ಕಾರವಾರದಿಂದ ಬೆಂಗಳೂರಿಗೆ ವಿಸ್ಟಾಡೋಮ್ ಕೋಚ್ ರೈಲು – ಸಮಯ ಹಾಗೂ ದರಪಟ್ಟಿ

Posted by

·

180 ಡಿಗ್ರಿ ತಿರುಗುವ ಕುರ್ಚಿಯಲ್ಲಿ ಕುಳಿತು, ಪರಿಸರದ ಸೌಂದರ್ಯ ಸವಿಯುತ್ತ ಪ್ರವಾಸ ಕೈಗೊಳ್ಳುವವರಿಗೆ ಇದೊಂದು ಉತ್ತಮ ಅವಕಾಶ.

ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಯ ಮಾರ್ಗವಾಗಿ ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯನ್ನು ತಲುಪುತ್ತ ಪ್ರಕೃತಿ ಸೌಂದರ್ಯ ನೋಡಲು ವಿಸ್ಟಾಡೋಮ್ ಕೋಚ್ ಸಹಕಾರಿ.

ಯಶವಂತಪುರ-ಕಾರವಾರ ಮಾರ್ಗ ಮಾಹಿತಿ

ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ). ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಸಂಜೆ 4.40ಕ್ಕೆ ತಲುಪಲಿದ್ದು, ರಾತ್ರಿ 11.20ಕ್ಕೆ ಕಾರವಾರ ತಲುಪಲಿದೆ.

ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ (ಮಂಗಳವಾರ, ಗುರುವಾರ, ಶನಿವಾರ). ಬೆಳಗ್ಗೆ 5.30ಕ್ಕೆ ಕಾರವಾರದಿಂದ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಬೆಳಗ್ಗೆ 11.10ಕ್ಕೆ ತಲುಪಲಿದೆ. ರಾತ್ರಿ 8.45ಕ್ಕೆ ಯಶವಂತಪುಕ್ಕೆ ಆಗಮಿಸಲಿದೆ.

ದರ (ಪ್ರಯಾಣದ ದರದಲ್ಲಿ ವ್ಯತ್ಯಾಸ ಸಾಧ್ಯತೆ ಇದ್ದು, ಬುಕಿಂಗ್ ಮಾಡುವಾಗ ಪರಿಶೀಲಿಸಿಕೊಳ್ಳಿ)

ಯಶವಂತಪುರ-ಮಂಗಳೂರು ಜಂಕ್ಷನ್ ಒಂದು ಮಾರ್ಗದ ದರ 1395 ರೂ.ಗಳು.

ಯಶವಂತಪುರ-ಕಾರವಾರ ಒಂದು ಮಾರ್ಗದ ದರ 2125 ರೂ.ಗಳು.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading