ಗೋಕರ್ಣ ಕ್ಷೇತ್ರದ ಮೂಲ ನಕಾಶೆ

Posted by

·

ಗೋಕರ್ಣ ಕ್ಷೇತ್ರದ ಮೂಲ ನಕಾಶೆಯಲ್ಲಿ ನೂರಾರು ತೀರ್ಥ ಹಾಗೂ ಲಿಂಗಗಳು ಕಂಡುಬರುತ್ತದೆ. 1915 ರಲ್ಲಿ ಶಿವರಾವ್ ನಾರಾಯಣ ಧಾರೇಶ್ವರ ಪ್ರಥಮವಾಗಿ ತಯಾರಿಸಿದ ನಕ್ಷೆ ಇದು. ಗೋಕರ್ಣದ ಪ್ರತಿಯೊಂದು ತೀರ್ಥ ಹಾಗೂ ಲಿಂಗಗಳು ವಿಶಿಷ್ಟವಾದದ್ದು ಅದರದ್ದೇ ಆದ ಮಹತ್ವವಿದೆ ಇತಿಹಾಸವಿದೆ ಆದರೆ ಇಂದು ಗೋಕರ್ಣದ ಅಮೂಲ್ಯ ಆಸ್ತಿಯಾದ ಎಷ್ಟೋ ತೀರ್ಥಗಳು ಹಾಗೂ ಲಿಂಗಗಳು ನಾಶವಾಗಿದೆ. ಎಲ್ಲಿವೆ ಎಷ್ಟು ಉಳಿದಿವೆ ಎಂಬುದನ್ನು ಈ ನಕ್ಷೆಯ ಆಧಾರದ ಮೇಲೆ ಗುರುತಿಸಿ ರಕ್ಷಿಸುವ ಅನಿವಾರ್ಯತೆ ಇದೆ ಹಾಗೂ ಅನೇಕ ತೀರ್ಥಗಳು ಇಂದು ಕಟ್ಟಡಗಳು, ಮನೆಗಳ ಅಡಿಯಲ್ಲೇ ಮುಚ್ಚಿ ನಾಶವಾಗಿದೆ. ಹೀಗಾಗಿ ಇನ್ನೂ ಉಳಿದುಕೊಂಡ ಕೆಲವೇ ಕೆಲವು ತೀರ್ಥ ಹಾಗೂ ಲಿಂಗಗಳನ್ನು ಚೆನ್ನಾಗಿ ನೋಡಿಕೊಂಡು ಅವುಗಳ ಮಹತ್ವ ತಿಳಿದು ರಕ್ಷಿಸಿದರೆ ಮುಂದಿನ ಪೀಳಿಗೆಗೆ ಪರಿಚಯಿಸಿ ಪುಣ್ಯಕ್ಷೇತ್ರ ಗೋಕರ್ಣದ ಮಹತ್ವವನ್ನು ತಿಳಿಸಬಹುದಾಗಿದೆ. 🙏

ಮಾಹಿತಿ: ಪ್ರಣವ್ ಭಟ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading