ಅಪ್ಸರಕೊಂಡ, ಹೊನ್ನಾವರ
ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿಯ ಶಾಸನದ ಕೆಲವು ಸಾಲುಗಳು, ಇಲ್ಲಿ ಕೆಲವು ಊರುಗಳ ಹೆಸರನ್ನು ಉಲ್ಲೇಖಿಸಿರುವುದರಿಂದ ಅದನ್ನೇ ಇಲ್ಲಿ ತೆಗೆದುಕೊಂಡೆ ೧. ಸುಂದರಿಕಾ, ೨. ಕುರ್ವಾ, ೩. ಮತ್ತಿರ್ಕಟ್ಟು, ಪಾನೀಯಪತನ ಇತ್ಯಾದಿ ಉಲ್ಲೇಖಗಳಿವೆ. ಇದು ಸುಮಾರು ೧೫೦೦ ವರ್ಷಗಳಷ್ಟು ಹಳೆಯ ಶಾಸನ. ಪ್ರಾಚೀನ ಕನ್ನಡ ಲಿಪಿಯನ್ನು ಹೊಂದಿದ ಈ ಶಾಸನ ಕರಾವಳಿ ಭಾಗದ ಜಿಲ್ಲೆಗಳ ಅತ್ಯಂತ ಪ್ರಾಚೀನ ಶಾಸನಗಳಲ್ಲೊಂದು. ಇದು ಪಶ್ಚಿಮ ಚಾಲುಕ್ಯರ ಲಿಪಿಯನ್ನು ಹೊಂದಿದ್ದು ಸ್ಪಷ್ಟವಾಗಿ ಬರೆದ ತಾಮ್ರಪಟ ಶಾಸನ.
ಸ್ವಂತ ವಿಹಾರಕ್ಕಾಗಿ, ದೀಪಕಾ ಎಂಬ ನಾಡಿನಲ್ಲಿ (ಪ್ರದೇಶ) ಸುಂದರಿಕಾ ಎಂಬ ಗ್ರಾಮವನ್ನು ನೀಡಲಾಗಿದೆ. ಅದರ ಮೇರೆಗಳು, ಪೂರ್ವದಲ್ಲಿ ಕುರ್ವಾ, ದಕ್ಷಿಣದಲ್ಲಿ ಮರ್ತಿಕಟ್ಟು, ಪಶ್ಚಿಮದಲ್ಲಿ ಪರ್ವತದ ಮೇಲಿಂದ ನೀರು ಬೀಳುವ ಝರಿ ಪ್ರದೇಶ, ಉತ್ತರದಲ್ಲಿ ಮಾವಿನ ತೋಪಿನಿಂದ ಕೂಡಿದ ಕಲ್ಲು ಪ್ರದೇಶ . . . . ಎನ್ನುವಾಗ ಪಶ್ಚಿಮದ ಮೇರೆ ಅಪ್ಸರಕೊಂಡ ಇರಬಹುದು. ಅಂದರೆ ಇದು ಅಪ್ಸರಕೊಂಡವನ್ನು ಸೂಚಿಸಬಹುದು ಎನ್ನುವ ಅಭಿಪ್ರಾಯ ನನ್ನದು. ಈಗಿನ ಅಲ್ಲಿನ ಪರಿಸರ ಹಾಗೆ ಕಾಣುತ್ತದೆ.
ಮಾಹಿತಿ: ಸದ್ಯೊಜತ ಭಟ್


Leave a Reply