ಹಳ್ಳಿಮನೆ | ಸಾತು ಗೌಡ | ಕವನ – 7

Posted by

·

ಚಂದದ ಪರಿಸರ ಹಸಿರಿನ ಹಂದರ
ಹಳ್ಳಿಯ ಸೊಬಗಲಿ ಕಾಣುವೆವು.
ಮಾತಿಗೆ ತಪ್ಪದ ಮೋಸವ ಅರಿಯದ
ಮುಗ್ದತೆ ಜನರ ನೋಡುವೆವು.

ಕಾಂಕ್ರೀಟ್ ಕಾಣದ ಮಣ್ಣಿನ ಗೋಡೆಯ
ಕಟ್ಟಿಗೆ ಹಲಗೆಯ ಮನೆ ಚಂದ.
ಎಲ್ಲೆಡೆ ತಂಪು ಕಾಡಿನ ಕಂಪು
ಹಳ್ಳಿಯ ಚೆಲುವೆ ಬಲುಅಂದ.

ಹಳ್ಳಿಯ ಜನತೆಯ ಇಂತಹ ನಿಲಯವು
ಮರೆಯಾಗಿದೆ ಇಂದು ಎಲ್ಲೆಲ್ಲೂ.
ನನ್ನಯ ಮನದಿ ಕಾತರ ಇಂದು
ಕಾಡಿದೆ ನೆಲೆಸಲು ಕನಸಲ್ಲೂ.

ಶುದ್ದನೆ ಗಾಳಿ ಸಮೃದ್ಧ ಬೆಳಕು
ಸದಾ ಮನಸಿಗೆ ಸಡಗರವು.
ಇಂತಹ ಚೆಲುವು ಎಲ್ಲಿದೆ ಹೇಳಿ?
ಹಳ್ಳಿಯ ಮನೆಯೇ ಪಾವನವು.

ಬಿಸಿಲಿನ ಝಳವ ತಡೆಯುವ ಶಕ್ತಿಯ
ಚಂದದ ಕಟ್ಟಿಗೆ ಹಂದರವು..
ಆರೋಗ್ಯದ ಗುಟ್ಟು ಅಡಗಿದೆ ಇಲ್ಲಿ
ಇದುವೇ ದೇವ ಮಂದಿರವು.

ರಚನೆ: ಸಾತುಗೌಡ ಬಡಗೇರಿ, ಅಂಕೋಲಾ, ಉತ್ತರ ಕನ್ನಡ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading