ಏಕಾಂತದ ‘ಲೇಡಿಸ್ ಬೀಚ್’, ಕಾರವಾರ

Posted by

·

ಆಂಗ್ಲರ ಕಾಲದಲ್ಲಿ ಆಂಗ್ಲ ಮಹಿಳೆಯರು ದೋಣಿಗಳ ಮೂಲಕ ಇಲ್ಲಿಗೆ ಜಲಕ್ರೀಡೆಗೆ ಬರುತ್ತಿದ್ದರಂತೆ. ಅದಕ್ಕಾಗಿ ಈ ಕಡಲತೀರಕ್ಕೆ ಬ್ರಿಟಿಷರು ‘ಲೇಡಿಸ್ ಬೀಚ್’ ಎಂದು ಕರೆಯುತ್ತಿದ್ದರು ಮತ್ತು ಈಗಲೂ ಅದೇ ಹೆಸರಿನಿಂದ ಈ ಸ್ಥಳವನ್ನು ಗುರುತಿಸಲಾಗುತ್ತಿದೆ. ಈಗಲೂ ಇದನ್ನು ನೋಡಬೇಕಾದರೆ ದೋಣಿಯಲ್ಲೇ ಸಾಗಬೇಕು… ಏಕೆಂದರೆ ಇನ್ನೊಂದು ಬದಿಯೆಲ್ಲವೂ ಕಾಡಿನಿಂದಲೇ ಕೂಡಿದೆ.

ಆಂಗ್ಲ ಮಹಿಳೆಯರ ಜಲಕ್ರೀಡೆಯ ತಾಣ ಲೇಡಿಸ್‌ ಕಡಲತೀರ ಇದು ಒಂದು ಚಿಕ್ಕದಾದ, ಸುಂದರವಾದ ಕಡಲತೀರ. ಈ ಕಡಲ ತೀರದಲ್ಲಿ ಅಲೆಗಳ ಆರ್ಭಟಗಳು ಇಲ್ಲ. ಇಲ್ಲಿ ಎತ್ತರವಾದ ಬಂಡೆಗಳ ಸಾಲುಗಳು, ದಟ್ಟಕಾಡು ಕಂಗೊಳಿಸುತ್ತವೆ. ಇಲ್ಲಿ ಆಂಗ್ಲರು ತಮ್ಮ ಸಖಿಯರ ಜೊತೆ ಏಕಾಂತದ ಸಮಯವನ್ನು ಕಳೆಯುತ್ತಿದ್ದರು ಮತ್ತು ಆಂಗ್ಲ ಮಹಿಳೆಯರು ಇತರರ ಭಯವಿಲ್ಲದೆ ಮುಕ್ತವಾಗಿ ಜಲಕ್ರೀಡೆ ಆಡುತ್ತ ಮೋಜಿನ ಸಮಯವನ್ನು ಕಳೆಯುತ್ತಿದ್ದರಂತೆ.

ಪ್ರಶಾಂತವಾದ ತೀರ, ನಿಸರ್ಗಪ್ರಿಯರಿಗೆ ಅಕರ್ಷಣೀಯ ಸ್ಥಳ ಹಾಗೂ ಒಂದು ಶುದ್ಧ ನೀರಿನ ಕೊಳವನ್ನು ಸಹ ಈ ಕಡಲತೀರ ಹೊಂದಿದೆ. ಕಾರವಾರ ಬಂದರನ್ನು ನೋಡುತ್ತ ಈ ಕಡಲ ತೀರಕ್ಕೆ ಸಾಗಬಹುದು.

ಈಗ ಸೀಬರ್ಡ್‌ ನೌಕಾನೆಲೆ ಸುಪರ್ದಿಯಲ್ಲಿದೆ, ಅವರ ಪರವಾನಗಿ ಮೇಲೆ ಇಲ್ಲಿಗೆ ತೆರಳಬಹುದು. ನೀವು ಕುರುಮ್ ಗುಡ್ ದ್ವಿಪದಲ್ಲಿರುವ ರೆಸಾರ್ಟ್ ನ ಅಥಿತಿಯಾಗಿದ್ದರೆ ಅವರು ನಿಮ್ಮನ್ನು ವಿಶೇಷ ಬೋಟ್ ಮೂಲಕ ಇಲ್ಲಿಗೆ ಕರೆದೊಯ್ಯುತ್ತಾರೆ. ಕಾರವಾರದಿಂದ ಕೇವಲ 3 ಕೆ.ಮೀ. ದೂರ ಬೋಟನಲ್ಲಿ ಸಾಗಬೇಕು.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading