ಉತ್ತರ ಕನ್ನಡದ ಮನದಾಳದ ಗೀತೆ ಹೊ ಹೊ ಚೊ|| ದಿನಕರನ ಕುಂಚ

Posted by

·

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ಈ ಹಾಡನ್ನು ಕೇಳಿರಿ. 🎧

ಉತ್ತರ ಕನ್ನಡ ಜಿಲ್ಲೆಯ ಏಳಿಗೆಗೆ ಶ್ರಮಿಸಿದವರಲ್ಲಿ ದಿನಕರ ದೇಸಾಯಿಯವರು ಪ್ರಮುಖರಲ್ಲಿ ಒಬ್ಬರು. ಇವರ ಬರವಣಿಗೆಯಿಂದ ರೂಪುಗೊಂಡ ಸುಂದರ ಚೌಪದಿಗಳು ಸೇರಿ ಉತ್ತರ ಕನ್ನಡ ಜಿಲ್ಲೆಯ ಸೌಂದರ್ಯ, ಆಹಾರ, ಆಚಾರ, ವಿಚಾರಗಳನ್ನು ಎತ್ತಿ ಹಿಡಿಯುವ ಸುಂದರ ಗೀತೆಯಾಗಿ ಪರಿವರ್ತನೆಗೊಂಡಿದೆ. ಇದು ಉತ್ತರ ಕನ್ನಡಿಗರ ಅದರಲ್ಲೂ ಅಂಕೋಲಿಗರ ಮನದಾಳದ ಹಾಡಾಗಿ ಈಗಲೂ ಹಬ್ಬ ಹಾಗು ವಿಶೇಷ ಸಂದರ್ಭದಲ್ಲಿ ಮೊಳಗುತ್ತಿದೆ.

ದಿನಕರರ ಬರವಣಿಗೆಯ ರೀತಿ ಬಹಳ ಸುಲಭ. ಅವರ ಚೌಪದಿ ಅರ್ಥಮಾಡಿಕೊಳ್ಳಲು ಭಾಷ್ಯ, ಅಡಿಟಿಪ್ಪಣಿಗಳು ಅವಶ್ಯವಿಲ್ಲ. ಶೈಲಿ ಬಹಳ ಸುಲಭ. ಅವರ ಚೌಪದಿ ಪಂಡಿತರಿಗೆ ವಿಮರ್ಶಕರಿಗೆ ಅಷ್ಟೇ ಸೀಮಿತವಾಗದೆ ಜನಸಾಮಾನ್ಯರ ಮನವನ್ನು ಮುಟ್ಟುತ್ತದೆ. ಭಾವನೆ ಮಿಡಿಯುತ್ತದೆ. ಚೌಪದಿಗಳಲ್ಲಿ ಸೊಗಸು ಇದ್ದರೆ ಅದಕ್ಕೆ ಮುಖ್ಯ ಕಾರಣ ಕನ್ನಡ ನುಡಿಯ ಶ್ರೀಮಂತಿಕೆ ಎನ್ನುವ ವಿನೀತ ಭಾವ ಇದರಲ್ಲಿ ವ್ಯಕ್ತವಾಗುತ್ತದೆ. ಕರ್ನಾಟಕದ ಏಕೀಕರಣ ಹೋರಾಟದ ಪ್ರಮುಖರಲ್ಲಿ ಒಬ್ಬರಾದ ದಿನಕರರು ನಾಡು ನುಡಿಯನ್ನು ಕೊಂಡಾಡಿದ್ದು ಹೀಗೆ –

ಚೌಪದಿಗಳು:

ನನ್ನ ಜಿಲ್ಲೆ
ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲ್ಲಿ ಅಡಕೆ ತೆಂಗುಗಳ ಮಡಲು,
ಸಿರಿಗನ್ನಡ ಚಪ್ಪರವೇ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ.

ಹಾಲಕ್ಕಿಗಳ ಸ್ವಾಗತ ಪದ
ಅರಬೈಲು ದಾಟಿ ಬಂದಿರಿ ನಮ್ಮ ಮನೆಗೆ
ಕೈಮುಗಿದು ಸ್ವಾಗತವ ಕೋರುವೆವು ನಿಮಗೆ
ನಾವು ಬಡವರು ನಮ್ಮ ಮಡಕೆಯಲಿ ಗಂಜಿ
ನಮ್ಮ ಹೃದಯದ ಬಣ್ಣ ಕೆಂಪು ಗುಲಗುಂಜಿ.

ಮೀನು ಪಳದಿ
ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ
ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ
ಇದರ ರುಚಿ ನೋಡಿದರೆ ದೇವರೂ ಕೊನೆಗೆ
ಸ್ವರ್ಗವನ್ನಿಳಿದು ಬರುವನು ನಮ್ಮಮನೆಗೆ.

ನನ್ನ ಜಿಲ್ಲೆ
ನನ್ನ ಕನ್ನಡ ಜಿಲ್ಲೆ ಬಡತನದ ಬಿಲ್ಲೆ
ಈ ಬಿಲ್ಲೆ ಹಚ್ಚಿಕೊಂಡವರಾರು, ನಲ್ಲೆ?
ಆಗೇರ ಮುರಕುಂಡಿ, ಹಾಲಕ್ಕಿ ರಾಕು,
ಮುಕ್ರಿ ವೆಂಕಟರಮಣ, ಹಳ್ಳೀರ ತೋಕು.

ಅಂಕೋಲಿಯಲ್ಲಿ
ನಾನು ಹುಟ್ಟಿದ್ದು ಸಖಿ ಅಂಕೋಲೆಯಲ್ಲಿ
ಚಿಂತೆಯಿಲ್ಲದೆ ಸಾಯಬೇಕೆಂಬೆ ಅಲ್ಲಿ
ಅಂಕೋಲೆ ಎನ್ನುವುದು ಕನ್ನಡದ ಕಡಲು
ಈ ಕಡಲಿನೊಳಗಿರಲಿ ದಿನಕರ ಒಡಲು

ಹಾಡಿನ ಸಾಹಿತ್ಯದ ರೂಪದಲ್ಲಿ:

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲ್ಲಿ ಅಡಕೆ ತೆಂಗುಗಳ ಮಡಲು,
ಸಿರಿಗನ್ನಡ ಚಪ್ಪರವೇ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ..

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ಅರಬೈಲು ದಾಟಿ ಬಂದಿರಿ ನಮ್ಮ ಮನೆಗೆ
ಕೈಮುಗಿದು ಸ್ವಾಗತವ ಕೋರುವೆವು ನಿಮಗೆ
ನಾವು ಬಡವರು ನಮ್ಮ ಮಡಕೆಯಲಿ ಗಂಜಿ
ನಮ್ಮ ಹೃದಯದ ಬಣ್ಣ ಕೆಂಪು ಗುಲಗುಂಜಿ…

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ
ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ
ಇದರ ರುಚಿ ನೋಡಿದರೆ ದೇವರೂ ಕೊನೆಗೆ
ಸ್ವರ್ಗವನ್ನಿಳಿದು ಬರುವನು ನಮ್ಮಮನೆಗೆ..

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ನನ್ನ ಕನ್ನಡ ಜಿಲ್ಲೆ ಬಡತನದ ಬಿಲ್ಲೆ
ಈ ಬಿಲ್ಲೆ ಹಚ್ಚಿಕೊಂಡವರಾರು, ನಲ್ಲೆ?
ಆಗೇರ ಮುರಕುಂಡಿ, ಹಾಲಕ್ಕಿ ರಾಕು,
ಮುಕ್ರಿ ವೆಂಕಟರಮಣ, ಹಳ್ಳೀರ ತೋಕು..

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ನಾನು ಹುಟ್ಟಿದ್ದು ಸಖಿ ಅಂಕೋಲೆಯಲ್ಲಿ
ಚಿಂತೆಯಿಲ್ಲದೆ ಸಾಯಬೇಕೆಂಬೆ ಅಲ್ಲಿ
ಅಂಕೋಲೆ ಎನ್ನುವುದು ಕನ್ನಡದ ಕಡಲು
ಈ ಕಡಲಿನೊಳಗಿರಲಿ ದಿನಕರ ಒಡಲು..

ಹೊ ಹೊ ಚೊ
ಹೊ.. ಹೊ.. ಹೊ.. ಹೊ ಹೊ ಚೊ

ಮಾಹಿತಿಯ ಮೂಲ: ದಿನಕರಕ ಕವನ, ಚುಟುಕು ಮತ್ತು ಚೌಪದಿಗಳು


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading