ಮಲೆನಾಡ ಗಿರಿಶಿಖರ ಹರಿವನದಿ ಕಲರವದ
ಜಲಪಾತದ ಸಿರಿ ಸೊಬಗು ಸಾಹಿತ್ಯದಿ
ಹಚ್ಚ ಹಸಿರಿನಕಾಡು ನಿಸರ್ಗ ಸೋಜಿಗದ
ಚೆಲುವು ತುಂಬಿದೆ ತನುಮನದಿ.
ಪ್ರಾಣಿಗಳ ನಲಿದಾಟ ಪಕ್ಷಿಗಳಿಂಪಿನ ರಾಗ
ಮೈಮನ ಪುಳಕಿತವು ಸೊಬಗಸವಿಯು.
ದಟ್ಟಕಾಡಿನ ಮದ್ಯ ರವಿರಶ್ಮಿಯ ಮಾಟ
ಭೂಲೋಕದ ಸ್ವರ್ಗ ಮಲೆನಾಡಸಿರಿಯು.
ಜಗ ಗೆಲ್ಲು ಶಕ್ತಿಯಿದೆ ಕನ್ನಡದ ಮಣ್ಣಲ್ಲಿ
ಓದಿತಿಳಿವಾ ಸಾಹಿತ್ಯ ಚರಿತೆಯನ್ನು.
ನಮ್ಮನೆಲ ನಮ್ಮಜಲ ಹಿರಿಮೆಯ ನೆನೆಯುತ್ತ
ಬೆಳಗಿಸುವ ಕನ್ನಡದ ಕೀರ್ತಿಯನ್ನು.
ಹಸಿರಿನ ಪರಿಸರವು ಹಳ್ಳಿ ನೆಲದಲ್ಲಿ
ಮುಗ್ದತೆಯ ಗುಣವು ಜನರ ಮನದಲ್ಲಿ
ಸದ್ದು ಗದ್ದಲವಿರದ ಪ್ರಶಾಂತ ಕಡಲು
ಶಾಂತಿ ಸಹಬಾಳ್ವೆಯ ನೆಲಗಟ್ಟಿನ ಮಡಿಲು
ರಚನೆ: ಸಾತುಗೌಡ, ಬಡಗೇರಿ, ಅಂಕೋಲಾ, ಉತ್ತರ ಕನ್ನಡ.


Leave a Reply