ಸಮಗ್ರ ಕಾವ್ಯ – ದಿನಕರ ದೇಸಾಯಿ

Posted by

·

SAMAGRA KAVYA – A collection of poems of Late Dr. Dinakar Desai.

ಆಧುನಿಕ ಕನ್ನಡ ಕವಿಗಳಲ್ಲಿ ದಿನಕರ ದೇಸಾಯಿ ಅವರದು ಒಂದು ಗೌರವಾನ್ವಿತ ಹೆಸರು. ಒಬ್ಬ ವಿದ್ಯಾರ್ಥಿಕವಿಯಾಗಿಯೇ ಅವರು ನಾಡಿನ ತುಂಬಾ ಹೆಸರು ಮಾಡಿದವರು…

ದಿನಕರ ದೇಸಾಯರ ಕವನಗಳಲ್ಲಿ ಕಂಡುಬರುವ ವರ್ತಮಾನದ ಎಚ್ಚರ ಯಾರನ್ನಾದರೂ ಬೆರಗುಗೊಳಿಸುವಂತಿದೆ. ನಲ್ವತ್ತರ ದಶಕದಷ್ಟು ಹಿಂದೆಯೇ ಬರೆದ ‘ತರುಣರ ದಸರೆ’ ಈ ಅಭಿಪ್ರಾಯಕ್ಕೊಂದು ನಿಚ್ಚಳ ನಿದರ್ಶನ… ‘ ಕಾಲಿನ ಜೋಡು’ ಅನ್ನುವ ಒಂದು ಸರಳ ಕವನದಲ್ಲೂ ಮಾನವೀಯತೆಯ ಮರ್ಯಾದೆ ಹೆಚ್ಚಿಸುವಂಥ ದೃಷ್ಟಿಯೊಂದನ್ನು ಇಡಬಲ್ಲ ಕವಿ.

ದಿನಕರ ದೇಸಾಯರ ಕಾವ್ಯದ ಇನ್ನೊಂದು ಲಕ್ಷಣ ಚುರುಕು ಮುಟ್ಟಿಸುವ ವಿಡಂಬನೆ ಮತ್ತು ವಿನೋದಗುಣ. ಈ ವಿಡಂಬನೆ ಮತ್ತು ವಿನೋದಗಳ ತೀವ್ರತೆಯಿಂದಾಗಿಯೇ ಅವರ ಚೌಪದಿಗಳೂ ನಾಡಿನ ತುಂಬಾ ಹೆಸರು ಮಾಡಿರುವುದು.

ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಿನಕರ ದೇಸಾಯಿ ಶೋಷಿತರಪರ ದನಿಯೆತ್ತಿದ ಕವಿಯೆಂದೇ ಗುರುತಿಸಲ್ಪಡುತ್ತಾರೆ. ‘ಹಸಿವೆಯಿಂದ ಕಂಗೆಟ್ಟ ನರನ ಮನಸ್ಸೇ ಕ್ರಾಂತಿಬೀಜಕ್ಕೆ ಭೂಮಿ’ ಎಂಬುದು ಈ ಕವಿಯ ನಂಬಿಕೆ.

ದೇಸಾಯರ ಬಹುಸಂಖ್ಯೆಯ ಕವನಗಳಲ್ಲಿ ಶ್ರಮ ಸಂಸ್ಕೃತಿ ಕುರಿತ ಕಾಳಜಿ, ಸಮಾನತೆ ಕುರಿತು ಎಚ್ಚರ, ನೆಲದಪ್ರೀತಿಗಳನ್ನು ಪುಷ್ಪಳವಾಗಿ ಕಾಣಬಹುದಾಗಿದೆ. ಇವರು ಸಾಮಾನ್ಯ ಜನರಿಗಾಗಿಯೇ ಬರೆದ ಜನತಾ ಕವಿ.

‘ಪ್ರಸ್ತಾವನೆ ‘ಯಿಂದ

ಪ್ರಕಾಶಕರು: ಕೆನರಾ ವೆಲ್ ಫೇರ್ ಟ್ರಸ್ಟ್, ಅಂಕೋಲಾ (ಉತ್ತರ ಕನ್ನಡ) ೨೦೦೭


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading