ಮೀನು ಪೇಟೆ | ಅಕ್ಷತಾ ಜಗದೀಶ್ | ಕವನ – 5

Posted by

·

ಜಾತಿ ಮತದ ಭೇದವಿಲ್ಲದೆ 
ಎಲ್ಲರೂ ಸೇರುವ ತಾಣ..
ಅದುವೇ ನಮ್ಮ ಕರಾವಳಿಯ
ಮೀನು ಪೇಟೆಯ ಅಂಗಣ....

ವಿವಿಧ ಬಗೆಯ ‌ಮೀನಿನ‌‌ ಖಾದ್ಯ
ಕರಾವಳಿಗೆ‌ ಬಂದರೆ ಸವಿಯಲು‌ ಸಾಧ್ಯ..
ಮೀನೂಟವೇ ನಮಗೆ ಮೃಷ್ಟಾನ್ನ..
ಜೊತೆಗಿರಬೇಕು ಕುಚಲಕ್ಕಿ ಅನ್ನ..

ಬಂಗುಡೆ, ತಾರ್ಲೆ,ಜಾಲೆ,ಇಸೋಣ
ಮೀನು ಪೇಟೆ ಒಮ್ಮೆ ಸುತ್ತಣ್ಣ..
ಅಣ್ಣ ಬಾರೋ, ಅಕ್ಕ ಬಾರೆ ಎಂದು ಕರೆದಾಗ
ಅರಿವಾಗುವುದು ಸಂಬಂಧದ ಸರಮಾಲೆ...

ಚಿಪ್ಪಿಕಲ್ಲಿಗೆ ಮಾವಿನಕಾಯಿ ಬೆರಕೆ
ತಾರ್ಲೆ ಮೀನಿಗೆ ಅರಿಶಿನದೆಲೆಯ ಹೊದಿಕೆ...
ಕೆಂಡದಲ್ಲಿ ಬೆಂದ ಬಂಗುಡೆ ಮೀನು
ಬಾಯಲ್ಲಿ ಸುರಿಯುವುದು ನೀರು..

ಉಪ್ಪು ನೀರಲ್ಲಿ ಬೆಂದಾಗ ಬೆಳುಂಜೆ
ಮಸಾಲೆಯೊಡನೆ‌ ಬೆರೆತ ಸಮದಾಳೆ...
ರವೆಯೊಡನೆ ಹುರಿದ ನೊಗ್ಲು..
ಎಲ್ಲಿಯು ಸಿಗದು ಈ ಖಾದ್ಯಕ್ಕಿಂತ ಮಿಗಿಲು....

ಮೀನು ಕರಾವಳಿ ಜನರ ಆಹಾರ
ಮೀನೇ ಕೆಲವರಿಗೆ ಜೀವನಕ್ಕಾಧಾರ..
ಕರಾವಳಿಯಲ್ಲಿ ಎಂದೆಂದು ಮೀನಿನ ಭರಾಟೆ...
ಸವಿಯ ಬಯಸಿದರೆ ಸುತ್ತ ಬನ್ನಿ
ನಮ್ಮ ಕರಾವಳಿ ಮೀನು ಪೇಟೆ.....

ರಚನೆ: ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading