Category: ದೇವರು
-

ನವರಾತ್ರಿಯಂದು ಆರಾಧಿಸಲ್ಪಡುವ ಉತ್ತರ ಕನ್ನಡದ ನವದೇವತೆಗಳು
“ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ಜಿಷ್ಣುನುತೆ, ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ” ಎಂಬ ಹಾಡು ದೇವಿಯ ಮಹತ್ವವನ್ನೂ ಹಾಗೂ ದೇವಿ ಧರಿಸುವ ಒಂಬತ್ತು ರೂಪಗಳು ವಿಶ್ವಕ್ಕೆ ತಾಯಿಯಾದ ಮಾತೆಯ ಮಹಿಮೆಯನ್ನೂ ಅರಿತುಕೊಳ್ಳುವಂತೆ ಮಾಡುತ್ತದೆ. ಒಂಬತ್ತು ದಿನಗಳ ಕಾಲ ದೇವಿಗೆ ಅಲಂಕಾರ ಮಾಡಿ, ಒಂಭತ್ತು ರೂಪಗಳಲ್ಲಿ ದೇವಿಯನ್ನು ಪೂಜಿಸುವ ವಿಧಾನವನ್ನೇ ನವರಾತ್ರಿ ಎಂದು ಕರೆಯುತ್ತಾರೆ. ದೇಶ-ವಿದೇಶಗಳಲ್ಲಿ ವಿವಿಧ ರೂಪಗಳಲ್ಲಿ ಪೂಜಿಸಲ್ಪಡುವ ದುರ್ಗಾಮಾತೆಗೆ, ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾಕಾರ್ಯಗಳು ನೆರವೇರುತ್ತವೆ.…
-

ವರ್ಷಕ್ಕೆ 7 ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ; ಕಾರವಾರದಲ್ಲೊಂದು ವಿಭಿನ್ನ ದೇವಾಲಯ!
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ, ಕೆಲವು ದೇವಾಲಯಗಳಲ್ಲಿ ದಿನವಿಡೀ ವಿವಿಧ ಸೇವೆಗಳು ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ, ಕಾರವಾರದ ಹಣಕೋಣದಲ್ಲಿರುವ ದೇವಾಲಯದಲ್ಲಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹೌದು, ಇಂತಹದೊಂದು ವಿಭಿನ್ನ ದೇವಾಲಯ ಕಾರವಾರದ ಹಣಕೋಣದಲ್ಲಿ ಇದೆ. ಸಾತೇರಿ ದೇವಿ ಎಂದೇ ಕರೆಸಿಕೊಳ್ಳುವ ಈ ದೇವಾಲಯದಲ್ಲಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ಪೂಜೆ ನಡೆಯುತ್ತದೆ. ಸಾತೇರಿ ದೇವಿ ತನ್ನ ಜಾತ್ರಾ…
-

ಶ್ರೀ ಕ್ಷೇತ್ರ ಗುಂಡಬಾಳ | ಯಕ್ಷ ಕಾಶಿ | ಯಕ್ಷಗಾನದ ತವರು
ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧 ವರ್ಷದಲ್ಲಿ ಐದು ತಿಂಗಳು, ಒಂದೇ ಕ್ಷೇತ್ರದ ಒಂದೇ ರಂಗಸ್ಥಳದಲ್ಲಿ ನಿರಂತರ ಹರಕೆಯ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಗುಂಡಬಾಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಂದಿನ ಎಂಟು ವರ್ಷಗಳ ವರೆಗಿನ ಹರಕೆಯ ಸೇವೆಯಾಟವು ಈಗಾಗಲೇ ಮುಂಗಡವಾಗಿ ಬುಕ್ಕಿಂಗ್ ಆಗಿದೆ! ಹೌದು, ಗುಂಡಬಾಳ ಕ್ಷೇತ್ರ ಭಕ್ತರಿಗೆ ಹರಕೆಯ ತಾಣವಾದರೆ, ಕಿರಿಯ ಕಲಾವಿದರಿಗೆ ಕಲಿಕೆಯ ತಾಣ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿರುವ ಗುಂಡಬಾಳ ಕ್ಷೇತ್ರದ ಆರಾಧ್ಯ…
-

300 ವರ್ಷಗಳ ಸಂಘರ್ಷಗಳ ತರುವಾಯ ಪಣಜಿಯಲ್ಲಿ ವಿರಾಜಮಾನಳಾಗಿದ್ದ ಕುಮಟಾದಿಂದ ಬಂದ ಮಹಾಲಕ್ಷ್ಮಿ
ಈಗ ನೀವು ಸುಗ್ಗಿ ಸಂಪದ ಜಾಲತಾಣದಲ್ಲಿ ಈ ಮಾಹಿತಿಯನ್ನು ಕೇಳಬಹುದಾಗಿದೆ. 🎧 ರಾಜ್ಯದೆಲ್ಲೆಡೆ ದೇವಾಲಯಗಳಲ್ಲಿ ನವರಾತ್ರಿಯನ್ನು ಭಕ್ತಿ ಮತ್ತು ಸಂಭ್ರಮಗಳಿಂದ ಆಚರಿಸುತ್ತಾರೆ. ನವರಾತ್ರಿಯ ಉತ್ಸವವನ್ನು ಪಣಜಿಯ ಅಧಿದೇವತೆಯಾದ ಮಹಾಲಕ್ಷ್ಮಿ ದೇವಾಲಯದಲ್ಲಿ ಇತರ ಸ್ಥಳಗಳಿಗಿಂತ ಹೆಚ್ಚು ಅದ್ಧೂರಿಯಾಗಿ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಆಗಮಿಸಿ, ಪಣಜಿಯ ಅಧಿದೇವತೆಯಾಗಿ ಮೆರೆಯುತ್ತಿರುವ ತಾಯಿಗಾಗಿ ಭಕ್ತರು ನಡೆಸಿದ 300 ವರ್ಷಗಳ ಸಂಘರ್ಷದ ಒಂದು ವಿಹಂಗಮ ನೋಟ ಇಲ್ಲಿದೆ. 300 ವರ್ಷಗಳ ನಂತರ ನಿರ್ಮಾಣಗೊಂಡ ಮೊದಲ ದೇವಾಲಯ ಇದಾಗಿದೆ. ಗೋವಾದಲ್ಲಿ ಮಹಾಲಕ್ಷ್ಮಿ ದೇವಾಲಯ…
-

ಗೋಕರ್ಣದ ಹೋಳ್ಕರ್ ವಾಡ – ರೇವಳೇಶ್ವರ ಮಹಾದೇವನ ದೇವಸ್ಥಾನ
ಗೋಕರ್ಣದಲ್ಲಿ ಹೋಳ್ಕರ್ ವಾಡಾ ಎಂಬ ಸ್ಥಳವಿದೆ ಇದರ ಒಳಗೆ ರೇವಳೇಶ್ವರ ಮಹಾದೇವನ ದೇವಸ್ಥಾನ ಮತ್ತು ಹಿಂದೆ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆ ಇದೆ. ಆವರಣವು ಹಣ್ಣಿನ ತೋಟ ಮತ್ತು ಗರೀಬ್ಖಾನವನ್ನು ಹೊಂದಿದೆ. ಗೋಕರ್ಣದ ಹೋಳಕರ ವಾಡಾದಲ್ಲಿ ಮರಾಟರಲ್ಲಿ ರಾಜಪಾಲಿ (ಕುರುಬ ದೊರೆಗಳು) ಪಂಗಡಕ್ಕೆ ಸೇರಿದ ಇಂದೋರ್ ಸಂಸ್ಥಾನದ ಲಾಂಛನವು ಪ್ರವೇಶ ದ್ವಾರದ ಬಲಭಾಗದಲ್ಲಿದೆ (ಕುರುಬ-ಹಟ್ಟಿಕಾರರ ಲಾಂಛನಗಳಲ್ಲಿ ಟಗರು, ಎತ್ತುಗಳ ಚಿತ್ರವಿರುತ್ತದೆ). ಶಾಂತಿ, ಸುವ್ಯವಸ್ಥೆಗೆ ಹೆಸರಾಗಿದ್ದ ಇಂದೋರ ರಾಣಿ ಅಹಲ್ಯಾಬಾಯಿ ಹೋಳ್ಕರ ಯುದ್ಧಗಳಲ್ಲಿ ಸೇನೆಯ ಮುಂದಾಳತ್ವವನ್ನು ಸ್ವತಃ…
-

ಚಿಗಳ್ಳಿ ದೀಪನಾಥೇಶ್ವರ ದೇಗುಲ – ಎಣ್ಣೆ, ಬತ್ತಿ ಇಲ್ಲದೇ ಉರಿಯುವ ಈ 3 ದೀಪಗಳು
ಬೃಹ್ಮ ವಿಷ್ಣು ಮಹೇಶ್ವರ ರೂಪದಲ್ಲಿ ನಿರಂತರವಾಗಿ ಉರಿಯುತ್ತಿರುವ ಮೂರು ದೀಪಗಳು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಸುಮಾರು 43 ವರ್ಷಗಳಿಂದ ನಿರಂತರವಾಗಿ 3 ದೀಪಗಳು ಯಾವುದೇ ಎಣ್ಣೆ, ಬತ್ತಿ ಇಲ್ಲದೆ ವಿಸ್ಮಯ ರೀತಿಯಲ್ಲಿ ಉರಿಯುತ್ತಿವೆ. ಈ ಗ್ರಾಮವು ಮುಂಡಗೋಡ ಮತ್ತು ಶಿರಸಿ ಮಾರ್ಗದ ಮಧ್ಯ ಬರುವ ಕಾವಲಕೊಪ್ಪ ಗ್ರಾಮದಿಂದ ಸುಮಾರು 1 ಕಿ.ಮೀ ಸಮೀಪ ಪವಿತ್ರವಾದ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ಸ್ಥಳಕ್ಕೆ ಬರುತ್ತದೆ. ಈ 3 ವಿಸ್ಮಯ ದೀಪಗಳು ನೋಡಲು…
-

ಸಹಸ್ರ ಲಿಂಗ ದರ್ಶನ – ಶಿವರಾತ್ರಿ ವಿಶೇಷ
ಕರ್ನಾಟಕದ ಪಶ್ಚಿಮ ಘಟ್ಟಗಳು ಹಚ್ಚ ಹಸಿರಿನಿಂದ ಕೂಡಿದ, ಕಣ್ಮನ ಸೆಳೆಯುವ ಜಲಪಾತಗಳಿಂದ ಮೈ ತುಂಬಿಕೊಂಡಿರುವಿದಷ್ಷೇ ಅಲ್ಲದೆ, ಹಲವಾರು ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾದ ತಾಣವಾಗಿದೆ. ಅಂತಹ ಧಾರ್ಮಿಕ ಸ್ಥಳಗಳಲ್ಲಿ ಒಂದು “ಸಹಸ್ರಲಿಂಗ” ಎಂಬ ತಾಣ. “ಸಹಸ್ರಲಿಂಗ” ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಿಂದ ಸುಮಾರು ೧೭ ಕಿ.ಮಿ. ದೂರದಲ್ಲಿರುವ ಒಂದು ಧಾರ್ಮಿಕ ಕ್ಷೇತ್ರ. ಬೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರ ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಜನಾಕರ್ಷಣೆಯ ತಾಣವಾಗಿದೆ. ಸಾವಿರಾರು ಶಿವಲಿಂಗಗಳು ಈ ಸ್ಥಳದಲ್ಲಿ ಇರುವುದರಿಂದ ಈ ಸ್ಥಳಕ್ಕೆ ಸಹಸ್ರಲಿಂಗ…
-

ಯಲ್ಲಾಪುರದ ಶಕ್ತಿಪೀಠ | ಗ್ರಾಮದೇವಿ
ಶ್ರೀ ದೇವೀ ಭುವನೇಶ್ವರೀ | ವಿಜಯತೇs ಯಲ್ಲಾಪುರ ವಾಸಿನೀ ||ಸರ್ವೇಶಾದಿ ಕುಟುಂಬಿನೀ | ಶುಭಕರೀ ವಾಮೇಲ ಸತ್ಕಾಲಿಕಾ ||ಕಾಲೀ ದಕ್ಷಿಣಪಾರ್ಶ್ವರಾಜಿತಾ | ಶಿವಾ ಸಂಶೋಭಿತೇ ಯಾ ಸದಾ ||ಸಾ ಸಂರಕ್ಷತು ಸರ್ವಜನನೀ | ಪ್ರಾಣಾ ಅಹಿಂಸಾತ್ಮಕಾ || ಶ್ರೀಮಾರಿಕಾಂಬೆಯ ಶ್ರೇಷ್ಠತೆ ಇದು. ಶ್ರೀದೇವಿ, ಮಹಾಲಕ್ಷ್ಮೀ, ಮಹಾದೇವಿ ಹೀಗೆ ಅನೇಕತೆರನಾಗಿ “ಶ್ರೀದೇವೀಪುರಾಣ” ಮತ್ತು “ಶ್ರೀದೇವೀಭಾಗವತ”ದಲ್ಲಿ ಹೊಗಳಲ್ಪಟ್ಟಿದೆ. ತಾಯಿ ತನ್ನ ಮಗುವನ್ನು ಎಷ್ಟು ಪ್ರೀತಿಯಿಂದ ಲಾಲಿಸಿ-ಪೋಷಿಸುವುದೋ… ತನ್ನ ಕುಟುಂಬವನ್ನು ಪ್ರ್ರೀತಿಸುವುದೋ… ಹಾಗೆಯೇ ಮಾರಿಕಾಂಬೆಯೂ ಸಕಲ ಜೀವ-ಜಂತುಗಳನ್ನೂ ಪರಿಪಾಲಿಸುವುದು. ನಂಬಿದವರ ಕೈಬಿಡದ…
-

ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನ, ಅಂಕೋಲಾ
ಸ್ಥಾಪನೆ : 16 ನೇ ಶತಮಾನದಲ್ಲಿ 43 ಕುಟುಂಬಗಳು ಮತ್ತು ಅವರ ಅನುಯಾಯಿಗಳಿಂದ ಸ್ಠಾಪಿಸಲ್ಪಟ್ಟಿತು. ಇತಿಹಾಸ ಮತ್ತು ದಂತಕಥೆ: ಮೂಲತಃ ಈ ಕುಲದೇವತಾ ದೇವಾಲಯವು ಗೋವಾದ ನಾಗ್ವೆಯಲ್ಲಿತ್ತು. ಪೋರ್ಚುಗೀಸ್ ದೌರ್ಜನ್ಯದಿಂದಾಗಿ, ಭಕ್ತರು ದೇವತೆಗಳೊಂದಿಗೆ ದಕ್ಷಿಣಕ್ಕೆ ಹೋಗಲು ನಿರ್ಧರಿಸಿದರು. ಆದರೆ ಅವರಿಗೆ ಒಂದು ಸಮಸ್ಯೆ ಇತ್ತು, ಏಕೆಂದರೆ ಶ್ರೀ ಲಕ್ಷ್ಮೀನಾರಾಯಣನನ್ನು ವಿಗ್ರಹದ ರೂಪದಲ್ಲಿ ಪೂಜಿಸಲಾಗುತಿತ್ತು ಮತ್ತು ಶ್ರೀ ಮಹಾಮಾಯೆಯು ರೋಹಿಣಿ ಎಂಬ ಪವಿತ್ರ ಇರುವೆಗೂಡಿನ ರೂಪದಲ್ಲಿ ನೆಲೆಸಿದ್ದಳು. ಆಗ ಏನು ಮಾಡಬೇಕೆಂದು ತಿಳಿಯದೆ, ಅವರು ದರ್ಶನ ಸೇವೆಯಲ್ಲಿ ಮಾರ್ಗದರ್ಶನವನ್ನು…
