ರೈತ ಜಗದ ಅನ್ನದಾತ
ದೇಶಕನ್ನವ ನೀಡುವಾ.
ಚಳಿ ಮಳೆ ಸಹಿಸಿ ನಿತ್ಯ
ದವಸ ಧಾನ್ಯ ಬೆಳೆಯುವಾ.
ಗೆಳೆಯರಂತೆ ಎತ್ತು ಎರಡು
ಹೊಲದ ಉಳುಮೆ ಮಾಡಲು..
ಜೊತೆಗೆ ಮಡದಿ ಇರಲು ಸ್ವರ್ಗ
ಹಸಿದಾಗ ತುತ್ತು ನೀಡಲು.
ಹಗಲು ರಾತ್ರಿ ಪರಿವೆ ಇಲ್ಲಾ
ದುಡಿತ ಒಂದೆ ಮನದಲಿ.
ಲಾಭದಾಸೆ ಮರೆತು ನಲಿವ
ಛಲವ ತೊಟ್ಟು ಗುರಿಯಲಿ.
ಸುಖವು ಎಲ್ಲಿ ರೈತಗಿಂದು
ನಿತ್ಯ ಸುರಿವ ಮಳೆಯಲಿ.
ಕೈಗೆ ಬಂದ ಮಳೆಯು ಕೊಚ್ಚಿ
ಹೋಗಿ ಹರಿವ ಹೊಳೆಯಲಿ.
ನಂಬಿ ಬಂದ ಹೊಲದ ಕಸುಬ
ಮರೆತು ಬದುಕ ರೈತನು.
ಮುಂದೆ ಸುಖದ ಕನಸಹೊತ್ತು
ನಿತ್ಯ ದುಡಿವ ಅನ್ನದಾತನು.
ವಿಕೋಪದಲ್ಲಿ ನಲುಗಿ ನೊಂದ
ರೈತಗಿಂದು ನೆರವು ಬೇಕಿದೆ.
ಬೆಳೆದ ಬೆಳೆಗೆ ಬೆಲೆಯ ನೀಡಿ
ಹಿತವ ಕಾಯ ಬೇಕಿದೆ.
ರಚನೆ: ಸಾತುಗೌಡ ಬಡಗೇರಿ, ಅಂಕೋಲಾ, ಉ.ಕ.


Leave a Reply