Category: ಪುಸ್ತಕ
-

ಮೀನುಪೇಟೆಯ ತಿರುವು – ಕವನ ಸಂಕಲನ – ರೇಣುಕಾ ರಮಾನಂದ
ಕಲಿವ ಮಗಳಿಗಿಂತ ಕಲಿಸುವ ಅಪ್ಪನಿಗೇ ಉಮೇದಿ ಎಂದೇನೂ ಮುಸಿಮುಸಿ ನಗಬೇಡಿ. ಹಾಲುಗುಂಬಳದಂತಹ ಕರುಳುಕುಡಿಗೆ ಒಳಪೆಡ್ಲು ಕಲಿಸುವುದನ್ನು ನೀವೊಮ್ಮೆ ಅನುಭವಿಸಿಯೇ ತೀರಬೇಕು. ಅದಕ್ಕೇ ಹೇಳುವುದು ಎಲ್ಲ ಅಪ್ಪಂದಿರಿಗೆ ಕುಡಿಬಾಳೆ ಎಲೆಯಂತಹ ಮುದ್ದಾದ ಮಗಳೊಬ್ಬಳಿರಬೇಕು.. ಎಂಬ ಮಾನವೀಯ ಮನಸ್ಸಿನ, ಜನಪರ ನಿಲುವಿನ, ತಂದೆ-ಮಗಳ ನಿತ್ಯ ಬದುಕಿನ ಸತ್ಯವನ್ನು ಕಣ್ಣಾರೆ ಕಂಡು ಸಾಮಾನ್ಯ ಸಂಗತಿಗಳನ್ನೂ ಕಾವ್ಯವಾಗಿಸುವ ಶಾಲಾ ಮಕ್ಕಳೊಡನೆ ಬೆರೆತು ಮಗುಮನ-ನಗುಮನ ಪಡೆದ ರೇಣುಕಾ ರಮಾನಂದ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಎಂಬ ಸಣ್ಣ ಹಳ್ಳಿಯವರು. ರೇಣುಕಾ ಈಗ ಕನ್ನಡದಲ್ಲಿ…
-

ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು – ಡಾ.ಲೀನಾ ನಾಯ್ಕ
ಡಾ. ಲೀನಾ ನಾಯ್ಕ ಅವರ ಕೃತಿ-ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು. ಹಾಲಕ್ಕಿ ಜನಾಂಗವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬುಡಕಟ್ಟು ಜನಾಂಗ. ಅದು ತನ್ನ ಜೀವನ ಶೈಲಿ, ಉಡುಗೆ ತೊಡುಗೆ ಹಾಗೂ ಆಚರಣೆಗಳಿಂದ ಹೇಗೆ ದೂರ ಸರಿಯುತ್ತಿದೆ ಮತ್ತು ಅವರ ಮೌಖಿಕ ಸಾಹಿತ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಚಯಿಸುವ ಕೃತಿ ಇದು. ಈ ಬದಲಾವಣೆಗಳು ಬುಡಕಟ್ಟಿನ ಬುಡವನ್ನೇ ಏರುಪೇರು ಮಾಡುವ ಸಾಮರ್ಥ್ಯ ಹೊಂದಿರುವುದು ಕಳವಳಕಾರಿ ವಿಷಯ. ಇಂತಹ ಎಲ್ಲ ಸ್ಥಿತ್ಯಂತರಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಹಾಲಕ್ಕಿ ಜನಾಂಗವೂ ಬದಲಾವಣೆಗೆ ಹೊರತಲ್ಲ. ಆದರೆ ಈ…
-

ರೂಪಾಂತರ ನಾಟಕಗಳು – ಜಯಂತ ಕಾಯ್ಕಿಣಿ
ಖ್ಯಾತ ಸಾಹಿತಿ, ಲೇಖಕ ಜಯಂತ ಕಾಯ್ಕಿಣಿ ಅವರ ಮೂರು ನಾಟಕಗಳ ಸಂಕಲನ ‘ಜಯಂತ ಕಾಯ್ಕಿಣಿ ರೂಪಾಂತರ ನಾಟಕ’ ಈ ಕೃತಿಯ ಬಗ್ಗೆ ಮಾತಾಡುತ್ತಾ ಕಾಯ್ಕಿಣಿ ಅವರು ಹೇಳುವ ಮಾತುಗಳಿವು. ‘ಒಂದರ್ಥದಲ್ಲಿ ಮೂರಂಕಿನ ಪುಸ್ತಕ ಇದು. ಎರಡನ್ನು ನೀನಾಸಂ ತಿರುಗಾಟಕ್ಕಾಗಿ, ಒಂದನ್ನು ಸಂಕೇತ್ ತಂಡಕ್ಕಾಗಿ ಬರೆದಿದ್ದೆ. ಹಿಂದೆ ಬಿಡಿಯಾಗಿ ಪ್ರಕಟಗೊಂಡಿದ್ದ ಮೂರೂ ನಾಟಕಗಳನ್ನು ಪ್ರಾರಂಭಿಕ ಪುಟಗಳೊಂದಿಗೆ ಇಲ್ಲಿ ಸಂಕಲಿಸಲಾಗಿದೆ’ ಎನ್ನುತ್ತಾರೆ. ಆಯಾ ನಾಟಕಗಳ ಪ್ರಥಮ ಪ್ರಯೋಗದ ಕಲಾವಿದ, ತಂತ್ರಜ್ಞರ ಯಾದಿಯನ್ನು ಈಗ ನೋಡಲು ಖುಶಿಯಾಗುತ್ತದೆ, ಬಾಲ್ಯದ ಗ್ರೂಪ್ ಫೋಟೋ…
-

ಗೌರೀಶ ಕಾಯ್ಕಿಣಿ – ಸಂಚಯ – ಸಮಗ್ರ ಸಾಹಿತ್ಯದ ಡಿಜಿಟಲ್ ಪುಸ್ತಕ
ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಜಯಂತ ಕಾಯ್ಕಿಣಿ ಅವರು ಸಂಚಿ ಫೌಂಡೇಶನ್ ® ಹಾಗೂ ಸಂಚಯದ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿಯಲ್ಲಿ ಲಭ್ಯವಾಗಿಸಿರುತ್ತಾರೆ. ಈ ಪುಸ್ತಕಗಳು ಮುಕ್ತವಾಗಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿರಲಿವೆ. ಗೌರೀಶ್ ಕಾಯ್ಕಿಣಿಯವರ ಎಲ್ಲಾ ಪುಸ್ತಕಗಳನ್ನು ಆನ್ಲೈನ್ ಅಲ್ಲಿ ಓದಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. 👉 https://kaikini.sanchaya.net/
-

ಬಹುಮುಕಿ, ಅಭಿವ್ರದ್ಧಿಯ ಹರಿಕಾರ – ಬೊಮ್ಮಯ್ಯ ಗಾಂವಕರ
ಬಾಸಗೋಡ ಬೊಮ್ಮಯ್ಯ ಗಾಂವಕರರು ಪ್ರಸಿದ್ಧ ಮನೆತನದವರು. ಮೇಲಾಗಿ ಸಜ್ಜನರ ಸಹವಾಸದಿಂದ ಜ್ಜಾನ ಪಡೆದವರು. ಸರಳಸಜ್ಜನಿಕೆಗೆ, ಪ್ರಾಮಾಣಿಕತೆಗೆ, ಕರ್ತವ್ಯ ದಕ್ಷತೆಗೆ, ವಿನಯಕ್ಕೆ, ಸಾಮಾಜಿಕ ಸೇವಾಕಾರ್ಯಕ್ಕೆ ಹೆಸರಾದವರು. ಹಿರಿಯ ಸ್ಥಾತಂತ್ರ್ಯ ಯೋಧರಾಗಿ, ತಮ್ಮ ಪರಿಸರದಲ್ಲಿ ರಾಜಕೀಯ, ಸಾಂಸ್ಕೃತಿಕ, ಶೈಕ್ಸಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಅವರು ತಮ್ಮ ಸ್ನೇಹಪರ ವಿಶಿಷ್ಟ ನಡವಳಿಕೆಯಿಂದ ಚೌಕದಳ್ಳಿಯ ಪರಿಸರದಲ್ಲಿ ‘ಬೊಳಿದಣ್ಣ’ ಎಂದೇ ಪರಿಚಿತರಾಗಿದ್ದರು. ದಿ. ಬೊಮ್ಮಯ್ಯ ಗಾಂವಕರ ಅವರು ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು.…
-

ಕರಾವಳಿಯ ಸಾವಿರದೊಂದು ದೈವಗಳು – ಡಾ. ಲಕ್ಷ್ಮೀ ಜಿ.ಪ್ರಸಾದ.
ಕರಾವಳಿಯ ಭಾಗಗಳಲ್ಲಿ ದೈವಗಳು, ನೇಮಗಳು, ಭೂತಾರಾಧನೆಯ ಮಾಹಿತಿ ವರ್ಣ ಚಿತ್ರಗಳೊಂದಿಗೆ ಪ್ರಕಾಶನಗೊಂಡು ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಲಕ್ಷ್ಮೀ ಜಿ. ಪ್ರಸಾದ್ ಇವರು ಸತತ 24 ವರ್ಷಗಳಿಂದ ಶೋಧಿಸಿ, ಸಂಗ್ರಹಿಸಿದ ಭೂತಾರಾಧನೆಯ ಮಾಹಿತಿಗಳು ಪುಸ್ತಕ ರೂಪದಲ್ಲಿ ರಾಮಚಂದ್ರಾಪುರ ಮಠಾಧೀಶರಿಂದ ಲೋಕಾರ್ಪಣೆ ಗೊಂಡಿದೆ ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ, ತುಳು ನಾಡಿನ ನಾಗಬ್ರಹ್ಮ ಮತ್ತು ಕಂಬಳ ಅಧ್ಯಯನಕ್ಕೆ ಪಿ.ಎಚ್.ಡಿ ಪಡೆದ ಡಾ. ಲಕ್ಷ್ಮೀ ಜಿ.…
-

ಭೂಮ್ತಾಯಿ – ಮೂಲ, ವಿವಾದ ಮತ್ತು ವಾಸ್ತವ
ಲೇಖಕರು: ವಿಘ್ನೇಶ್ವರ ಗುನಗಾ ರಾಜ್ಯದ ಕರಾವಳಿ ಭಾಗದಲ್ಲಿ ಅನಾದಿ ಕಾಲದಿಂದ ಆಚರಣೆಯಲ್ಲಿದ್ದ ಅನೇಕ ಅವೈದಿಕ ಪದ್ಧತಿಗಳು, ವೈದಿಕೀಕರಣ ಓಘವನ್ನು ಎದುರಿಸಲಾಗದೆ ಕೊಚ್ಚಿ ಹೋಗಿವೆ. ಆದರೂ ಹಲವು ಸಮಾಜಗಳ ಮದುವೆ, ಶ್ರಾಧ್ದಗಳಂತಹ ಅವಶೇಷಗಳು ಅಲ್ಲಲ್ಲಿ ಉಸಿರು ಹಿಡಿದುಕೊಂಡಿರುವುದನ್ನು ಇಂದಿಗೂ ಕಾಣಬಹುದು. ಈ ಭಾಗದ ಗ್ರಾಮ ದೇವತೆಗಳ ಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಈ ದೇವತೆಗಳಿಗೆ ಎಣ್ಣೆಯ ಸ್ನಾನ ಮಾಡಿಸುವುದು, ಕೋಳಿ-ಕುರಿ ಬಳಿ ಕೊಡುವುದು, ಬಂಡಿಹಬ್ಬ ಆಚರಣೆ, ದೆವ್ವ ಕಟ್ಟುವುದು, ಬಾಗಿಲು ಕಟ್ಟುವುದು ಮುಂತಾದ ಯಾವುದೇ ಆಚರಣೆಗಳೂ ವೈದಿಕ ಆಚರಣೆಗಳಲ್ಲ. ಹೀಗೆ…
-

ಶ್ರೇಷ್ಠ ಕೃತಿ ರತ್ನ ಪ್ರಶಸ್ತಿ ವಿಜೇತ ಕೃತಿ ಸಾತು ಗೌಡರ ‘ಪುಟ್ಟಿ ಮತ್ತು ಕನ್ನಡಿ’
ಅಕ್ಷರ ವಿರಲಿ ಲೆಕ್ಕವೇ ಇರಲಿಆಟದಿ ಕಲಿವುದೆ ನನಗಿಷ್ಟಬೋಧನೆಯೊಂದೆ ಕೇಳುತ ಕುಳಿತರೆಕಲಿಯುವುದಂತೂ ಬಲುಕಷ್ಟ ಮಕ್ಕಳ ಸಾಹಿತ್ಯ ಎನ್ನುವುದು ಮಗುವಿನ ಮನಸ್ಸಿನ ಸಮಾರಾಧನೆಯಾಗಬೇಕು ಎನ್ನುವುದು ಹಿರಿಯರ ಮಾತು. ಮಕ್ಕಳು ಶಾಲಾ ಪಠ್ಯದಲ್ಲಿ ಮುಳುಗಿರುತ್ತಾರೆ, ಅವರಿಗೆ ಹೇಳಿದ್ದನ್ನೇ ಹೇಳುವ ಕೇಳಿದ್ದನ್ನೇ ಕೇಳುವ ಅನಿವಾರ್ಯತೆಯಾಗಿದೆ. ಮಕ್ಕಳ ಭಾವ ವಿಸ್ತಾರಕ್ಕಿಂತ ಅವರ ಕೌಶಲ್ಯ ವಿಸ್ತಾರಕ್ಕೆ ಮಹತ್ವ ಸಿಗುತ್ತಿರುವ ಈ ಸಂದರ್ಭದಲ್ಲಿ ಇದು ಸಹಜ ಕೂಡಾ ಅನಿಸುತ್ತದೆ. ಅದಕ್ಕಾಗಿಯೇ ಈಗ ಮಕ್ಕಳ ಚೀಲದ ತುಂಬಾ ಸಾಮಾನ್ಯ ಜ್ಞಾನದ ಪುಸ್ತಕಗಳು, ಗಣಿತದ ಸುಲಭ ಕಲಿಕೆ, ವಿಜ್ಞಾನದ ಮಾರ್ಗದರ್ಶಿ…
-
ಹಾಲಕ್ಕಿ ರಾಕು (ಕಥಸಂಕಲನ), ಡಾ. ಶ್ರೀಧರ ಗೌಡ
ಕನ್ನಡ ಸಾಹಿತ್ಯಲೋಕಕ್ಕೆ ನನ್ನ ಎರಡನೇ ಕೃತಿ “ಹಾಲಕ್ಕಿ ರಾಕು” (ಕಥಾಸಂಕಲನ) ಸೇರ್ಪಡೆ. ಕೃತಿಗೆ ಮುನ್ನುಡಿಯನ್ನು ನನ್ನ ಪಿಎಚ್.ಡಿ ಮಾರ್ಗದರ್ಶಕ ಗುರುಗಳು ಪುಸ್ತಕ ವಿಮರ್ಶಕರು ಡಾ. ಸೈಯ್ಯದ್ ಜಮೀರುಲ್ಲಾ ಷರೀಫ್ ರವರು, ಹಾಗೂ ಬೆನ್ನುಡಿಯನ್ನು ನಾಮಾಂಕಿತ ಸಾಹಿತಿಗಳಾದ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ರವರು ಬರೆದು ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಲೇಖಕರು: ಡಾ. ಶ್ರೀಧರ ಗೌಡ. ಉಪ್ಪಿನ ಗಣಪತಿ
