ಅಂಡಮಾನ್ ನ ದ್ವೀಪವೊಂದಕ್ಕೆ ಇಡಲಾಗಿದೆ ಕಾರವಾರದ ಹೆಮ್ಮೆಯ ಪುತ್ರನ ಹೆಸರು!

Posted by

·

ಅಂಡಮಾನ್ ನ ದ್ವೀಪವೊಂದಕ್ಕೆ ಕಾರವಾರದ ಹೆಮ್ಮೆಯ ಪುತ್ರ ಮೇ.ಜನರಲ್ ರಾಮ ರಾಘೋಬಾ ರಾಣೆ ಅವರ ಹೆಸರನ್ನು ಇರಿಸಲಾಗಿದೆ.

ಮೇಜರ್ ರಾಮ ರಘೋಬಾ ರಾಣೆರವರು ಜನಿಸಿದ್ದು 26 ಜೂನ್ 1918 ರಂದು ಜನಿಸಿದರು. ಇವರು ಭಾರತೀಯ ಸೇನೆಯಲ್ಲಿ ಒಬ್ಬ ದಷ್ಟ ಅಧಿಕಾರಿಯಾಗಿದ್ದರು. ಕರಮ್ ಸಿಂಗ್ ಅವರ ಜೊತೆಗೆ ಇವರು ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಬದುಕಿರುವಾಗಲೇ ಪಡೆದ ಮೊದಲ ಭಾರತೀಯರು ಎಂದು ಖ್ಯಾತರಾಗಿದ್ದಾರೆ.

ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟಿಷ್ ಇಂಡಿಯನ್ ಸೈನ್ಯದಲ್ಲಿ ರಾಣೆಯವರು ಸೇವೆ ಸಲ್ಲಿಸಿದರು. ಅವರು ಯುದ್ಧಾನಂತರದ ಅವಧಿಯಲ್ಲಿ ಮಿಲಿಟರಿಯಲ್ಲಿಯೇ ಇದ್ದರು ಮತ್ತು 15 ಡಿಸೆಂಬರ್ 1947 ರಂದು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಬಾಂಬೆ ಸ್ಯಾಪರ್ಸ್ ರೆಜಿಮೆಂಟ್ ನಲ್ಲಿ ನೇಮಕಗೊಂಡರು. ಏಪ್ರಿಲ್ 1948 ರಲ್ಲಿ, 1947 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಹಲವಾರು ರಸ್ತೆ ತಡೆಗಳು ಮತ್ತು ಮೈನ್‌ಫೀಲ್ಡ್‌ಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಭಾರತೀಯ ಪಡೆಗಳು ರಾಜೌರಿಯನ್ನು ವಶಪಡಿಸಿಕೊಳ್ಳುವಲ್ಲಿ ರಾಣೆ ಪ್ರಮುಖ ಪಾತ್ರ ವಹಿಸಿದರು. ರಾಣೆರವರ ತೀಕ್ಷ್ಣ ಕ್ರಮಗಳು ಭಾರತೀಯ ಟ್ಯಾಂಕ್‌ಗಳನ್ನು ಮುನ್ನಡೆಸುವ ಮಾರ್ಗವನ್ನು ತೆರವುಗೊಳಿಸಲು ಸಹಾಯ ಮಾಡಿತು. ಹೀಗೆ ಅನೇಕ ಶೌರ್ಯ ಕಾರ್ಯಗಳಲ್ಲಿ ತಮ್ಮ ಅತ್ಯುತ್ತಮ ನಾಯಕತ್ವವನ್ನು ತೋರಿ ದೇಶದ ಭದ್ರತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಶೌರ್ಯಕ್ಕಾಗಿ ಅವರಿಗೆ 8 ಏಪ್ರಿಲ್ 1948 ರಂದು ಪರಮ ವೀರ ಚಕ್ರವನ್ನು ನೀಡಲಾಯಿತು. ಸೈನ್ಯದೊಂದಿಗಿನ ತನ್ನ 28 ವರ್ಷಗಳ ಸೇವೆಯ ಸಮಯದಲ್ಲಿ, ಅವರು ಐದು ಬಾರಿ ಸೇನಾ ರವಾನೆಗಳಲ್ಲಿ ಉಲ್ಲೇಖಿತರಾಗಿದ್ದಾರೆ.

ರಾಣೆಯವರ ಪ್ರತಿಮೆ, ಪರಮ್ ಯೋಧ ಸ್ಥಳ, ರಾಷ್ಟ್ರೀಯ ಯುದ್ಧ ಸ್ಮಾರಕ, ನವದೆಹಲಿ

ಆರಂಭಿಕ ಜೀವನ:

ರಾಮ ರಾಘೋಬಾ ರಾಣೆರವರು 26 ಜೂನ್ 1918 ರಂದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚೆಂಡಿಯಾ ಗ್ರಾಮದಲ್ಲಿ ಕೊಂಕಣಿ ಮಾತನಾಡುವ ಮರಾಠಾ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಘೋಬಾ ಪಿ. ರಾಣೆ ಚೆಂಡಿಯಾ ಗ್ರಾಮದ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರು. ರಾಣೆಯವರ ಆರಂಭಿಕ ಶಿಕ್ಷಣ ಹೆಚ್ಚಾಗಿನದಾಗಿ ಜಿಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಿತು, ಅವರ ತಂದೆಯ ಆಗಾಗಿನ ವರ್ಗಾವಣೆಯಿಂದಾಗಿ ಶಿಕ್ಷಣ ಸ್ವಲ್ಪ ಅಸ್ತವ್ಯಸ್ತವಾಗಿತ್ತು. 1930 ರಲ್ಲಿ, ಅವರು ಅಸಹಕಾರ ಚಳುವಳಿಯಿಂದ ಪ್ರಭಾವಿತರಾದರು, ಇದು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಚಾರ ಮಾಡುವಂತದ್ದಾಗಿತ್ತು. ಈ ಆಂದೋಲನದಲ್ಲಿ ಅವರ ಪಾಲ್ಗೊಳ್ಳುವಿಕೆ ಅವರ ತಂದೆಯನ್ನು ಕೂಡ ಎಚ್ಚರಿಸಿತು ಮತ್ತು ಇದು ರಾಣೆಯವರ ಕುಟುಂಬವನ್ನು ಚೆಂಡಿಯಾ ಗ್ರಾಮದಲ್ಲಿ ಇದ್ದ ತಮ್ಮ ಪೂರ್ವಜರ ಮನೆಗೆ ಸ್ಥಳಾಂತರಿಸುವಂತೆ ಮಾಡಿತು.

ನಂತರದ ವೃತ್ತಿ ಮತ್ತು ನಂತರದ ಜೀವನ:

ಯುದ್ಧದ ನಂತರ, ರಾಣೆಯವರನ್ನು 14 ಜನವರಿ 1950 ರಂದು ಲೆಫ್ಟಿನೆಂಟ್ ಆಗಿ ಮತ್ತು 14 ಜನವರಿ 1954 ರಂದು ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಯಿತು. 27 ಮೇ 1955 ರಂದು, ಅವರು ಕ್ಯಾಪ್ಟನ್ ಆಗಿ ನಿಯಮಿತ ಆಯೋಗವನ್ನು ಪಡೆದರು (ಸೇವಾ ಸಂಖ್ಯೆ IC-7244) ಮತ್ತು 25 ಜೂನ್ 1968 ರಂದು ಮೇಜರ್ ಹುದ್ದೆಯೊಂದಿಗೆ ನಿವೃತ್ತರಾದರು. ನಂತರ ಅವರು ಭಾರತೀಯ ಸೇನೆಯ ನಾಗರಿಕ ಸಿಬ್ಬಂದಿಯ ಸದಸ್ಯರಾಗಿ ನೇಮಕಗೊಂಡರು. ನಂತರ 7 ಏಪ್ರಿಲ್ 1971 ರವರೆಗೆ ಸೈನ್ಯದ ಉದ್ಯೋಗದಲ್ಲಿದ್ದರು ಮತ್ತು ತದನಂತರದ ದಿನಗಳಲ್ಲಿ ಅವರು ಕೆಲಸದಿಂದ ಸಂಪೂರ್ಣವಾಗಿ ನಿವೃತ್ತರಾದರು. ಅವರು 11 ಜುಲೈ 1994 ರಲ್ಲಿ ಪುಣೆಯ ದಕ್ಷಿಣ ಕಮಾಂಡ್‌ನ ಕಮಾಂಡ್ ಆಸ್ಪತ್ರೆಯಲ್ಲಿ ನಿಧನರಾದರು. ಮತ್ತು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಮಗಳನ್ನು ಅಗಲಿ ಚಿರನಿದ್ರೆಗೆ ಜಾರಿದರು.

ರಾಣೆಯವರ ಕುಟುಂಬ

ಗೌರವಗಳು:

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಸಿಐ), ಸಾಗಣೆ ಸಚಿವಾಲಯದ ಆಶ್ರಯದಲ್ಲಿ ಭಾರತ ಸರ್ಕಾರದ ಉದ್ಯಮವಾದ ಎಸ್‌ಸಿಐ, ಪರಮ್ ವೀರ್ ಚಕ್ರ ಸ್ವೀಕರಿಸುವವರ ಗೌರವಾರ್ಥವಾಗಿ ಅವರ ಹದಿನೈದು ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಹೆಸರಿಸಿದೆ. ಇದರಲ್ಲಿ ಒಂದಾದ MT ಲೆಫ್ಟಿನೆಂಟ್ ರಾಮ ರಾಘೋಬಾ ರಾಣೆ, PVC ಹೆಸರಿನ ಕಚ್ಚಾ ತೈಲ ಟ್ಯಾಂಕರ್ ಅನ್ನು 8 ಆಗಸ್ಟ್ 1984 ರಂದು ಎಸ್‌ಸಿಐ ಗೆ ವಿತರಿಸಲಾಯಿತು. 25 ವರ್ಷಗಳ ಸೇವೆಯ ನಂತರ ಟ್ಯಾಂಕರ್ ಅನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಯಿತು.

ರಾಣೆಯವರ ಪತ್ನಿ ರಾಜೇಶ್ವರಿ ರಾಣೆ

ರಾಣೆಯವರ ಸ್ಮರಣಾರ್ಥ ಪ್ರತಿಮೆಯನ್ನು 7 ನವೆಂಬರ್ 2006 ರಂದು ಅವರ ತವರು ಕರ್ನಾಟಕದ ಕಾರವಾರ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ಐಎನ್‌ಎಸ್ ಚಾಪಲ್ ವಾರ್‌ಶಿಪ್ ಮ್ಯೂಸಿಯಂ ಜೊತೆಗೆ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಇದನ್ನು ಮಾಜಿ ಸಣ್ಣ ಕೈಗಾರಿಕೆಗಳ ಸಚಿವ ಶಿವಾನಂದ ನಾಯ್ಕ್ ಅವರು ಉದ್ಘಾಟಿಸಿದರು ಮತ್ತು ಅಂದಿನ ಫ್ಲಾಗ್ ಆಫೀಸರ್ ಕಮಾಂಡರ್-ಇನ್-ಚೀಫ್, ಪಶ್ಚಿಮ ಕಮಾಂಡ್, ವೈಸ್ ಅಡ್ಮಿರಲ್ ಸಂಗ್ರಾಮ್ ಸಿಂಗ್ ಬೈಸ್ ಅಧ್ಯಕ್ಷತೆ ವಹಿಸಿದ್ದರು.

ಇದೀಗ ಅಂಡಮಾನ್ ನ ದ್ವೀಪವೊಂದಕ್ಕೆ ಕಾರವಾರದ ಹೆಮ್ಮೆಯ ಪುತ್ರ ಮೇ.ಜನರಲ್ ರಾಮ ರಾಘೋಬಾ ರಾಣೆ ಅವರ ಹೆಸರನ್ನು ಇರಿಸಲಾಗಿದೆ. ಇದರಿಂದ ನಮ್ಮೂರಿನ ಅಪ್ರತಿಮ ಯೋಧರೊಬ್ಬರಿಗೆ ಸೂಕ್ತ ಗೌರವ ಸಲ್ಲಿಸಿದಂತಾಗಿದೆ. ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮ ಶ್ಲಾಘನೀಯವಾಗಿದೆ.

ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಮೇ.ರಾಮ ರಾಘೋಬಾ ರಾಣೆ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಅಪೂರ್ವ ಸಾಹಸ ಮೆರೆದಿದ್ದರಿಂದ ಬದುಕಿರುವಾಗಲೇ ಅವರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರಚಕ್ರ ಪ್ರದಾನ ಮಾಡಲಾಗಿತ್ತು. ಮೆ.ರಾಮ ರಾಘೋಬಾ ರಾಣೆ ಅವರ ಶೌರ್ಯ ನಮ್ಮೆಲ್ಲರಿಗೆ ಹಾಗೂ ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ.

Source: https://en.m.wikipedia.org/wiki/Rama_Raghoba_Rane

Note: Translated to Kannada, translation errors may found.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading