Category: ಇತಿಹಾಸ
-

ಗತಕಾಲದ ಮಹಾ ಸಂಗೀತಪುರವಾಗಿದ್ದ ಹಾಡುವಳ್ಳಿ
ಸಂಗೀತ, ಶಿಲ್ಪಕಲೆಗಳ ನೆಲೆ. ಸಂಗೀತಪುರ ಎಂಬ ಹೆಸರನ್ನು ಪಡೆದ ಸ್ಥಳ. 16ನೇ ಶತಮಾನದಲ್ಲಿ ಇಲ್ಲಿ ಬಸದಿಗಳು ನಿರ್ಮಾಣಗೊಂಡವು. ಈಗ ಒಂದು ಸಾಮಾನ್ಯ ಹಳ್ಳಿ. ಭಟ್ಕಳ-ಸಾಗರ ರಸ್ತೆಯಲ್ಲಿ ಭಟ್ಕಳದಿಂದ 16 ಕಿ.ಮೀ. ದೂರದಲ್ಲಿ ಹಾಡುವಳ್ಳಿ ಇದೆ. ಸಾಳ್ವರು ಇದನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಇಂದು ಇಲ್ಲಿ ಗತಕಾಲದ ಕುರುಹುಗಳಾಗಿ 24 ತೀರ್ಥಂಕರರಿರುವ ಜೈನ ಬಸದಿಗಳು ಆಕರ್ಷಣೆಯಾಗಿ ಉಳಿದುಕೊಂಡಿದೆ. ಈ ಮೂರ್ತಿಗಳು ಕಾಲವನ್ನು ಲೆಕ್ಕಿಸದೇ ನಿರ್ಲಿಪ್ತವಾಗಿ, ಧ್ಯಾನಾಸಕ್ತವಾಗಿ ಕುಳಿತಿರುವಂತೆ ಭಾಸವಾಗುತ್ತವೆ. ಸುಮಾರು 500 ವರ್ಷಗಳ ಹಿಂದೆ ಇದು ಪ್ರತಿಷ್ಠಿತ…
-

ಉಳ್ಳೂರುಮಠದಲ್ಲಿ 11 ನೇ ಶತಮಾನದ ಶಿಲ್ಪ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರುಮಠದಲ್ಲಿ 11 ನೇ ಶತಮಾನದ ಅಪೂರ್ವ ಶಿಲ್ಪವೊಂದು ಪತ್ತೆಯಾಗಿದೆ. ಉಳ್ಳೂರು ಮಠ ಎಂದು ಕರೆಯಲ್ಪಡುವ ಜಾಗದಲ್ಲಿ ಈಗ ಗಣಪತಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿ ಭಗ್ನಗೊಂಡ ಶಿಲ್ಪದ ಅವಶೇಷಗಳು, ದೇವಾಲಯದ ಅವಶೇಷಗಳು ಮತ್ತು ಒಂದು ಶಾಸನ ಕಂಡು ಬಂದಿದೆ. ಭಗ್ನಗೊಂಡ ಶಿಲ್ಪವೊಂದನ್ನು ಸ್ಥಳೀಯವಾಗಿ ಮಹಾವಿಷ್ಣು ಎಂದು ಕರೆಯಲಾಗುತ್ತದೆ. ಆದರೆ ಶಿಲ್ಪಶಾಸ್ತ್ರದ ಪ್ರಕಾರ ಅದು ಜನಾರ್ಧನನ ಶಿಲ್ಪವಾಗಿದೆ ಎನ್ನಲಾಗಿದೆ. ಸಮಭಂಗಿಯಲ್ಲಿ ಪದ್ಮಪೀಠದ ಮೇಲೆ ನಿಂತಿರುವ ಶಿಲ್ಪವು, ತನ್ನ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈಯಲ್ಲಿ…
-

ಶಿರಸಿ ಹೆಸರಿನ ಹಿಂದಿನ ರಹಸ್ಯ – ಶಿರಸಿಯ ಇತಿಹಾಸ
ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧 ಪ್ರಾಚೀನ ಕದಂಬರ ರಾಜಧಾನಿಯಾದ ಬನವಾಸಿಗೆ ಬಹುಶಃ ಕರ್ನಾಟಕದಷ್ಟು ಹಳೆಯದಾದ ಇತಿಹಾಸವು ಪ್ರಸ್ತುತ ಶಿರಸಿ ತಾಲ್ಲೂಕಿಗಿದೆ. ಶಿರಸಿ ಎಂಬ ಹೆಸರಿನ ಉಗಮಕ್ಕೆ ಸಂಬಂಧಿಸಿದಂತೆ ವಿಭಿನ್ನ ಆವೃತ್ತಿಗಳಿವೆ. ಶಿರಸ್ಸು, ಶಿರಿಸಾ ಮರ, ಸಿರಿ ಹಿಗೆ… ನಂತರದ ದಿನಗಳಲ್ಲಿ ಕಾಲಕ್ರಮೇಣ ಇದು ವಿವಿಧ ಆಯಾಮಗಳನ್ನು ಪಡೆದು ಶಿರಸಿ ಆಗಿರಬಹುದು ಎಂದು ಭಾವಿಸಲಾಗಿದೆ. ಸಿದ್ದಾಪುರ ತಾಲ್ಲೂಕಿನ ತಮಡಿ ಕಲ್ಲಾಲದಲ್ಲಿ ದೊರೆತ ಕ್ರಿ.ಶ. 1027ರ ವೀರಶಿಲೆಯ ಮೇಲಿನ ಶಾಸನವು ‘ಸಿರಿಸೆ’ ಎಂಬ ಹಳ್ಳಿಯನ್ನು ಉಲ್ಲೇಖಿಸುತ್ತದೆ.…
-

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಧೀರ ವನಿತೆಯರು
“ಯುದ್ಧಸ್ಯ ಕಥಾ” ಎಂಬ ಹೇಳಿಕೆಯಂತೆ ವೀರರ ಕಥೆ ಯಾವಾಗಲೂ ರಮ್ಯವೇ, ಮನೋಹರವೇ. ಅದರಲ್ಲೂ ಇಪ್ಪತ್ತನೆಯ ಶತಮಾನದ ಅಂತ್ಯ ಭಾಗದಲ್ಲೂ ಹಿಂದುಳಿದ ಜಿಲ್ಲೆಯೆಂದೇ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಮುಗ್ಧ ವನಿತೆಯರು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ತೋರಿದ ಸಾಹಸದ ಕಥೆ ಮತ್ತು ಮನೋಹರವಾದದ್ದು ಹಾಗೂ ಅಸಾಮಾನ್ಯವಾದದ್ದು. ಸಾಮಾಜಿಕ ಕಟ್ಟಳೆ, ಸಾಂಸಾರಿಕ ಮೋಹಗಳನ್ನು ಬದಿಗಿರಿಸಿ, ಭಾರತಾಂಬೆಯ ಮೋಹಪಾಶಕ್ಕೆ ಸಿಲುಕಿ, ಅವಳ ಬಂಧನವನ್ನು ಕಿತ್ತೊಗೆಯಲು ಕಂಕಣಬದ್ಧರಾಗಿದ್ದು ಕಾಲ್ಪನಿಕ ಕಥೆಯೇನಲ್ಲ, ಅದೊಂದು ವೀರ ನೈಜ ಗಾಥೆ. ನೆರೆಮನೆಯ ಕಟ್ಟೆಯನ್ನು ಕೂಡ ಎಂದಿಗೂ…
-

‘ಧೋಂಡಿಯಾ ವಾಘ’ ಮತ್ತು ಉತ್ತರ ಕನ್ನಡ
(ವಾಘ ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದ ತನ್ನ ಬದುಕಿನುದ್ದಕ್ಕೂ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಹೋರಾಡಿದವ. ತನ್ನದೆಂಬ ಯಾವ ರಾಜ್ಯವನ್ನು ಹೊಂದಿರದ ಆತ ಬ್ರಿಟಿಷರಿಂದ ತೀವ್ರ ಶೋಷಣೆಗೊಳಗಾದ ಸಮಾಜದ ಕೆಳಸ್ಥರದ ದುಡಿಯುವ ವರ್ಗದ ಪರವಾಗಿ ಧ್ವನಿಎತ್ತಿದವ. ಮುಂದೆ ರಾಜಮಹಾರಾಜರುಗಳಲ್ಲದೇ ಜನ ಸಮಾನ್ಯರೂ ಹೋರಾಡಲು ಮುಂದಡಿಯಿಡಲು ಕಾರಣನಾದವ.) ‘ಸೆಪ್ಟೆಂಬರ ಹತ್ತು’ ಈ ನೆಲದ ಚರಿತ್ರೆಯಲ್ಲಿ ಅತ್ಯಂತ ಪ್ರಮುಖವಾದ ದಿನ. ಜಿಲ್ಲೆಯ ಇತಿಹಾಸ ಎಂದೆಂದೂ ಮರೆಯಲಾಗದ ತಾರೀಖು. ಬಡರೈತರಿಗಾಗಿ ಹೋರಾಡಿದ ಇಬ್ಬರು ಮಹಾ ಪುರುಷರ ಬದುಕಿನ ಉದಯಾಂತ್ಯದ ಕೊಂಡಿ.…
-

ಉತ್ತರ ಕನ್ನಡದ ಪ್ರಾಚೀನ ರಾಜಕೀಯ ವಿಭಾಗ “ಪಯ್ವೆಯಯ್ನೂಱು”
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಶಾಸನದಲ್ಲಿ ಹೈವೆ ಐನೂರು ಎಂಬ ಪ್ರದೇಶದ ಉಲ್ಲೇಖವು ನಮಗೆ ಮತ್ತೆ ಮತ್ತೆ ಸಿಗುತ್ತಲೇ ಇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನ ರಾಜಕೀಯ ವಿಭಾಗಗಳಲ್ಲಿ ಒಂದು. ಬಹುತೇಕ ಸಂದರ್ಭದಲ್ಲಿ ಬನವಸೆ ಪನ್ನಿರ್ಚ್ಛಾಸಿರದಲ್ಲಿ ಸೇರಿರುತಿದ್ದ ಈ ಪ್ರದೇಶ ಕೆಲವೊಮ್ಮೆ “ಆಳುವಖೇಡ-೬೦೦೦’ ದ ಉಪವಿಭಾಗವಾಗಿಯೂ ಇರುತ್ತಿತ್ತು. ಈ ಪ್ರಾಚೀನ ರಾಜಕೀಯ ವಿಭಾಗಗಳನ್ನು ಪತ್ತೆಹಚ್ಚುವುದು ತುಂಬ ತೊಡಕಿನ ಕೆಲಸ. ಕಾರಣ ಹಿಂದಿನ ಚಕ್ರವರ್ತಿ ರಾಜರುಗಳು ವಿಸ್ತಾರವಾದ ತಮ್ಮ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವು ವಿಭಾಗಗಳಲ್ಲಿ ವಿಂಗಡಿಸಿದ್ದರಷ್ಟೆ.…
-

ಗೋಲ ಭಾವಿ – ಸಿದ್ದಾಪುರದಲ್ಲಿದೆ ಈ ಅದ್ಭುತ ಸ್ಥಳ!
ಬಿಳಗಿ ಉತ್ತರಕನ್ನಡದಲ್ಲಿ ಭೇಟಿ ನೀಡಲು ಪ್ರಸಿದ್ಧವಾದ ಸ್ಥಳವಾಗಿದೆ. ಇದು ಸಿದ್ದಾಪುರದಿಂದ 14 ಕಿ.ಮೀ ದೂರದಲ್ಲಿದೆ. ಇದೊಂದು ಐತಿಹಾಸಿಕ ಸ್ಥಳ. ಜೈನ ರಾಜರು ಈ ಸ್ಥಳವನ್ನು 1400 A.C ಯಿಂದ 1736 A.C ವರೆಗೆ ಆಳಿದರು. ಜೈನರು ಈ ಸ್ಥಳದ ಸುತ್ತಲೂ ‘ಬಸದಿ’ಗಳನ್ನು ನಿರ್ಮಿಸಿದರು. ಪಾರ್ಶ್ವನಾಥ, ಮಹಾದೇವ, ವಿರೂಪಾಕ್ಷ, ಹನುಮಂತ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದ ಸಾಕ್ಷಿಗಳಾಗಿವೆ. ಗೋಲ್ ಭಾವಿ (ಸುತ್ತಿನ ಬಾವಿ) ಇಲ್ಲಿನ ಆಕರ್ಷಕ ಸ್ಥಳಗಳಲ್ಲಿ ಒಂದಾಗಿದೆ. ಗೋಲ್ ಭಾವಿಯು ಭೂಗತ ಮನೆಯಂತಹ ರಚನೆಯಾಗಿದ್ದು, ಮಧ್ಯದಲ್ಲಿ ಬಾವಿಯನ್ನು ಹೊಂದಿದೆ…
-

ಭಟ್ಕಳದ ಬಸದಿಗಳು
ಮುಂಜಾವಿನ ಮೆಲುತಂಗಾಳಿಯಲ್ಲಿ ಭಟ್ಕಳ ರೇಲ್ವೆ ನಿಲ್ಡಾಣದಲ್ಲಿಳಿದಾಗ ಸ್ನೇಹಿತ ಸುರೇಶ ಮೊಗೇರ್ ಸ್ವಾಗತಿಸಲು ಬಂದಿದ್ದ. ಭಟ್ಕಳ ಪಟ್ಟಣಕ್ಕೆ ಮದುವೆಯೊಂದನ್ನು ಸಾಕ್ಷೀಕರಿಸಲು ನಾನು ಬಂದಿದ್ದೆ. ಇಬ್ಬರೂ ಬಳಸು ದಾರಿಯೊಂದನ್ನು ಹಿಡಿದು ಸಾಗಿ ಹಕ್ಕಿಗಳ ಕೂಜನದ ಹಾಡುಗಳನ್ನು ಕೇಳುತ್ತ, ಚಿಕ್ಕಪುಟ್ಟ ಗೂಡುಗಳಲ್ಲಿರುವ ಮರಿಗಳಿಗೆ ಕುಟುಕುಗಳನ್ನು ಉಣಿಸುತ್ತಿರುವ ಹಕ್ಕಿಗಳನ್ನು ವೀಕ್ಷಿಸುತ್ತಾ ಮದುವೆ ಮಂಟಪದ ಮುಂದೆ ನಿಂತೆವು. ಅಲ್ಲಿ, ಆಗತಾನೆ ಮದುಮಕ್ಕಳಿಬ್ಬರ ಅರಿಶಿನದ ಶಾಸ್ತ್ರ ಮುಗಿದಿತ್ತು, ಮಂಗಳ ನುಡಿಸಲು ಬಂದವರು ವಾದ್ಯಗಳನ್ನು ವಾಹನಗಳಿಂದಿಳಿಸಿ ಜೋಡಿಸಿಕೊಳ್ಳುತ್ತಿದ್ದರು. ವಧುವರರು ಹಸೆಮಣೆ ಏರುವ ಸಮಯ ಇನ್ನೂ ಸಾಕಷ್ಟಿದ್ದರಿಂದ ಗೆಳೆಯನತ್ತ…

