ಹೆಸರಲೇ ಹುದುಗಿದೆ ಕನ್ನಡ
ಮನಸೆಳೆಯುವ ಜಿಲ್ಲೆ ನನ್ನ
ಉತ್ತರ ಕನ್ನಡ….
ಸಹ್ಯಾದ್ರಿಯ ಸಿರಿಯಲಿ
ಭೋರ್ಗರೆಯುವ ಕಡಲಿನಲಿ
ಹರಡಿದೆ ಕನ್ನಡದ ಕಂಪು
ಆಲಿಸುವ ಕರ್ಣಗಳಿಗೆ
ಅದೇನೋ ಇಂಪು…..
ಕನ್ನಡದ ಪ್ರೀತಿಗೆ ಇಲ್ಲಿದೆ ಉತ್ತರ
ಕನ್ನಡ ಭಾಷೆಯೇ ಮನಕೆ ಹತ್ತಿರ..
ನುಡಿವ ನುಡಿ ಒಂದೇ..
ನಲಿಯುವೆವು ಕನ್ನಡಿಗರೆಂದೇ..
ಕೈಮುಗಿದು ನಮಿಪೆವು ಈ ನಾಡ
ಮೊಳಗಲಿ ಎಲ್ಲೆಡೆ ಕನ್ನಡದ ಹಾಡು..
ಮೂಡಣದಲಿ ಮೂಡುತಲಿದೆ
ಕೆಂಪು ಹಳದಿ ರಂಗು..
ಬೆಳಕಿನ ಕಿರಣದಲ್ಲಿಯೂ
ಕನ್ನಡ ನುಡಿಯ ಮೆರಗು..
ಹಚ್ಚ ಹಸುರಿನ ಕಾಡು
ಹಾಲಕ್ಕಿಗಳ ಜನಪದ ಹಾಡು..
ಸ್ವರ್ಗದಂತಿದೆ ನಾವಿರುವ ತಾಣ
ನೋಡ ಬನ್ನಿ ಏಕಶಿಲೆಯ ಯಾಣ..
ಕನ್ನಡ ನಾಡಿನ ವೈಭವದೊಳು
ನಿತ್ಯವೂ ಉತ್ಸವ…
ಸಡಗರ ಸಂಭ್ರಮದಲಿ ಆಚರಿಸುವೆವು
ಕನ್ನಡ ರಾಜ್ಯೋತ್ಸವ….

Leave a Reply