ಬಕುಳ ಹೂವಿನ ಮಾಲೆ – ಕರಾವಳಿ ದೇವರ ನೆಚ್ಚಿನ ಪುಷ್ಪ

Posted by

·

ಈಗ ನೀವು ಸುಗ್ಗಿ ಸಂಪದ ಜಾಲತಾಣದಲ್ಲಿ ಈ ಮಾಹಿತಿಯನ್ನು ಕೇಳಬಹುದಾಗಿದೆ 🎧

ಅಂಕೋಲಾ ಮಾರುಕಟ್ಟೆಯಲ್ಲಿ ಕಂಡು ಬಂದ “ಬಕುಳ” ಪುಷ್ಪ…

ದೇವರಿಗೆ ಅತ್ಯಂತ ಪ್ರಿಯವಾದ “ಬಕುಳ” ಪುಷ್ಪಮಾಲೆ ಕರಾವಳಿಯ ಜನರು “ಬಕೋಳ” ಪುಷ್ಪ ಅಥವಾ “ರಂಜೇ” ಪುಷ್ಪ ಎಂದು ಕರೆಯುವುದುಂಟು ಇದು ಅತ್ಯಂತ ಸುವಾಸನೆ, ಪರಿಮಳ ಉಳ್ಳ ಪುಷ್ಪವಾಗಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಕರಾವಳಿ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾದ ಸಾಮಾನ್ಯವಾಗಿ ಕಾಡುಗಳಲ್ಲಿ ಮೇಡುಗಳಲ್ಲಿ  ದೊರೆಯುವ ಪುಷ್ಪವಿದು.

‘ಬಕುಳ’ ಪುಷ್ಪವು ದೇವರಿಗೆ ಅತ್ಯಂತ ಪ್ರಿಯವಾಗಿದ್ದರಿಂದ ವಿಶೇಷ ಪೂಜೆಗೆ ಈ ಪುಷ್ಪವನ್ನು ಬಳಸಲಾಗುತ್ತದೆ, ಅಲ್ಲದೆ ಮದುವೆ ಹಾಗೂ ಮುಂಜಿ ಉಪನಯನ ಸಮಾರಂಭಗಳಲ್ಲಿ ಉಪಯೋಗಿಸಲಾಗುತ್ತದೆ.

ಅಂಕೋಲಾದ ಮಾರುಕಟ್ಟೆಯಲ್ಲಿ ಒಣಗಿದ ‘ಬಕುಳ’ ಪುಷ್ಪಕ್ಕೆ ನೂರು ರೂಪಾಯಿ ಬೆಲೆ ಯಾದರೆ, ಬಿಳಿ ಬಣ್ಣದ ತಾಜಾ ಪುಷ್ಪಕ್ಕೆ ಬರೀ 20 ರೂಪಾಯಿಗಳಿಗೆ ಮಾರಾಟ ಗೊಳ್ಳುತ್ತದೆ ಎಂದು ಈ ಪುಷ್ಪದ ಸಂಪೂರ್ಣ ಮಾಹಿತಿಯನ್ನು ನೀಡಿದಳು ಮಾರಾಟ ಮಾಡುವ ಹಾಲಕ್ಕಿ ಮಹಿಳೆ.

ಬಕುಳ ಮರವು ಔಷಧಿ ಗುಣ ಹೊಂದಿರುವುದರಿಂದ ಮರದ ತೊಗಟೆ, ಹೂವು ಮತ್ತು ಕಾಯನ್ನು ಜಜ್ಜಿ ಕಷಾಯ ಮಾಡಿ ಕುಡಿದರೆ ಬಾಯಿಯ ವಸಡುಗಳ ರಕ್ತಸ್ರಾವ ಕಡಿಮೆಯಾಗುತ್ತದೆ.

ಸಸ್ಯದ ವೈಜ್ಞಾನಿಕ ಹೆಸರು ಮಿಮುಸಾಪ್ಸ್ ಎಲೆಂಗಿ (Mimusops elengi)

✍️ & 📷 ಪವನ್ ಮಿಸ್ಕಿನ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading