Category: ಪ್ರವಾಸಿ ತಾಣಗಳು

  • ಮನಸೂರೆಗೊಳಿಸುವ ಸೂರ್ಯಾಸ್ತಗಳು

    ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧 ಕರಾವಳಿ ನಾಡಲ್ಲಿ ಸೂರ್ಯ ತಂಪಾಗುವ ಹೊತ್ತನ್ನು ಕಣ್ತುಂಬಿಸಿಕೊಳ್ಳುವುದೇ ಸೊಗಸು. ಕೆಂಪೇರಿದ ಆಗಸವನ್ನು ನೋಡುತ್ತಾ ಆಯಾಸವನ್ನೆಲ್ಲಾ ಮರೆಯುತ್ತಾ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಇಂಗಿತ ಇದ್ದರೆ ಕರಾವಳಿ ನಾಡಿನ ಈ ತಾಣಗಳತ್ತ ಹೆಜ್ಜೆಹಾಕಿ… ಜೇನುಕಲ್ಲು ಗುಡ್ಡ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಿದಾದ ಬೇಡ್ತಿ ಕಣಿವೆ. ಹಸಿರು ಹೊದ್ದುಕೊಂಡ ಪರ್ವತಗಳು. ದಟ್ಟ ಅರಣ್ಯ, ಇಲ್ಲಿ ಸೂರ್ಯಾಸ್ತದ ಸೊಬಗು ವರ್ಣಿಸಲು ಅಸಾಧ್ಯ. ಪ್ರವಾಸಿಗರು ಹೇರಳ ಸಂಖ್ಯೆಯಲ್ಲಿ ಬರುತ್ತಾರೆ. ಯಲ್ಲಾಪುರದಿಂದ ಮಾಗೋಡು…

  • ಧರ್ಮಾ ಜಲಾಶಯ, ಮಳಗಿ – ಮುಂಡಗೋಡದ ಆಕರ್ಷಣೀಯ ಸ್ಥಳ

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ದಟ್ಟ ಕಾನನದ ಮಧ್ಯೆ ವಿಶಾಲವಾಗಿ ವಿಸ್ತರಿಸಿಕೊಂಡಿರುವ, ಧರ್ಮಾ ಜಲಾಶಯ ಮಳೆಗಾಲದಂದು ಮೈದುಂಬಿಕೊಂಡು ಆಕರ್ಷಣೀಯ ಸ್ಥಳವಾಗಿ ಮಾರ್ಪಡುತ್ತದೆ. ಕೋಡಿ ಬಿದ್ದ ನೀರನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಪ್ರವಾಸಿಗರಲ್ಲಿ ಮೂಡುತ್ತದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಕಂದುಬಣ್ಣದ ನೀರು, ಪೂರ್ವಾಭಿಮುಖವಾಗಿ ತಿಳಿ ತಿಳಿಯಾಗಿ ರಭಸದಿಂದ ಧುಮ್ಮಿಕ್ಕುತ್ತಿರುವ ಜಲರಾಶಿ ನೋಡಲು ಎರಡು ಕಣ್ಣುಗಳು ಸಾಲದು. ಮಳೆಗಾಲದಲ್ಲಿ ದಿನದಿಂದ ದಿನಕ್ಕೆ ಕೋಡಿ ನೀರಿನ ಪ್ರಮಾಣ ಹೆಚ್ಚಳವಾಗುತ್ತದೆ. ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯ ಕೋಡಿ ಬಿದ್ದು (ಒಳನೀರಿನ…

  • ದಟ್ಟ ಅರಣ್ಯದೊಳಗೆ ಪುಟ್ಟ ನಡಿಗೆ – ಉತ್ತರ ಕನ್ನಡ ಸಫಾರಿ

    ಹೇಳಿಕೇಳಿ ದಟ್ಟ ಅರಣ್ಯದ ಬೀಡು ಉತ್ತರಕನ್ನಡ. ವನ್ಯರಾಶಿಯೊಳಗೆ ವನ್ಯಜೀವಿಗಳು ಬೀಡುಬಿಟ್ಟಿವೆ. ಹೆಜ್ಜೆ ಹೆಜ್ಜೆಗೂ ಕೌತುಕ ಮೂಡಿಸುವ ಒಂದಿಷ್ಟು ಅರಣ್ಯಧಾಮಗಳ ಪರಿಚಯ ನಿಮಗಾಗಿ. ದಾಂಡೇಲಿ ಮುಖ್ಯವಾಗಿ ಇಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇದೆ. 8 ಸಾವಿರ ಚ.ಕಿ.ಮೀ. ಪ್ರದೇಶವನ್ನು ಇದು ಒಳಗೊಂಡಿದೆ. ಇಲ್ಲೇ ಆನೆ ಧಾಮವೂ ಬರುತ್ತಿರುವುದು ವಿಶೇಷವಾಗಿದೆ. ಆನೆ ಸಫಾರಿ, ಸಫಾರಿ ಇಲ್ಲಿನ ವಿಶೇಷವಾಗಿದೆ. ದಟ್ಟವಾದ ನಿತ್ಯಹರಿದ್ವರ್ಣದ ಕಾಡಿನಲ್ಲಿ ಹುಲಿ, ಚಿರತೆ, ಕಾಡುಕೋಣ, ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳನ್ನು ನೋಡಬಹುದು. ಹಾರ್ನಬಿಲ್‌ಗಳ ತಾಣವಾಗಿದೆ. ಪಕ್ಷಿ ವೀಕ್ಷಣೆಯೂ ಮತ್ತೊಂದು…

  • ಏಕಾಂತದ ‘ಲೇಡಿಸ್ ಬೀಚ್’, ಕಾರವಾರ

    ಆಂಗ್ಲರ ಕಾಲದಲ್ಲಿ ಆಂಗ್ಲ ಮಹಿಳೆಯರು ದೋಣಿಗಳ ಮೂಲಕ ಇಲ್ಲಿಗೆ ಜಲಕ್ರೀಡೆಗೆ ಬರುತ್ತಿದ್ದರಂತೆ. ಅದಕ್ಕಾಗಿ ಈ ಕಡಲತೀರಕ್ಕೆ ಬ್ರಿಟಿಷರು ‘ಲೇಡಿಸ್ ಬೀಚ್’ ಎಂದು ಕರೆಯುತ್ತಿದ್ದರು ಮತ್ತು ಈಗಲೂ ಅದೇ ಹೆಸರಿನಿಂದ ಈ ಸ್ಥಳವನ್ನು ಗುರುತಿಸಲಾಗುತ್ತಿದೆ. ಈಗಲೂ ಇದನ್ನು ನೋಡಬೇಕಾದರೆ ದೋಣಿಯಲ್ಲೇ ಸಾಗಬೇಕು… ಏಕೆಂದರೆ ಇನ್ನೊಂದು ಬದಿಯೆಲ್ಲವೂ ಕಾಡಿನಿಂದಲೇ ಕೂಡಿದೆ. ಆಂಗ್ಲ ಮಹಿಳೆಯರ ಜಲಕ್ರೀಡೆಯ ತಾಣ ಲೇಡಿಸ್‌ ಕಡಲತೀರ ಇದು ಒಂದು ಚಿಕ್ಕದಾದ, ಸುಂದರವಾದ ಕಡಲತೀರ. ಈ ಕಡಲ ತೀರದಲ್ಲಿ ಅಲೆಗಳ ಆರ್ಭಟಗಳು ಇಲ್ಲ. ಇಲ್ಲಿ ಎತ್ತರವಾದ ಬಂಡೆಗಳ ಸಾಲುಗಳು,…

  • ದೇಶದ ಪ್ರಥಮ ‘ಕೆನೋಪಿ ವಾಕ್’ – ಮರಗಳ ಮೇಲೆ 250 ಮೀಟರ್ ಉದ್ದದ ಸೇತುವೆ!

    ಇಷ್ಟು ವರ್ಷಗಳ ಕಾಲ ಮರಗಳ ಅಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಆದರೆ ಈಗ ಮರಗಳ ಮೇಲೆ, ಅಲ್ಲ ಮರದಿಂದ ಮರಕ್ಕೆ ನಡೆದಾಡುತ್ತ, ಓಡಾಡುತ್ತ ವಿಹಂಗಮ ನೋಟವನ್ನು ಆಸ್ವಾದಿಸುವುದು ನಮ್ಮ ದೇಶದ ಮಟ್ಟಿಗೆ ಹೊಸ ಕಲ್ಪನೆಯೇ ಸರಿ. ಆದರೆ ಈಗಾಗಲೆ ಇದು ಸಾಕಾರಗೊಂಡಿದೆ. ಮಲೇಷ್ಯಾದಲ್ಲಿ ಕೆನೋಪಿ ವಾಕ್‌ ಜನಪ್ರಿಯಗೊಂಡಿದೆ. ಬೇರೆ ಬೇರೆ ದೇಶಗಳ ಜನತೆ ಮರಗಳ ಮೇಲೆನಡಿಗೆಗಾಗಿ ಮಲೇಷ್ಯಾದತ್ತ ಮುಖ ಮಾಡುತ್ತಿದ್ದಾರೆ. ಈಗ ದೇಶದ ಪ್ರಥಮ ಕೆನೋಪಿ ವಾಕ್‌ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಜೋಯಿಡಾದಲ್ಲಿ ನಿರ್ಮಾಣಗೊಂಡು, ಸಾರ್ವಜನಿಕರಿಗೆ…

  • ಉಮ್ಮಳ್ ಜೂಗ್ – ಒಂದು ಸುಂದರ ದ್ವೀಪ

    ಒಂದೆಡೆ ಮನೋಲ್ಲಾಸಗೊಳಿಸುವ ಕಡಲ ಅಲೆಗಳ ನೀನಾದ, ಇನ್ನೊಂದೆಡೆ ಕಣ್ಮನ ಸೆಳೆಯುವ ಸಹ್ಯಾದ್ರಿಯ ಸಾಲುಗಳ ಸರಮಾಲೆ, ಅದೆಷ್ಟೋ ಪ್ರೇಕ್ಷಣೀಯ ಸ್ಥಳಗಳ ನೆಲೆ ಬೀಡು, ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರವಾಸಿ ತಾಣಗಳು, ಯಾತ್ರಾ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ. ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿಯಾಗಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ದ್ವೀಪಗಳಿವೆ‌. ಸುತ್ತಲೂ ನೀರು ಒಂದೆಡೆ ನೆಲದಿಂದ ಕೂಡಿರುವ ಹಲವಾರು ಪ್ರದೇಶಗಳು ಇಲ್ಲಿ ಕಾಣಸಿಗುತ್ತವೆ. ಕೂರ್ವೆ ದ್ವೀಪ, ನೇತ್ರಾಣಿ ದ್ವೀಪ, ದೇವಗಡ, ಬಸವರಾಜ ದುರ್ಗ ಹೀಗೆ ಹಲವು…

  • ಮನಮೋಹಕ ಗೋಲಾರಿ ಜಲಪಾತ – ಕಾರವಾರ

    ಗೋಲಾರಿ ಜಲಪಾತವು ಕರ್ನಾಟಕದ ತೋಡೂರಿನಲ್ಲಿರುವ ಅತ್ಯಂತ ಸುಂದರವಾದ ಜಲಪಾತವಾಗಿದೆ. ಇದು ಕಾರವಾರದ ನಗರ ಕೇಂದ್ರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ಗೋಲಾರಿ ಜಲಪಾತವು ಕಾರವಾರ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಜಲಪಾತವು ದಟ್ಟ ಕಾಡಿನ ಮಧ್ಯದಲ್ಲಿ ಇರುವುದರಿಂದ ಜಲಪಾತದ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದೆ. ಈ ಜಲಪಾತಕ್ಕೆ ಹೋಗುವ ಮಾರ್ಗವು ಪ್ರವಾಸಿಗರಿಗೆ ಸಾಹಸಮಯ ಚಾರಣದ ಅನುಭವವನ್ನು ನೀಡುತ್ತದೆ. ಜಲಪಾತದ ಪತವು ಬಹಳ ಮೋಡಿಮಾಡುವ ನೋಟವನ್ನು ಹೊಂದಿದೆ ಮತ್ತು ಪ್ರೀತಿಪಾತ್ರರೊಂದಿಗೆ ಮೋಜು ತುಂಬಿದ ಸಮಯವನ್ನು ಕಳೆಯಲು…

  • ಮುಕ್ತಿ ಜಲಪಾತ – ಕೋಡಿಗದ್ದೆ, ಸಿದ್ದಾಪುರ

    ಮುಕ್ತಿ ಜಲಪಾತವು ದಟ್ಟವಾದ ಕಾಡಿನಲ್ಲಿರುವ ಅತ್ಯಂತ ಸುಂದರವಾದ ಜಲಪಾತವಾಗಿದೆ. ಈ ಜಲಪಾತವು ಸಿದ್ದಾಪುರ ನಗರದಿಂದ 36 ಕಿ.ಮೀ ದೂರದಲ್ಲಿದೆ. ಇದು ಕೋಡಿಗದ್ದೆ ಗ್ರಾಮದ ಸಮೀಪದಲ್ಲಿದೆ. ಈ ಜಲಪಾತಕ್ಕೆ ಹೋಗುವುದು ಸುಲಭವಲ್ಲ, ಏಕೆಂದರೆ ಈ ಜಲಪಾತವನ್ನು ತಲುಪಲು ದಟ್ಟವಾದ ಮತ್ತು ಕಡಿದಾದ ಕಾಡಿನಲ್ಲಿ 4 ಕಿ.ಮೀ. ಕಾಲುದಾರಿಯಲ್ಲಿ ಸಾಗಬೇಕು. ಪ್ರತಿಯೊಂದು ತಿರುವಿನಲ್ಲಿಯೂ ರಸ್ತೆ ತಪ್ಪುವ ಸಾಧ್ಯತೆಗಳಿವೆ. ಸ್ಥಳೀಯರ ಮಾರ್ಗದರ್ಶನವಿಲ್ಲದೆ ಈ ಜಲಪಾತವನ್ನು ತಲುಪಲು ಸಾಧ್ಯವಿಲ್ಲ. ಈ ಜಲಪಾತದ ಬಳಿ ಯಾವುದೇ ಹೋಟೆಲ್‌ಗಳು ಅಥವಾ ಅಂಗಡಿಗಳನ್ನು ನೀವು ಕಾಣದ ಕಾರಣ…

  • ಮುರೇಗಾರ್ ಜಲಪಾತ – ಶಿರಸಿ

    ಮುರೇಗಾರ್ ಜಲಪಾತವು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿರುವ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಶಿರಸಿಯಿಂದ ಶಿರಸಿ-ಹುಲೇಕಲ್ ರಸ್ತೆಯ ಮೂಲಕ 21 ಕಿ.ಮೀ ದೂರದಲ್ಲಿದೆ. ಈ ಜಲಪಾತವು “ಶಾಲ್ಮಲಾ ನದಿ” ಯ ಉಪ ನದಿಯಾದ “ಮುರೆಗರ್ ಹಳ್ಳ” ಎಂಬ ಸಣ್ಣ ಜರಿಯಿಂದ ಹುಟ್ಟಿಕೊಂಡಿದೆ. ಇಲ್ಲಿ ನೀವು “ಶಿವ ಲಿಂಗಗಳು”, “ಷಣ್ಮುಖ”, “ನಂದಿ” ಮತ್ತು ಇತರ ದೇವರುಗಳ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಕಾಣಬಹುದು. ನೀವು ಜಲಪಾತದವರೆಗೆ ವಾಹನವನ್ನು ತೆಗೆದುಕೊಂಡು ಹೋಗಬಹುದು. ನೀವು “ಶಿವಗಂಗಾ ಜಲಪಾತ” ಕ್ಕೆ ಭೇಟಿ ನೀಡಲು…

You cannot copy content of this page