ನಮ್ಮ ಪರಿಸರ – ಅಕ್ಷತಾ ಜಗದೀಶ

Posted by

·

ಉಸಿರಿಗೆ ಉಸಿರಾದ ವನಸಿರಿ
ಜೀವರಾಶಿಗೆ ವರವಾದ ಐಸಿರಿ…
ಮನುಕುಲಕೆ ವರದಾನ ಈ ಧರಣಿ
ವೃಕ್ಷದೇವತೆ ಭೂ ಮಂಡಲದ ರಮಣಿ…

ಜೀವಜಲದ ಏಕೈಕ ತಾಣ
ಜೀವಜಗತ್ತಿಗೆ ಅದುವೇ ಪ್ರಾಣ….
ಹಸಿರಾಗಿದ್ದರೆ ಪರಿಸರ..
ಉಸಿರಾಡುವುದು ಜೀವ ಸಂಕುಲ….

ಧುಮುಕುವ ಜಲಪಾತದ ನೋಟ
ನರ್ತಿಸುವ ಸಾಗರದಲೆಗಳ ಆಟ…
ಮನೋಲ್ಲಾಸದ ಪಶ್ಚಿಮ ‌ಘಟ್ಟ
ಕಣ್ಮನ ಸೆಳೆಯುವ ಸಾಲು ಸಾಲು‌ ಬೆಟ್ಟ..

ಎಲ್ಲೆಲ್ಲೂ ಹಸಿರುಡುಗೆ ಉಟ್ಟ ಕಾಡು ಉತ್ತರ ಕನ್ನಡ ಸೊಬಗದು ನೋಡು..
ವೃಕ್ಷ ಮಾತೆ ತುಳಸಜ್ಜಿಯ‌ ಕನಸು
ಪರಿಸರ ‌ಬೆಳೆಸಿ ಮಾಡಬೇಕು‌ ನನಸು…

ಪ್ರಕೃತಿಯ ಬೆಳೆಸೋಣ..
ಪರಿಸರ ಉಳಿಸೋಣ…
ಸುಂದರ ಪರಿಸರ ನಮ್ಮ ‌ಆಶಯ..
ಸರ್ವರಿಗೂ ಪರಿಸರ ದಿನದ ಶುಭಾಶಯ….

✍️ ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading