ನಿಸರ್ಗದ ಸೃಷ್ಠಿಗೆ ಸರಿಸಮನಾರಿಲ್ಲ
ಸಹಜ ಸೌಂದರ್ಯಕ್ಕೆ ತಲೆಬಾಗದವರಿಲ್ಲ
ಪ್ರಕೃತಿಯ ಕೊಡುಗೆ ಉತ್ತರ ಕನ್ನಡದ ತಾಣ...
ಕಣ್ಣರಳಿಸಿ ನೋಡಿದಷ್ಟು ದೂರ
ಕಡಲಿನ ಮೇಲೆ ನರ್ತನ ಮಾಡುತ್ತ ಸಾಗುತಿದೆ ...
ಹಾಯಿದೋಣಿಯ ಪ್ರಯಾಣ...
ನಾಮಹಲವಿದ್ದರೂ ತೀರಕೆ..
ಸೇರುವ ಮಡಿಲೊಂದೆ ತಾನೆ...
ಎಲ್ಲೋ ಹುಟ್ಟಿ ಕಾನನದೊಳು ಹರಿದು
ಅದೆಷ್ಟೋ ಜಲಧಾರೆಗಳಾಗಿ
ಕಣ್ಮನಸೆಳೆವ ಜೀವಜಲ ಈ ತೊರೆ..
ಶರಾವತಿ, ಬೇಡ್ತಿ, ಗಂಗಾವಳಿ
ಅಘನಾಶಿನಿ ,ಕಾಳಿ ನದಿಗಳಾಗಿ
ಸೇರುವರು ಅರಬ್ಬೀ ಸಮುದ್ರವೆಂಬ
ಅಗಾಧ ಸಾಗರದ ಮಡಿಲು..
ಸಹ್ಯಾದ್ರಿಯ ಸಾಲುಗಳು ಒಂದೆಡೆ..
ಓಂ ಕಡಲತೀರ, ಟ್ಯಾಗೋರ್ ಕಡಲತೀರ, ನದಿಭಾಗ ಕಡಲತೀರ,
ಮುರುಡೇಶ್ವರ ಕಡಲತೀರ...
ಹಲವು ನಾಮಗಳೊಂದಿಗೆ ಜನ್ಮತಳಿದ
ಕಡಲತೀರಗಳು ಇನ್ನೊಂದೆಡೆ...
ವರ್ಣನೆಗೆ ನಿಲುಕದು ಕಡಲ ಸೊಬಗು..
ಉತ್ತರ ಕನ್ನಡದ ಸೌಂದರ್ಯಕ್ಕೆ
ಕಡಲತೀರಗಳೇ ನೀಡಿವೆ ಸುಂದರ ಮೆರಗು......
ರಚನೆ: ಅಕ್ಷತಾ ಜಗದೀಶ್ (ಸಮಯಾ)


Leave a Reply