ಏಷ್ಯಾ ಖಂಡದಲ್ಲಿಯೇ ಅತೀ ವಿಸ್ತಾರವಾದ ಭೂಬಾಗ ಹೊಂದಿರುವ ಭಾರತ ಸೇನಾ ನೌಕಾನೆಲೆ ನಮ್ಮ ಕಾರವಾರದಲ್ಲಿರುವುದು ನಮಗೆ ಹೆಮ್ಮೆಯೂ ಹೌದು ಹಾಗೆಯೇ ನಮ್ಮ ಸುಂದರ ಭೂ ಸ್ವರ್ಗಗಳನ್ನು ಕಳೆದುಕೊಂಡಿದಕ್ಕೆ ಸ್ವಲ್ಪ ಮಟ್ಟಿನ ನೋವಿರುವುದು ಕೂಡ ವಾಸ್ತವ.


ಕಾರವಾರದ ಕೆಲ ಕಡಲಕಿನಾರೆಗಳು ಈಗ ನೌಕಾನೆಲೆಯ ದೈತ್ಯ ಬಂದರುಗಳಾಗಿ ಮಾರ್ಪಟ್ಟಿವೆ. ಇಲ್ಲಿ ಈಗ INS ವಿಕ್ರಮಾದಿತ್ಯ ಹೀಗೆ ಕೆಲವು ಧೈತ್ಯ ಯುದ್ಧ ನೌಕೆಗಳು ಲಂಗರು ಹಾಕಿವೆ ಮತ್ತು ಈ ಪ್ರದೇಶದಲ್ಲಿ ಸೇನೆಗೆ ಸೇರಿದ ಹಲವಾರು ಬಹುಮಹಡಿ ಕಟ್ಟಡಗಳೂ ತಲೆಎತ್ತಿವೆ.

ನಮ್ಮ ಕರಾವಳಿಯ ಸುಂದರ ಸಮುದ್ರ ತೀರಗಳಾದ ಸಂಕ್ರುಭಾಗ (ಅರಗಾ) ಕಡಲತೀರ, ಅಂಬೈಗೆ ಕಡಲತೀರ, ಕೋಡಾರ ಕಡಲತೀರ, ಮುದಗಾ ಕಡಲತೀರ ಹೀಗೆ ಇನ್ನು ಕೆಲವು ಕಡಲತೀರಗಳು ಮತ್ತು ಅಲ್ಲಿನ ಸುಂದರ ಪ್ರದೇಶಗಳು ನಮ್ಮ ಕಣ್ಮನಗಳಿಂದ ದೂರವಾಗಿವೆ.



ದೇಶದ ಏಕೀಕರಣ ಮತ್ತು ದೇಶದ ಭದ್ರತೆಗಾಗಿ ತಮ್ಮ ನೆಚ್ಚಿನ ಮೂಲ ಪರಿಸರವನ್ನು ತ್ಯಾಗ ಮಾಡಿ ಬೇರೆಡೆ ನೆಲೆಸಿರುವ ಈ ಪ್ರದೇಶದ ಎಲ್ಲಾ ಕರಾವಳಿಗರ ದೇಶ ಪ್ರೇಮಕ್ಕೆ ಸರಿಸಾಟಿಯೇ ಇಲ್ಲಾ.


Leave a Reply