ದಶಕದ ಹಿಂದೆ ಸಂಚರಿಸಿತ್ತು
ಕಾರವಾರ ಕಡಲ ತೀರದಲ್ಲಿ
ಪುಟಾಣಿಗಳ ಪ್ರವಾಸಿ ರೈಲು....
ಬಾಲ್ಯದ ನೆನಪುಗಳ ಹೊತ್ತ ರೈಲು
ಸಂಚರಿಸಿತ್ತು ಕಡಲ ಕಿನಾರೆಯ ಮೇಲೆ...
ಗಾಳಿ ಮರಗಳ ನಡುವಿನಲ್ಲಿ
ಟ್ಯಾಗೋರ್ ಕಡಲಿನ ಅಂಚಿನಲ್ಲಿ..
ಮುಸ್ಸಂಜೆ ಸೇರುತ್ತಿದ್ದ ಜನಸ್ತೋಮ
ಪುಟಾಣಿ ರೈಲಿನಲ್ಲಿ ಮಕ್ಕಳ ಸಂಗಮ...
ಚಿಣ್ಣರ ಹೊತ್ತು ಸಾಗುತ್ತಿದ್ದ ರೈಲು
ಚಿಲಿಪಿಲಿ ನಾದದಲ್ಲಿ ತಿರುಗುತ್ತಿತ್ತು
ಕಡಲಂಚಲ್ಲಿ ಒಂದು ಮೈಲು....
ದಶಕಗಳ ಹಿಂದಿನ ಮಧುರ ನೆನಪು
ಬಾಲ್ಯವು ಇಗೊಂದು ಮರಳದ ಕನಸು..
ಕಡಲ ಕೊರೆತಕ್ಕೆ ಸಿಲುಕಿ ರೈಲು ಸ್ಥಗಿತ
ಪುಟಾಣಿ ರೈಲೇ!! ನಿನ್ನ ಮತ್ತೆ ಕಾಣುವ ಇಂಗಿತ...
ಸುಮಧುರ ನೆನಪಿನ ಪುಟಾಣಿ ರೈಲು
ಮರಳಿ ಮತ್ತೇ ಬರುವೇಯಾ ನೀನು.?
ಇಂದಿನ ಚಿಣ್ಣರಿಗೂ ದೊರಕಲಿ ನಿನ್ನೋಡನಾಟ...
ಬಾಲ್ಯದ ದಿನಗಳೇ ಕಲ್ಪನೆಗೂ ಮೀರಿದ ಹಾರಾಟ...
ಟ್ಯಾಗೋರ್ ಕಡಲ ತೀರದಲಿ ಮತ್ತೆ ಮೊಳಗಲಿ
ಪುಟಾಣಿ ರೈಲಿನ ಕಲರವ...
ಮರಳಿ ಸ್ವಾಗತಿಸಲು ನಡೆಯಲಿ ಪುಟಾಣಿ ರೈಲಿನ ಚಿಂತನೆ..
ಬಾಲ್ಯದ ನೆನಪಿನ ಸಾರಥಿಗೆ
ಇದೇ ನಮ್ಮ ಪ್ರಾರ್ಥನೆ....

ರಚನೆ: ಅಕ್ಷತಾ ಜಗದೀಶ್ (ಸಮಯಾ)


Leave a Reply