Category: ಕವನ

  • ಹಾಡುವ ಕೋಗಿಲೆ….. ಸುಕ್ರಜ್ಜಿ..

    ಹಾಡುಗಳ ಆಗರದಶಬ್ದಕೋಶವೇ ನೀನುಏನೆಂದು ಪದಗಳ ಪೊಣಿಸಿವರ್ಣಿಸಲೇ ನಾನು…ನೀ ಕಟ್ಟಿ ಹಾಡುವ ಹಾಡಿಗೆತಲೆಬಾಗದವರಾರುಅರ್ಥಗರ್ಭಿತ ಪದಗಳಪ್ರತಿಸಾಲುಗಳಲ್ಲಿವರ್ಣಿತವಾಗಿಹುದು ಕಾಣುಬಾಳ ಪಯಣದ ಪ್ರತಿಏರಿಳಿತಗಳ ‌ಘಟ್ಟ… ನಿನ್ನೊಡಲಲ್ಲಿ ಮುಗಿಯದು ತಾಯಿಹಾಡಿನ ಅಲೆಗಳಅಗಾದ ಸಾಗರ..ಇಂದಿಗೂ ಚಿಗುರುತಲಿದೆನವ ನವೀನ ಸಾಲಿನ ಮಾಮರ..ಅಗಣಿತ ಹಾಡಿನ ಒಡತಿಯೇಎಣಿಕೆಗೂ ನಿಲುಕದು ಹಾಡುಗಳ ಕಂತೆ..ನಿನ್ನ ಕೊರಳೊಳಗಿನಎಣಿಸಲಾಗದ ಮಣಿಯಂತೆ…. ನೀ ಕಟ್ಟುವ ಹಾಡಿಗಳುಬಾನಲ್ಲಿ‌ ಮೂಡಿಸುವುದುಬಣ್ಣದ ಮಳೆಬಿಲ್ಲಿನಚಿತ್ತಾರ..ಬರೆಯದೆ ಹಾಡಿದ ಹಾಡಿನ ಸಾಲುಗಳುಬರೆವ ಲೇಖನಿಗೆತುಂಬುವುದು ಸ್ಪೂರ್ತಿ..ಜನಪದ ಲೋಕಕ್ಕೆ‌ ಮಾತೆನಿನೋಂದು ಕೀರ್ತಿ.. ನವ ಕವಿಗಳಿಗೆ ದಾರಿ ದೀಪನಿನ್ನ ಹಾಡುಗಳ ಪ್ರತಿ ಹೆಜ್ಜೆ..ಬಾನ ಚಂದಿರನಬೆಳದಿಂಗಳು‌ ನಾಚುವಂತಿದೆನಿನ್ನ ಮೊಗದ ನಗುವ ನೋಡಿಸುಕ್ರಜ್ಜಿ…..…

  • ಯುಗಾದಿ – ಕವನ

    ಕಮರಿದ ಕಾಂಡದೊಳು ನವಪುಳಕಮತ್ತೆ ಚಿಗುರುವ ತವಕಹೊಸಗಾಳಿ ಜೋರು ಒಳಹೊರಗುನೋಡು ಬಾ ಈ ನವಬೆರಗು ||೧|| ತಮ ಕಳೆಯೆ ರವಿ ಮತ್ತೆ ಬಂದಿಹನುಹೊಸತು ಹೊತ್ತು ತಂದಿಹನುಕೋಟಿ ಸುಮಗಳು ಅರಳಿಹವುನೋಡು ಬಾ ಈ ನವಬೆಳಗು ||೨|| ಜಿಡ್ಡುಗಟ್ಟಿದ ಜಾಡ್ಯ ಕಳೆಯಲುಎಣ್ಣೆ ಸೀಗೆಕಾಯಿ ಬೇವುತಿಕ್ಕಿ ತೊಳೆದರೆ ಹಸನುಬೆಳಗು ಬಾ ನಮ್ಮ ಬಾಳು ||೩|| ಹೊಸ ಬಟ್ಟೆಯ ತೊಟ್ಟುಎದೆಯಂಗಳದಿ ರಂಗವಲ್ಲಿ ಇಟ್ಟುನಭಕೆ ಗುಡಿಯ ಕಟ್ಟಿಸಿಂಗರಿಸು ಬಾ ನವತೋರಣದಿ ||೪|| ಬೇವು ನಿನಗೆ ಹೊಸದಲ್ಲಇಂದು ತಂದಿಹೆನು ಬೆಲ್ಲಬಲ್ಲಿದಾಕೆ ಮುನಿಸು ತರವಲ್ಲಸ್ವೀಕರಿಸು ಬಾ ಪಚ್ಚಡಿ ||೫||…

  • ಯುಗಾದಿ ಸಂಭ್ರಮ – ಕವನ

    ಯುಗದ ಆದಿಗೆ ಸ್ವಾಗತಕೋರಿ“ಚೈತ್ರ ಮಾಸ”ದ ಸುಗ್ಗಿಗೆಜ್ಜೆ ಕಟ್ಟಿ ತಾ ಕುಣಿದಿದೆನವ ಸಂವತ್ಸರದ ಆಗಮನಕೆ… ಚಿಗುರೆಲೆಯೊಳು ತಾ ಮೆರೆದಿದೆಸಹ್ಯಾದ್ರಿಯ ಸಾಲುಗಳುಕಡಲಿನಲೆಗಳ ನೃತ್ಯವದುಚುಂಬಿಸುತಲಿದೆ ಬಾನಂಚಿನರವಿ‌ ಕಿರಣಗಳಿಗೆನವೋಲ್ಲಾಸದ ಕ್ಷಣಕೆ… ಹೊಸ ಋತುವಿನ ಆಗಮನಕೆ“ವಸಂತ “ಗಾನದ ಕಳೆತುಂಬಿತುಕೋಗಿಲೆಯ‌ ಮಧುರ ನಾದ…ನವ ಕನಸುಗಳು‌ ಸಾಗಲಿಹೊಸ ದಿಗಂತದೆಡೆಗೆಮೂಡಲಿ ಎಲ್ಲೆಡೆ ಉಲ್ಲಾಸದನವ ಪರ್ವ…. “ಶೋಭನ ನಾಮ” ಸಂವತ್ಸರವದುನಗುವಿನಲೆಗಳ ಮೇಲೆಮರೆಸಲಿ ಕಹಿ ನೆನಪುಗಳಸರಮಾಲೆ..ಚೈತ್ರದ ಚಿಗುರಿನ ಹೊಸ ವರ್ಷಆನಂದದ ಹೊಳೆ ಹರಸಲಿಎಲ್ಲರ ಬದುಕಲಿ.. ನಿಲ್ಲದ ಪಯಣ ಸಾಗಲಿಹೊಸ ಯುಗದ ಜೊತೆಗೆರಮ್ಯತೆಯ ಭಾವದೊಳುಹಸಿರು ತೋರಣದಂತೆ….ಪಯಣಿಸಲಿ ಬಾಳಿನ ಪಲ್ಲಕ್ಕಿ“ಯುಗಾದಿ”ಯೊಳು ಸವಿಯುವಬೇವು-ಬೆಲ್ಲದಂತೆ….. ✍️ ಅಕ್ಷತಾ…

  • ಶೇಡಿ ಮಣ್ಣಿನ ರಂಗೋಲಿ | ಸಂಕ್ರಾಂತಿ ಸಡಗರ

    ಶೇಡಿ ಮಣ್ಣಿನ ‌ನೀರಲಿ ಹಾಲಕ್ಕಿ ಮಹಿಳೆಯ ಕೈಯಲಿ ಮೂಡುತಲಿದೆ ಹಲಿ ಮಕರ ಸಂಕ್ರಾಂತಿಯ ಸಡಗರದ ಹಬ್ಬಕ್ಕೆ ಮನೆಯಂಗಳದಲ್ಲಿ ನಲಿದಾಡುತಲಿದೆ ರಂಗವಲ್ಲಿಯ ರಂಗೋಲಿ… ಸಾಂಪ್ರದಾಯಿಕ ರಂಗೋಲಿ ಹಾಲಕ್ಕಿಯ ಹಾಡಲಿ ಕೇಳಸಿಗುವ ಹಲಿ ಒಂದೊಂದು ಹಬ್ಬಕ್ಕೆ ವಿಭಿನ್ನ ರಂಗೋಲಿ ಹಾಲಕ್ಕಿಗಳ ಮನೆಗಳಲ್ಲಿ ಕಾಣಸಿಗುವುದು ಈ ಬಗೆಯ ರಂಗೋಲಿ… ಸಂಕ್ರಾಂತಿ ಎಂದರೆ ನಮಗೆ ರಂಗೋಲಿ ಹಬ್ಬ ಮನೆ ಮಂದಿಯೆಲ್ಲ ಸೇರಿ ಬಿಡಿಸುವರು ಮನೆಯಂಗಳದ ತುಂಬ ಬಗೆ ಬಗೆಯ ರಂಗೋಲಿ… ನೋಡ ಬಯಸಿದರೆ ಬನ್ನಿರಿ ನಮ್ಮ ಹಳ್ಳಿ ಹಾಲಕ್ಕಿಗರ ಹಲಿಯಲಿ ಕಾಣಸಿಗುವುದು ಬಾಳ…

  • ಸಡಗರದ ಸಂಕ್ರಾಂತಿ

    ಮಾಗಿದ ಚಳಿಯ ಮುಂಜಾನೆಯಲಿ ಮೂಡಿದೆ ಮನೆಯಂಗಳದಲ್ಲಿ ಚಿತ್ತಾರದ ರಂಗವಲ್ಲಿ… ಎಳ್ಳು ಬೆಲ್ಲವ ಸವಿಯುವ ಸಡಗರ ಸಂಭ್ರಮದ ಹಬ್ಬ ಬಂದಿದೆ ಸಂಕ್ರಾಂತಿ ಹಬ್ಬ… ಮಕರ ರಾಶಿಗೆ ಸಂಚರಿಸುತಲಿ ಪಥವ ಬದಲಿಸಿದ ಸೂರ್ಯನು ಉತ್ತರಾಯಣದೆಡೆಗೆ ಸಾಗುತ ಹೊಸ ಕಾಂತಿಯಲಿ ಹೊಳೆಯುತ ನಾಡಿನ ತುಂಬೆಲ್ಲ ಸಡಗರ ಮರಳಿದೆ ಮಕರ ಸಂಕ್ರಮಣ… ವರುಷದ ಮೊದಲ ಹಬ್ಬ ತರಲಿ ಎಲ್ಲೆಡೆ ಸುಖ ಶಾಂತಿ ಎಳ್ಳು ಬೆಲ್ಲದ ಸವಿಯು ಮನೆ‌ ಮನಗಳ ಸಿಹಿಯಾಗಿಸಲಿ ಕಡಲಿನ ಅಭ್ಯಂಜನವದು ಮನದ ಪಾಪ ತೊಳೆಯಲಿ… ಭೀಷ್ಮರೇ ಕಾದಿಹ ಪುಣ್ಯದಿನ ಪ್ರೀತಿ…

  • ಕನ್ನಡ ರಾಜ್ಯೋತ್ಸವ | ಕವನ – ಅಕ್ಷತಾ ಜಗದೀಶ್

    ಹೆಸರಲೇ ಹುದುಗಿದೆ ಕನ್ನಡ ಮನಸೆಳೆಯುವ ಜಿಲ್ಲೆ ನನ್ನ ಉತ್ತರ ಕನ್ನಡ…. ಸಹ್ಯಾದ್ರಿಯ‌ ಸಿರಿಯಲಿ ಭೋರ್ಗರೆಯುವ ಕಡಲಿನಲಿ ಹರಡಿದೆ ಕನ್ನಡದ ಕಂಪು ಆಲಿಸುವ ಕರ್ಣಗಳಿಗೆ ಅದೇನೋ ಇಂಪು….. ಕನ್ನಡದ ಪ್ರೀತಿಗೆ ಇಲ್ಲಿದೆ ಉತ್ತರ ಕನ್ನಡ ‌ಭಾಷೆಯೇ ಮನಕೆ ಹತ್ತಿರ.. ನುಡಿವ ನುಡಿ ಒಂದೇ.. ನಲಿಯುವೆವು ಕನ್ನಡಿಗರೆಂದೇ.. ಕೈಮುಗಿದು ನಮಿಪೆವು ಈ ನಾಡ ಮೊಳಗಲಿ ಎಲ್ಲೆಡೆ ಕನ್ನಡದ ಹಾಡು.. ಮೂಡಣದಲಿ ಮೂಡುತಲಿದೆ ಕೆಂಪು ಹಳದಿ ರಂಗು.. ಬೆಳಕಿನ ಕಿರಣದಲ್ಲಿಯೂ ಕನ್ನಡ ನುಡಿಯ ಮೆರಗು.. ಹಚ್ಚ ಹಸುರಿನ ಕಾಡು ಹಾಲಕ್ಕಿಗಳ ಜನಪದ…

  • ಕೋಟಿ ಕೋಟಿ ನಮನ – ಅಕ್ಷತಾ ಜಗದೀಶ

    ಅಂಧಕಾರದಿಂದ ಬೆಳಕಿನೆಡೆಗೆ ದಾರಿತೋರಿದ ಮಹಿಮನು ಬದುಕಿನ ಮೌಲ್ಯವ ತಿಳಿಸಿ ಜೀವನ ಪಾಠ ಕಲಿಸಿದಂತ ಅಕ್ಷರ ಬ್ರಹ್ಮ ನು… ನಿಮಗಿದೋ ನನ್ನ ಕೋಟಿ ಕೋಟಿ ನಮನ…. ಅಂದು ನೀವು ಕಲಿಸಿದ ಅಕ್ಷರ ಇಂದಾಗಿದೆ ನನ್ನ‌ಬಾಳ ಬುತ್ತಿಯು ಬದುಕಿಗೆ ಸ್ಪೂರ್ತಿಯಾಗಿ ಗುರಿಗೆ ಗುರುವಾಗಿ ಭವ್ಯ ಬೆಳಕನು ಚೆಲ್ಲಿದ ಗುರುವೇ ನಿಮಗಿದೋ ನನ್ನ ಕೋಟಿ ಕೋಟಿ ನಮನ… ಜ್ಞಾನದ ದೀವಿಗೆ ಮನದಲಿ ಬೆಳಗಿಸಿ ಉತ್ತಮ ನಡೆ ನುಡಿ ಕಲಿಸಿ ತಪ್ಪೆಸೆಗಿಸಿದಾಗ ತಿದ್ದಿ ಮನದ ಪುಟದೊಳು ಸನ್ಮಾರ್ಗ ಮೂಡಿಸಿ ಆಚಾರ ವಿಚಾರ ಸ್ಪುಟವಾಗಿ…

  • ಸ್ವಾತಂತ್ರ್ಯದ ಅಮೃತ ಮಹೋತ್ಸವ

    ಮುಗಿಲೆತ್ತರಕ್ಕೆ ಚಿಮ್ಮುತ್ತ ಕಡಲಿನಾಳಕ್ಕೆ ಬಿಮ್ಮುತ್ತ ಶೌರ್ಯ, ಶಾಂತಿ, ಪ್ರೀತಿ ಸಮೃದ್ಧಿಯ ಸಾರುತ್ತ ಮುಗಿಲನು ಚುಂಬಿಸುತಿದೆ ನಮ್ಮ ಹೆಮ್ಮೆಯ ‌ಬಾವುಟ… ಸಹ್ಯಾದ್ರಿಯ ಸಾಲುಗಳಲಿ ಹಿಮಾಲಯದ ಶಿಖರದಲಿ ಕರಾವಳಿಯ ತೀರದಲಿ ಮಲೆನಾಡಿನ ಮಡಿಲಿನಲಿ ಭರತ‌ ಭೂಮಿಯ ಹಿರಿಮೆಯ ಕಂಪನ್ನು ಸೂಸುತ್ತ ಹಾರಿದೆ ನಮ್ಮ ‌ಹೆಮ್ಮೆಯ‌ ಬಾವುಟ… ದೇಶಭಕ್ತಿಯ ಮೆರೆಯುತಲಿ ಅಮೃತ ಮಹೋತ್ಸವದ ಸಂಭ್ರಮದಲಿ ಸತ್ಯಾಗ್ರಹದ ನೆನಪಿನಲಿ ತ್ಯಾಗ ಬಲಿದಾನದ ಸ್ಮರಣೆಯಲಿ ಐತಿಹಾಸಿಕ ಸೊಬಗ ಸಾರಿದೆ ನಮ್ಮ ‌ಹೆಮ್ಮೆಯ ಬಾವುಟ… ಭಾರತಾಂಬೆಯೇ ನಿನಗೆ ಕೋಟಿ ಕೋಟಿ ನಮನ… ಎಲ್ಲೆಡೆಯೂ ಅಮೃತ ಮಹೋತ್ಸವದ…

  • ನನ್ನ ದೇಹದ ಬೂದಿ – ದಿನಕರ ದೇಸಾಯಿ

    ಸಾಹಿತ್ಯ: ನನ್ನ ದೇಹದ ಬೂದಿ ಕವಿ: ದಿನಕರ ದೇಸಾಯಿ ನನ್ನ ದೇಹದ ಬೂದಿ – ಗಾಳಿಯಲಿ ತೂರಿ ಬಿಡಿಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ;ಬೂದಿ – ಗೊಬ್ಬರದಿಂದ ತೆನೆಯೊಂದು ನೆಗೆದು ಬರೆಧನ್ಯವಾಯಿತು ಹುಟ್ಟು ಸಾವಿನಲ್ಲಿ. ನನ್ನ ದೇಹದ ಬೂದಿ – ಹೊಳೆಯಲ್ಲಿ ಹರಿಯಬಿಡಿತೇಲಿ ಬೀಳಲಿ ಮೀನ ಹಿಡಿಯುವಲ್ಲಿಮುಷ್ಠಿ ಬೂದಿಯ ತಿಂದು ಪುಷ್ಟವಾಗಲು ಮೀನುಧನ್ಯವಾಯಿತು ಹುಟ್ಟು ಸಾವಿನಲ್ಲಿ. ನನ್ನ ದೇಹದ ಬೂದಿ – ಕೊಳದಲ್ಲಿ ಬೀರಿ ಬಿಡಿತಾವರೆಯು ದಿನದಿನವು ಅರಳುವಲ್ಲಿಬೂದಿ ಕೆಸರನು ಕೂಡಿ ಪಂಕಜವು ಮೂಡೆಧನ್ಯವಾಯಿತು ಹುಟ್ಟು ಸಾವಿನಲ್ಲಿ. ಸತ್ತ…

You cannot copy content of this page