ಬಹುಮುಕಿ, ಅಭಿವ್ರದ್ಧಿಯ ಹರಿಕಾರ – ಬೊಮ್ಮಯ್ಯ ಗಾಂವಕರ

Posted by

·

ಬಾಸಗೋಡ ಬೊಮ್ಮಯ್ಯ ಗಾಂವಕರರು ಪ್ರಸಿದ್ಧ ಮನೆತನದವರು. ಮೇಲಾಗಿ ಸಜ್ಜನರ ಸಹವಾಸದಿಂದ ಜ್ಜಾನ ಪಡೆದವರು. ಸರಳಸಜ್ಜನಿಕೆಗೆ, ಪ್ರಾಮಾಣಿಕತೆಗೆ, ಕರ್ತವ್ಯ ದಕ್ಷತೆಗೆ, ವಿನಯಕ್ಕೆ, ಸಾಮಾಜಿಕ ಸೇವಾಕಾರ್ಯಕ್ಕೆ ಹೆಸರಾದವರು. ಹಿರಿಯ ಸ್ಥಾತಂತ್ರ್ಯ ಯೋಧರಾಗಿ, ತಮ್ಮ ಪರಿಸರದಲ್ಲಿ ರಾಜಕೀಯ, ಸಾಂಸ್ಕೃತಿಕ, ಶೈಕ್ಸಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಅವರು ತಮ್ಮ ಸ್ನೇಹಪರ ವಿಶಿಷ್ಟ ನಡವಳಿಕೆಯಿಂದ ಚೌಕದಳ್ಳಿಯ ಪರಿಸರದಲ್ಲಿ ‘ಬೊಳಿದಣ್ಣ’ ಎಂದೇ ಪರಿಚಿತರಾಗಿದ್ದರು. ದಿ. ಬೊಮ್ಮಯ್ಯ ಗಾಂವಕರ ಅವರು ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್‌ ಚಳುವಳಿಗಳಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು.

ದಿ. ಬೊಮ್ಮಯ್ಯ ಗಾಂವಕರರ ಅವಿಸ್ಮರಣೀಯ ಸೇವೆಗಳನ್ನು ಮುಂದಿನ ತಲೆಮಾರಿನವರಿಗಾಗಿ ಒಂದು ಕಿರು ಹೊತ್ತಿಗೆಯ ರೂಪದಲ್ಲಿ ಕಟ್ಟಕೊಡುತ್ತಿರುವ ಅವರ ಮಕ್ಕಳ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಇಂತಹ ಪ್ರಾತಃ:ಸ್ಮರಣೀಯರ ಜೀವನ ಹಾಗೂ ಸಾಧನೆಗಳು ಖಂಡಿತವಾಗಿಯೂ ಮುಂದಿನ ಪೀಳಿಗೆಯನ್ನು ಪ್ರಭಾವಿಸಬಲ್ಲವು. ಅವರ ಬದುಕಿಗೆ ದಾರಿದೀಪವಾಗಬಲ್ಲವು.

– ವಿ. ಜೆ. ನಾಯಕ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading