ನೆನಪಿನ ದೋಣಿ | ಅಕ್ಷತಾ ಜಗದೀಶ್ | ಕವನ – 6

Posted by

·

ದಶಕಗಳಹಿಂದೆ ಏರಿದ ದೋಣಿ
ನೆನಪಿನಂಗಳದಿ ಮನೆ ಮಾಡಿ
ಬಾಲ್ಯಕ್ಕೊಂದು ಹುರುಪಾಗಿ
ಮರಳಿ ಬಾರದು ಎಂದಾಗ
ಮತ್ತೆ ಮರಳಿ ಕಂಡಿತು
ಅದೇ.. ನೆನಪಿನ ದೋಣಿ..

ಮಂಜುಗುಣಿ, ಗಂಗಾವಳಿ ನಡುವೆ
ಸಂಪರ್ಕ ಕೊಂಡಿಯಾದ ದೋಣಿ
ನದಿಯ ನರ್ತನದ ಮೇಲೆ
ಸಂತಸದ ಕ್ಷಣಗಳನು….
ಮತ್ತೆ ಹೊತ್ತು‌ ತಂದ
ನೆನಪಿನ ದೋಣಿ….

ಸಹ್ಯಾದ್ರಿಯ ಸಾಲುಗಳ ಕೆಳಗೆ
ಹೊಳೆವ ಬಂಗಾರದ ನೀರು
ಈ ದಡ.. ಆ ದಡ..
ಸೇರಿಸುವ ತವಕದಲಿ
ಮರಳಿ ಬಂದಿತು ನೋಡು
ನೆನಪಿನ ದೋಣಿ…

ನೆನಪಿನ ದೋಣಿಯೊಳು
ಮರಳಿ ಪಯಣಿಸುತಿಹೆ ಇಂದು
ಹಳೆಯ ನೆನಪುಗಳ ಅಲೆ
ನದಿಯ ನರ್ತನದೊಳು ಮಿಂದು
ಮತ್ತೆ ದಡ ಸೇರಿಸುತಿದೆ
ಅದೇ ನೆನಪಿನ ದೋಣಿ……

ನೆನಪಿನೊಳು ನೆನಪಾಗುವ..
ಅದೇ‌ ಗಂಗಾವಳಿ ದೋಣಿ………

ರಚನೆ: ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading