ಶಿವಪುರ ಮಠ – ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಗ್ರಾಮ

Posted by

·

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ 20 ಮನೆಗಳಿರುವ ಪುಟ್ಟ ಹಳ್ಳಿ ಶಿವಪುರ . ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಮುಳುಗಡೆ ಮಾಡಿತು. ಮೊದಲು ಹಿನ್ನೀರು ದಾಟಲು ಅಪಾಯಕಾರಿಯಾದ ದೇಸಿ ತೆಪ್ಪ ಉಪಯೋಗಿಸಿದ್ದರು.
2015 ರಲ್ಲಿ ಇಲ್ಲಿ ತೂಗುಸೇತುವೆ ನಿರ್ಮಾಣವಾಯಿತು, ಈ ತೂಗುಸೇತುವೆ ಈಗ ಯಲ್ಲಾಪುರದ ಪ್ರಮುಖ ಆಕರ್ಷಣೆಯಾಗಿದೆ.

ಉಳವಿ ಕಡೆಯಿಂದ ಶಿವಪುರಕ್ಕೆ 7 ಕಿ.ಮೀ ಗಳ ದಟ್ಟ ಕಾಡಿನ ಮಧ್ಯೆ ಕಲ್ಲು ಮಣ್ಣಿನ ರಸ್ತೆ ಈ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವುದು ಕಷ್ಟ, ಪ್ರವಾಸ ಹೋದ ನಮಗೆ ಒಂದು ದಿನ ಈ ರಸ್ತೆಯಲ್ಲಿ ಬೈಕ್ ಓಡಿಸುವುದು ರೋಚಕವಾಗಿತ್ತು. ಆದರೆ ದಿನ ನಿತ್ಯ ಸಂಚಾರ …..)
ದಟ್ಟ ಕಾಡಿನ ಮಧ್ಯೆ ಈ ದಾರಿಯಲ್ಲಿ ಚಾರಣದ ಅನುಭವ ಅದ್ಬುತವಾಗಿರುತ್ತದೆ. ಶಿವಪುರದಲ್ಲಿ ಒಂದು ಮಠವಿದೆ ದಟ್ಟ ಕಾಡಿನ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಶಿವನ ಆಲಯ, ಇಲ್ಲಿ ಬರುವ ಭಕ್ತರಿಗೆ ನಿತ್ಯವು ದಾಸೋಹ ಸಹ ಇದೆ. ಇಲ್ಲಿಂದ ತೂಗುಸೇತುವೆಗೆ 3 ಕಿ.ಮೀ ದಾರಿ

ಉಳವಿಯಿಂದ ಶಿವಪುರ ಮಠ ಮತ್ತು ತೂಗುಸೇತುವೆ ನೋಡಲು ಬಾಡಿಗೆಗೆ ಜೀಪ್ ತೊರೆಯುತ್ತದೆ . ಉಳವಿಗೆ ಹೋದರೆ ತಪ್ಪಿಸದೆ ಒಮ್ಮೆ ಶಿವಪುರ ಮಠಕ್ಕೆ ಬೇಟಿ ಕೋಡಿ. ಶಿವಪುರ ಮಠದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಇದೆ.

ಮಾಹಿತಿ: ದಿನಕರ (Dinakar Hirgana)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading