ಕರಾವಳಿಯ ಭಾಗಗಳಲ್ಲಿ ದೈವಗಳು, ನೇಮಗಳು, ಭೂತಾರಾಧನೆಯ ಮಾಹಿತಿ ವರ್ಣ ಚಿತ್ರಗಳೊಂದಿಗೆ ಪ್ರಕಾಶನಗೊಂಡು ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ.
ಬೆಂಗಳೂರಿನ ಬ್ಯಾಟರಾಯನಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಲಕ್ಷ್ಮೀ ಜಿ. ಪ್ರಸಾದ್ ಇವರು ಸತತ 24 ವರ್ಷಗಳಿಂದ ಶೋಧಿಸಿ, ಸಂಗ್ರಹಿಸಿದ ಭೂತಾರಾಧನೆಯ ಮಾಹಿತಿಗಳು ಪುಸ್ತಕ ರೂಪದಲ್ಲಿ ರಾಮಚಂದ್ರಾಪುರ ಮಠಾಧೀಶರಿಂದ ಲೋಕಾರ್ಪಣೆ ಗೊಂಡಿದೆ
ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ, ತುಳು ನಾಡಿನ ನಾಗಬ್ರಹ್ಮ ಮತ್ತು ಕಂಬಳ ಅಧ್ಯಯನಕ್ಕೆ ಪಿ.ಎಚ್.ಡಿ ಪಡೆದ ಡಾ. ಲಕ್ಷ್ಮೀ ಜಿ. ಪ್ರಸಾದ ಅವರು ಯಾವದೇ ಯುನಿವರ್ಸಿಟಿ, ಸಂಘಸಂಸ್ಥೆ, ತುಳು ಅಕಾಡಮಿಯ ಆರ್ಥಿಕ ಸಹಾಯ ಯಾ ಅನುದಾನವಿಲ್ಲದೆ ಈ ಬೃಹತ್ ಹೊತ್ತಿಗೆಯನ್ನು ಪರಿಚಯಿಸಿ, ಕಾಲೇಳೆಯುವ ಹಿಗೇಳಿಯುವ ಕೆಲ ಜನರ ನಡುವೆಯು ಬೃಹತ್ ಸಾಧನೆಯನ್ನೆ ಮಾಡಿದ್ದಾರೆ.
17 ಕ್ಕಿಂತ ಹೆಚ್ಚಿನ ಪ್ರಶಸ್ತಿ ಪುರಸ್ಕಾರ ಪಡೆದ ಇವರಿಂದ 26 ಶೈಕ್ಷಣಿಕ ಸಾಹಿತ್ಯದ ಹಾಗೂ ಸಂಶೋಧನಾ ಗ್ರಂಥಗಳು, 102 ಶೈಕ್ಷಣಿಕ ವೈಚಾರಿಕ, ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿದೆ. ಈ ಕೃತಿಗೆ ಹಿರಿಯ ಸಾಹಿತಿಗಳಾದ ಡಾ. ನಾ. ಮೊಗಸಾಲೆಯವರು ಬೆನ್ನುಡಿ ಬರೆದಿದ್ದಾರೆ.
ಕಾರವಾರದಿಂದ , ಶ್ರೀಲಂಕೆಯ ಯಕುಮ ಕೋಲದವರೆಗಿನ ಸಚಿತ್ರ ಮಾಹಿತಿಯಿಂದ ಕೂಡಿದ ಇ ಹೊತ್ತಿಗೆಯಲ್ಲಿ 2330 ದೈವಗಳ ಹೆಸರು, 1228 ದೈವ ಮಾಹಿತಿಗಳು130 gsm ಆರ್ಟ್ ಪೇಪರ್ನಲ್ಲಿ ಅತ್ಯುತ್ತಮವಾಗಿ ಪ್ರಕಟವಾಗಿದೆ.
ಗೌರವ ಪೂರ್ವಕವಾಗಿ ಕಳುಹಿಸಿದ ಈ ಪುಸ್ತಕದ ವಿಶೇಷತೆಯನ್ನು ಮಾತನಾಡುವ ಮಂಜುನಾಥರೆಂದೆ ಪ್ರಖ್ಯಾತರಾದ ಶ್ರೀ ವಿರೇಂದ್ರ ಹೆಗ್ಗಡೆಯವರ ಸಮೇತ ಅನೇಕ ಹಿರಿಯರು ಈ ಪುಸ್ತಕದ ವಿಶೇಷತೆಯನ್ನು ಕೊಂಡಾಡಿದ್ದಾರೆ.
ಪುಸ್ತಕ ಪ್ರೇಮಿಗಳು ಆಸಕ್ತರು ಕೆಳಕಂಡ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಪುಸ್ತಕವನ್ನು ಪಡೆಯಬಹುದು.
ಡಾ.ಲಕ್ಷ್ಮೀ ಜಿ. ಪ್ರಸಾದ್
: 9480516684


Leave a Reply