Category: ಪುಸ್ತಕ
-
ಹಳೆಪೈಕರು : ಒಂದು ಅಧ್ಯಯನ (ನಾಮಧಾರಿಗಳ ಕುಲಮೂಲ)
ಗೆಳೆಯ ಉಮೇಶ ನಾಯ್ಕ ಅವರು ತಮ್ಮ “ಹಳೆಪೈಕರು: ಒಂದು ಅಧ್ಯಯನ” ಸಂಶೋಧನಾ ಗ್ರಂಥದ ಮೂಲಕ ನಾಮಧಾರಿಗಳ ಕುಲಮೂಲ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಹಳೆಪೈಕ-ನಾಮಧಾರಿ ಸಮಾಜ (ಜಾತಿ)ಯಲ್ಲಿರುವ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳನ್ನು ವಿವರವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕುಟುಂಬ ವ್ಯವಸ್ಥೆ, ಮದುವೆ, ಆಹಾರ ಪದ್ಧತಿ, ಉಡುಗೆ ತೊಡುಗೆ, ಭಾಷಾ ವೈಶಿಷ್ಟ್ಯ, ಧರ್ಮ, ದೇವರು ಎಲ್ಲವನ್ನೂ ಉಮೇಶ ಇಲ್ಲಿ ಚರ್ಚಿಸಿದ್ದಾರೆ. ನನಗೆ ತಿಳಿದ ಹಾಗೆ ಜಿಲ್ಲೆಯ ಹಳೆಪೈಕ- ನಾಮಧಾರಿ ಸಮುದಾಯದ ಸಂಸ್ಕ್ರತಿಯ ಕುರಿತು ಹೊರಬಂದ ಮೊಟ್ಟ ಮೊದಲ ಪುಸ್ತಕ. ಅದಕ್ಕಾಗಿ…
