ಲೇಖಕರು: ವಿಘ್ನೇಶ್ವರ ಗುನಗಾ
ರಾಜ್ಯದ ಕರಾವಳಿ ಭಾಗದಲ್ಲಿ ಅನಾದಿ ಕಾಲದಿಂದ ಆಚರಣೆಯಲ್ಲಿದ್ದ ಅನೇಕ ಅವೈದಿಕ ಪದ್ಧತಿಗಳು, ವೈದಿಕೀಕರಣ ಓಘವನ್ನು ಎದುರಿಸಲಾಗದೆ ಕೊಚ್ಚಿ ಹೋಗಿವೆ. ಆದರೂ ಹಲವು ಸಮಾಜಗಳ ಮದುವೆ, ಶ್ರಾಧ್ದಗಳಂತಹ ಅವಶೇಷಗಳು ಅಲ್ಲಲ್ಲಿ ಉಸಿರು ಹಿಡಿದುಕೊಂಡಿರುವುದನ್ನು ಇಂದಿಗೂ ಕಾಣಬಹುದು.
ಈ ಭಾಗದ ಗ್ರಾಮ ದೇವತೆಗಳ ಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಈ ದೇವತೆಗಳಿಗೆ ಎಣ್ಣೆಯ ಸ್ನಾನ ಮಾಡಿಸುವುದು, ಕೋಳಿ-ಕುರಿ ಬಳಿ ಕೊಡುವುದು, ಬಂಡಿಹಬ್ಬ ಆಚರಣೆ, ದೆವ್ವ ಕಟ್ಟುವುದು, ಬಾಗಿಲು ಕಟ್ಟುವುದು ಮುಂತಾದ ಯಾವುದೇ ಆಚರಣೆಗಳೂ ವೈದಿಕ ಆಚರಣೆಗಳಲ್ಲ. ಹೀಗೆ ಅವೈದಿಕ ಪದ್ಧತಿಯಲ್ಲಿ ಅಬ್ರಾಹ್ಮಣರಿಂದ ಅರ್ಚಿಸಲ್ಪಡುವ ಈ ದೇವತೆಗಳೂ ವೈದಿಕ ದೇವತೆಗಳಲ್ಲ.
ವೈದಿಕೀಕರಣದ ಸುಳಿಯಲ್ಲಿ ಸಿಲುಕಿ ದಿನದಿಂದ ದಿನಕ್ಕೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಗ್ರಾಮ ದೇವತೆಗಳ ಮೂಲ, ಆಚರಣೆ ಮತ್ತು ವಸ್ತು ಸ್ಥಿತಿಗಳ ನೈಜ ಅವಲೋಕನವೇ ‘ಭೂಮ್ತಾಯಿ’ ಎಂಬ ಪುಸ್ತಕ.
– ವಿಘ್ನೇಶ್ವರ ಗುನಗಾ








Leave a Reply