇತ) suggisampada@gmail.com ಇಮೇಲ್ ವಿಳಾಸಕ್ಕೆ ಕಳುಹಿಸಿ ಮತ್ತು ನಿಮ್ಮ ಮಾಹಿತಿ ಸೂಕ್ತವೆನಿಸಿದರೆ ನಿಮ್ಮ ಹೆಸರಿನ ಜೊತೆ ಮಾಹಿತಿಯನ್ನು ಸುಗ್ಗಿ ಸಂಪದ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಕ್ರೂಡಿಕರಿಸಲು ಹಾಗೂ ಈ ಮೂಲಕ ನಮ್ಮ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಲು ನಮ್ಮೊಂದಿಗೆ ಕೈಜೋಡಿಸಿ.

ಅನಿಸಿಕೆಗಳು

ಉತ್ತರ ಕನ್ನಡ ಜಿಲ್ಲೆಯ ಉಪಯುಕ್ತ ಮಾಹಿತಿಯನ್ನು ಹುಡುಕಲು ಕಳೆಯುತ್ತಿದ್ದ ನನ್ನ ಅಮೂಲ್ಯ ಸಮಯವನ್ನು ಕಡಿಮೆ ಮಾಡಿರುವುದಕ್ಕೆ ಸುಗ್ಗಿ ಸಂಪದ ತಂಡಕ್ಕೆ ನನ್ನ ಅನಂತ ಧನ್ಯವಾದಗಳು.”

ಡಾ. ಜಗದೀಶ್ ಜಿ. (PhD), ಧಾರವಾಡ

ನಮ್ಮ ಜಿಲ್ಲೆಯ ಬಗ್ಗೆ ಇಸ್ಟೊಂದು ನಿಖರ ಮಾಹಿತಿಗಳನ್ನು ಒಂದೆಡೆ ಕಲೆಹಾಕಿರುವ ನಿಮ್ಮ ತಾಳ್ಮೆಗೆ ತುಂಬಾ ಧ್ಯವಾದಗಳು, ನಿಮ್ಮ ಈ ಕಾರ್ಯದಿಂದ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಸಿಗುತ್ತಿದೆ.”

ಮಹದೇವ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರು

Suggisampada is a website which invokes the spritual ideas among the people of uttara kannada district through publishing history, religious performs and mythological background of renowned temples. This help the young and old alike to keep their traditions and culture and transfer moral values to the next generation. It’s a good attempt to make us aware of devine beauty of powerful dieties of our district. I wish the website would get all the support from the public to keep up our high spirits and be ethical through these articles.”

Vinod Hegde Head Master, Janata Vidyalaya, Kulave Baroor Tq Sirsi.

ಉತ್ತರ ಕನ್ನಡ ಜಿಲ್ಲೆಯ, ಸಂಪ್ರದಾಯ, ಆಹಾರ, ಹಬ್ಬ , ಪ್ರವಾಸಿ ತಾಣಗಳು, ಕಲೆ, ಹಾಗೂ ಕಲೆಯ ಸೊಡಗನ್ನು ಸಿಗ್ಗಿ ಸಂಪದ ತಾಣದ ಮೂಲಕ ಓದುಗರಿಗೆ ತುಂಬಾ ಅದ್ಬುತವಾದ ವಿಷಯವನ್ನು ಹಂಚಿ ಕೊಳ್ಳುತ್ತಿರುವುದುನೋಡಿ ಬಹಳ ಸಂತೋಷವಾಯಿತು, ಈ ಉಪಯುಕ್ತ ಮಾಹಿತಿಗಾಗಿ ಸುಗ್ಗಿ ತಂಡಕ್ಕೆ ಶುಭ ಹಾರೈಕೆ.”

Dr. Maheshbabu N Assistant Professor Dept of PG Studies and Research in Psychology SDM College (Autonomous), Ujire, Dakshina kannada.

Happy to find such a resourceful website which is an ‘one stop solution’ for all the information that one wants to seek about Utthar kannada..”

Raghavendra Banti, KAS Aspirant, MA in Political Science, Belgaum.

ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿಯ ಅನಾವರಣ ಜೊತೆಗೆ ಅಲ್ಲಿಯ ಪರಂಪರೆ, ಇತಿಹಾಸ, ಸಾಹಿತ್ಯ ಹಾಗೂ ಕಲೆಯ ಬಗ್ಗೆ ಕುತೂಹಲಕಾರಿ ಮತ್ತು ಜ್ಞಾನ ಭಂಡಾರದ ಆಗರವಾಗಿ ಸುಗ್ಗಿಸಂಪದವು ಪ್ರತಿಯೊಬ್ಬ ಕನ್ನಡಿಗರಿಗೂ ದಾರಿದೀಪವಾಗಿದೆ. ಉತ್ತರ ಕರ್ನಾಟಕದವನಾದ ನನಗೆ ಉತ್ತರ ಕನ್ನಡ ಜಿಲ್ಲೆಯಲ್ಲಿಯ ದೈವಿಕ ಸ್ಥಾನಗಳು ಅಲ್ಲಿಯ ಕಲೆ ಹಾಗೂ ಸಂಸ್ಕೃತಿಯನ್ನು ಅರಿಯಲು ಈ ವೇದಿಕೆಯು ಕೈಗನ್ನಡಿಯಾಗಿದೆ. ಕರ್ನಾಟಕದಲ್ಲಿ ಎಲ್ಲರ ಮನೆ ಮನಸುಗಳನ್ನು ಬೆಸೆಯುವ ಕಾರ್ಯ ಈ ಸುದ್ದಿ ಸಂಪದ ಜಾಲತಾಣದಿಂದ ಸಾಧ್ಯವಾಗಿದೆ ಎಂಬುದು ನನ್ನ ಅಭಿಪ್ರಾಯ “.. ಸುಗ್ಗಿ ಸಂಪದ ತಂಡಕ್ಕೆ ಶುಭವಾಗಲಿ….”

ಸಂತೋಷ್ ನೀಲಣ್ಣವರ ಸಹಾಯಕ ಪ್ರಾಧ್ಯಾಪಕರುರಾಜ್ಯಶಾಸ್ತ್ರ ವಿಭಾಗ, ಕೆ.ಆರ್.ಸಿ.ಇ.ಎಸ್.ಪದವಿ ಕಾಲೇಜ್, ಬೈಲಹೊಂಗಲ.

ಅತಿ ಅದ್ಭುತವಾಗಿ ಮೂಡಿಬಂದಿದೆ. ನಾಡಿನ ನಾನಾ ಭಾಗದ ಜನರಿಗೆ ಇದೊಂದು ಕೈಪಿಡಿ ರೂಪದ ಕೈಗನ್ನಡಿ, ಎಲ್ಲರಿಗೂ ತಮ್ಮ ಪ್ರಯತ್ನ ಸಹಕಾರಿಯಾಗಲಿದೆ ಎಂಬುದು ನನ್ನ ಭಾವನೆ. ನಿಮ್ಮ ಪ್ರಯತ್ನಕ್ಕೆ ಒಂದು ಸಲಾಂ 🙏🏽💐”

ಸುಕ್ಷಂತ್ ಪಾಟೀಲ, ಸಹಾಯಕ ಪ್ರಾಧ್ಯಾಪಕರು, ದೈಹಿಕ ಶಿಕ್ಷಣ ವಿಭಾಗ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ.

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ವಿಷಯ ಹಾಗೂ ಮಾಹಿತಿಯನ್ನು ಕನ್ನಡದಲ್ಲಿಯೇ ಒದಗಿಸುತ್ತಿರುವ ಮತ್ತು ಬರಹಗಾರರಿಗೂ ಉತ್ತಮ ವೇದಿಕೆ ಒದಗಿಸಿರುವ ಸುಗ್ಗಿ ಸಂಪದ ಜಾಲತಾಣದ ತಂಡಕ್ಕೆ ನನ್ನ ಧನ್ಯವಾದಗಳು.”

ಅಕ್ಷತಾ ಜಗದೀಶ,(ಹವ್ಯಾಸಿ ಬರಹಗಾರರು)ಹಿಂದಿ ಶಿಕ್ಷಕರು,ಜೆ ಎಸ್ ಎಸ್ ಪಬ್ಲಿಕ್ ಸ್ಕೂಲ್ ಧಾರವಾಡ.

ಸುಗ್ಗಿ ಸಂಪದದಲ್ಲಿ ಎಲ್ಲ ವಿಷಯಗಳು ಮತ್ತು ಮಾಹಿತಿಗಳು ತುಂಬಾ ಚೆನ್ನಾಗಿ ಬರುತ್ತಿದೆ. ಆ್ಯಪ್ ಮಾಡಿದ್ರೆ ತುಂಬಾ ಒಳ್ಳೆದು. ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ.”

ನಾಗೇಶ ಜಿ., ಉದ್ಯೋಗಿ. ಮೋಲೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು.

ಬರೆಯುವ ಮನಕೆ ಹುರಿದುಂಬಿ, ಅಕ್ಷರ ದಾಹಕ್ಕೆ ನೀರೆರೆದು, ಹಂಬಲಿಸಿ ಹೊಸದನ್ನು ಕಲಿಯುವ ಇಚ್ಛೆಯ ಪೂರೈಸಿ, ಪದಗಳ ಪೋಣಿಸಲು ಪರಿಚಯವಾದ ಸುಗ್ಗಿ ಸಂಪದವೇ, ನಿನ್ನ ಮೇಲಿನ ಅಭಿಪ್ರಾಯಕ್ಕೆ ಪ್ರಾಯವ ಬಂದುಗರಿ ಬಿಚ್ಚಿ ಹಾರುತಿದೆ ಅಕ್ಷರಗಳಲ್ಲಿ ನಿನ್ನ ವರ್ಣಿಸಲು…

ಮಾಳವಿಕಾ ಎಮ್., ಎಮ್.ಎ.(ಸಾರ್ವಜನಿಕ ಆಡಳಿತ), ಕವಯಿತ್ರಿ, ಕಲಬುರಗಿ.

ಉತ್ತರ ಕನ್ನಡ ಜಿಲ್ಲೆಯು ಐತಿಹಾಸಿಕ ಸ್ಥಳವಾಗಿದ್ದು, ಇಂತಹ ಉತ್ತಮವಾದ ವಿಚಾರಗಳ ಬಗ್ಗೆ ತಿಳಿಸುವ ನಿಮ್ಮ ಈ ಜಾಲತಾಣವು ನಿಜಕ್ಕೂ ಶ್ಲಾಘನೀಯವಾದದ್ದು. ಇಂತಹ ವಿಚಾರಧಾರೆಗಳು ಇನ್ನಷ್ಟು ಪ್ರಕಟವಾಗಬೇಕು. ಇನ್ನಷ್ಟು ಜನರಿಗೆ ತಲುಪುವಂತಾಗಬೇಕು ಎಂದು ಆಶಿಸುತ್ತೇನೆ.”

ಚೈತ್ರ ನಾಯ್ಕ, ಎಂ.ಎ.(ರಾಜ್ಯಶಾಸ್ತ್ರ) ಬಿ.ಎಡ್. ಶಿರಸಿ.

ಜಗಕ್ಕೆಲ್ಲ ಜನಮನದಿಂದ ದೂರವಾಗಿರುವ ನಮ್ಮ ಜಿಲ್ಲೆಯ ಸಂಸ್ಕೃತಿ ಮತ್ತು ಕಲೆಯನ್ನು ಪರಿಚಯಿಸುವ ಮಾಹಿತಿ ಕಣಜ……..🙏

Divya Gouda, MSc (Physics), Honnavara, Uttara Kannada.

ಉತ್ತರ ಕನ್ನಡ ಜಿಲ್ಲೆಯ ಸುತ್ತ ಮುತ್ತಲಿನ ಪ್ರವಾಸಿ ತಾಣವನ್ನು ಹಾಗೂ ಅಲ್ಲಿಯ ಕಲೆಯ ಮಾಹಿತಿಯನ್ನು ಸುಲಭವಾಗಿ ಎಲ್ಲರಿಗೂ ದೊರೆಯುವಂತೆ ಮಾಡಿದ್ದಿರಿ ಅದರಂತೆ ಸುಗ್ಗಿ ಸಂಪದ ತಾಣದ ಹೆಸರು ಕೂಡ ಅಷ್ಟೆ ಸುಂದರವಾಗಿದೆ… ಜಿಲ್ಲೆಯ ಎಲ್ಲಾ ಮಾಹಿತಿಯನ್ನು ಒದಗಿಸಲು ಶ್ರಮಿಸುತ್ತಿರುವ ಸುಗ್ಗಿ ಸಂಪದ ತಂಡಕ್ಕೆ ಶುಭ ಹಾರೈಕೆಗಳು… 🙏💐”

Sapna Karabashettar, Proffetional yoga therapist, Drugless therapist and Numerlogist, Dandeli.

🙏ಸುಗ್ಗಿ ಎಂಬುದೇ ಒಂದು ಸಂಭ್ರಮ… ಸಾಹಿತ್ಯಕ ಸಂಪತ್ತಿನ ಸಂಭ್ರಮವೇ ಈ “ಸುಗ್ಗಿ ಸಂಪದ”. ಉತ್ತರ ಕನ್ನಡ ಜಿಲ್ಲೆ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯನ್ನು ಒಳಗೊಂಡ ಒಂದು ವಿಶಿಷ್ಟವಾದ ಭೋಗೋಳಿಕ ಸೌಂದರ್ಯವನ್ನು ಹೊಂದಿರುವ ಜಿಲ್ಲೆ..! ಈ ಜಿಲ್ಲೆ ಪ್ರಾಕೃತಿಕ ಸೌಂದರ್ಯದ ಜೊತೆಗೆ ಸಾಹಿತ್ಯಕ ಶ್ರೀಮಂತಿಕೆಯನ್ನು ಹೊಂದಿದ್ದು… ಎಷ್ಟೊ ಐತಿಹಾಸಿಕ ಸ್ಥಳಗಳ.. ಪ್ರವಾಸಿ ತಾಣಗಳ.. ಜನ-ಜೀವನ.. ಆಚಾರ-ವಿಚಾರ… ಆಹಾರ ಉಡುಗೆ-ತೊಡುಗೆ.. ಹಬ್ಬ- ಹರಿದಿನ… ಸಾಂಸ್ಕೃತಿಕ ಸಡಗರ ಎಲ್ಲವನ್ನು ಒಂದೇ ಸೂರಿನಡಿ ಕಲೆಹಾಕಿ ಉಣ ಬಡಿಸುತ್ತಿರುವ ಉತ್ಸಾಹಿ ಸಹೃದಯ ಸಮಾನಮನಸ್ಕರ ಸುಗ್ಗಿ ಸಂಪದ ಬಳಗಕ್ಕೆ ಹೃದಯದ ಪೂರ್ವಕ ವಂದನೆಗಳು.. ದೇಶ ಸುತ್ತು ಕೋಶ ಓದು ಎನ್ನುವ ಹಾಗೆ… ಉತ್ತರ ಕನ್ನಡ ಜಿಲ್ಲೆ ಸುತ್ತಲು ಅಗದೇ ಇದ್ದವರು ಸುಗ್ಗಿ ಸಂಪದ ಓದಿ ಅರಿತುಕೊಳ್ಳಬಹುದು. ಅರಿತುಕೊಂಡವರು ಜಿಲ್ಲೆಯನ್ನು ಸುತ್ತಿ ಸಂಭ್ರಮಿಸಬಹುದು. ಜಿಲ್ಲೆಯ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಅಂಗೈಯಲ್ಲೇ ನೀಡುತ್ತಿರುವ ಶ್ಲಾಘನೀಯವಾದ “ಸುಗ್ಗಿ ಸಂಪದ” website ಗೆ ಶುಭ ಹಾರೈಕೆಗಳು.

ಬಾಲಕೃಷ್ಣ ದೇವನಮನೆ, ಬೆಳಂಬಾರ, ಅಂಕೋಲಾ.

You cannot copy content of this page