Category: ಸಂಪ್ರದಾಯ

  • ಗಟಾರಿ ಅಮವಾಸ್ಯೆ – ಕಾರವಾರ ಮತ್ತು ಜೊಯಿಡಾದ ವಿಶಿಷ್ಟ ಸಂಪ್ರದಾಯ

    ಆಷಾಢ ಮಾಸದ ಕೊನೆಯ ದಿನದಂದು ಅತಿಯಾದ ಮದ್ಯ ಸೇವನೆಯಿಂದ ಯುವಕರು ಗಟಾರಗಳಲ್ಲಿ ಬೀಳುವುದರಿಂದ ಈ ಹಬ್ಬಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ದಿನದಂದು ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಮದ್ಯವನ್ನು ಕುಡಿಯಬಹುದು ಮತ್ತು ಇದನ್ನು ಕಾರವಾರ ಮತ್ತು ಜೊಯಿಡಾ ಭಾಗದಲ್ಲಿ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನವರು ಮಾಂಸಾಹಾರಿಗಳಾದರೂ ಶ್ರಾವಣ ಮಾಸ ಪೂರ್ತಿ ಮಾಂಸಾಹಾರ ಸೇವಿಸುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ಕಾರವಾರದಲ್ಲಿ ಮದ್ಯದ ಪ್ರಿಯರು ಶ್ರಾವಣ ಮಾಸ (ಭಾರತೀಯ…

  • ಕರಾವಳಿಯ ಭಾಗದ ಅಕ್ಕಿಮುಡಿ (ಅಕ್ಕಿ ಮೋಡಿ), ಹಾಗೂ ಕುಡ್ತ್ಗಿ

    “ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ ಇದರ ರುಚಿ ನೋಡಿದರೆ ದೇವರೂ ಕೊನೆಗೆ ಸ್ವರ್ಗವನ್ನಿಳಿದು ಬರುವನು ನಮ್ಮ ಮನೆಗೆ” ಎನ್ನುವ ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿ ಅವರ ಚುಟುಕಿನಲ್ಲಿ ಕರಾವಳಿ ಜನರ ಆಹಾರ ಪದ್ದತಿಯನ್ನು ಅರಿಯಬಹುದು. ಕೊರಸಕ್ಕಿ (ಕುಚ್ಚಕ್ಕಿ), ಬೆಣ್ತಕ್ಕಿಯನ್ನು ಮೋಡಿಯಲ್ಲಿ ಕಟ್ಟುವ ಪದ್ದತಿ ಅನಾದಿಕಾಲದಿಂದಲೂ ರೂಢಿಯಲ್ಲಿತ್ತು. ಇದು ಕರಾವಳಿ ಭಾಗದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲಿ ಒಂದು. ಒಣ ಹುಲ್ಲಿನಿಂದಲೇ ಕಟ್ಟಲ್ಪಡುವ ಈ ಮುಡಿಯ ಒಳಭಾಗದಲ್ಲಿ ನಿರ್ದಿಷ್ಟವಾದ ಉಷ್ಣತೆ ಇರುತ್ತಿದ್ದು, ಮಳೆಗಾಲದಲ್ಲಿ…

  • “ಪ್ರಸಾದ ಹಚ್ಚುವದು” ಭಕ್ತರ ನಂಬಿಕೆ

    ದೇವರಿಗೆ ಹೂವನ್ನು ಅರ್ಪಿಸುವುದು, ಅಲಂಕರಿಸಿ ಶ್ರಂಗರಿಸುವುದು, ಪೂಜೆಯ ನಂತರ ಹೂವನ್ನು ಪ್ರಸಾದ ರೂಪದಲ್ಲಿ ಭಕ್ತರು ಪಡೆಯುವುದು ಇತ್ಯಾದಿ ಎಲ್ಲವೂ ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯ. ಕೆಲವು ಕಡೆ ದೇವರ ಮೂರ್ತಿಗೆ ಅಲಂಕಾರದ ಪೂರ್ವದಲ್ಲಿ ಚಿಕ್ಕ ತುಂಬೆ ಹೂವುಗಳನ್ನು ಹಚ್ಚಿಸಿ, ಅರ್ಚಕರಿಂದ ಅವುಗಳು ಉದುರಿ ಬೀಳುವದರ ಆಧಾರದ ಮೇಲೆ ಅಥವಾ ಕೆಳಗೆ ಬೀಳದೇ ಇದ್ದಾಗ , ತಮ್ಮ ಮನೋಭಿಸ್ಟ ಪೂರ್ತಿಗೋಳ್ಳುವುದೋ ಹೇಗೆ ಎಂದು ಕೇಳಿಕೊಳ್ಳುವ “ಪ್ರಸಾದ ಹಚ್ಚುವದು” ಎಂಬ ವಿಶಿಷ್ಟ ಸಂಪ್ರದಾಯವಿದೆ. ಅಂಕೋಲೆಯ ಶ್ರೀ ಆರ್ಯಾದುರ್ಗಾ ದೇವಿ ಸಂಸ್ಥಾನದ ವಿಶಾಲ…

  • ಅಂಕೋಲೆಯ ಹೊಂಡೆಯಾಟ

    ಈ ಹೊಂಡೆ ಆಟದ ಬಗ್ಗೆ ನಾನು ಹೆಚ್ಚಾಗಿ ತಿಳಿದಿಲ್ಲ. ಪ್ರತಿ ವರ್ಷ ಬಲಿ ಪಾಡ್ಯಮಿಯ (ದೀಪಾವಳಿ ಹಬ್ಬದ) ದಿನ ಇಲ್ಲಿಯ ಕೆರೆಕಟ್ಟೆ, ಕುಂಬಾರಕೇರಿ ಮತ್ತು ಹೊನ್ನೇಕೇರಿ ಭಾಗದ ಕೋಮಾರಪಂತ ಸಮಾಜದ ಬಾಂಧವರು ಎರಡು ತಂಡಗಳಲ್ಲಿ ಎದುರು ಬದುರಾಗಿ ಕವಣೆಗಳಲ್ಲಿ ಹಿಂಡಲಕಾಯಿಗಳನ್ನು ಇಟ್ಟುಕೊಂಡು ಪರಸ್ಪರ ಎದುರಾಳಿಗಳ ಮೇಲೆ ಬೀಸುತ್ತಾ ಭೂಮ್ತಾಯಿ(ಶಾಂತಾದುರ್ಗಾ) ದೇವಸ್ಥಾನ ದಿಂದ ದೊಡ್ಡ ದೇವ್ರ(ವೆಂಕಟರಮಣ) ದೇವಸ್ಥಾನದ ವರೆಗೆ ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾರೆ. ಕೆರೆಕಟ್ಟೆ, ಕುಂಬಾರಕೇರಿಯವರು, ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟು ಹೊಂಡೆ ಹೊಂಡೆ ಎಂದು ಕೂಗುತ್ತ ಎದುರಾಳಿಯನ್ನು ಎದುರಿಸಲು…

  • ಕೋಳಿಕಟ್ಟ ಅಂದ್ರೆ ಕೋಳಿಅಂಕ – ಸಂಪೂರ್ಣ ಮಾಹಿತಿ

    ಇದು ಕೋಳಿ ಅಂಕದ ಕೇವಲ ಮಾಹಿತಿಯಾಗಿದೆ… ಹಲವು ಕಡೆಯಿಂದ ಮಾಹಿತಿ ಸಂಗ್ರಹಿಸಿ ಇದನ್ನು ಬರೆಯಲಾಗಿದೆತುಳುನಾಡಿನ ಜಾನಪದ ಆಟಗಳಲ್ಲಿ ಕೋಳಿಕಟ್ಟ ಮುಖ್ಯವಾಗಿದೆ. ಕೋಳಿಕಟ್ಟಕ್ಕೆ ಭೂತ ದೈವಗಳೇ ಅಧಾರ. ಇದರೊಂದಿಗೆ ಕೋಳಿಕಟ್ಟ ಎಂಬ ಸ್ಪರ್ಧಾತ್ಮಕ ಆಟವೂ ನಡೆಯುತ್ತದೆ. ಊರಿನಲ್ಲಿ ಎಲ್ಲೆಲ್ಲಿ ಅಂಕ ಆಯನಗಳು ನಡೆಯುತ್ತಿವೆಯೋ ಅಲ್ಲಿ ಕೋಳಿಕಟ್ಟಗಳೂ ನಡೆಯುತ್ತಿವೆ. ಅಂಕ ಆಯನಗಳಿಗಿಂತ ಮೊದಲು ಕೋಳಿಕಟ್ಟ. ಕೋಳಿಕಟ್ಟಕ್ಕೆ ಕೆಲವು ಸ್ಥಳಗಳು ತುಂಬಾ ಹೆಸರು ಪಡೆದಿವೆ. ಅಂಬಿಲಡ್ಕ, ತೊರವೊಲು, ಬಲ್ಲಂಗುಡೆಲ್, ಬೆಜ್ಜ, ಮುಡಿಪು, ಬಪ್ಪನಾಡ್ ಹೀಗೆ ಸ್ಥಳಗಳಿವೆ. ಅಲ್ಲಿಂದಾ ಇದು ಭಟ್ಕಳ್, ಹೊನ್ನಾವರ,…

  • ದೇವರೇ ಮಾಡಿಸುವ ಹೀಗೊಂದು ಮದುವೆ!!

    ಬಹುಷಃ, ಎಲ್ಲರೂ ದೈವಿಚ್ಚೆಯಂತೆ ಮದುವೆ ಆಗಬೇಕು, ದೇವರ ಆಶೀರ್ವಾದ ನೂತನ ದಂಪತಿಗಳ ಮೇಲಿರಬೇಕು ಎಂದು ಬೇಡಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು “ಮದುವೆ” ದೇವರ ಸಮ್ಮುಖದಲ್ಲಿ, ದೇವರೇ ವರ ಮತ್ತು ವಧುವನ್ನು ಆಯ್ಕೆಮಾಡಿ ಭಕ್ತವೃoದದ ಸಮ್ಮುಖದಲ್ಲಿಯೇ ಬಹಿರಂಗವಾಗಿ ತಾಳಿ ಕಟ್ಟಿಸಿ ಮದುವೆ ಶಾಸ್ತ್ರ ಮುಗಿಸುವ ಸಂಪ್ರದಾಯವೊಂದು ಅಂಕೋಲೆಯಲ್ಲಿ ಅನಾದಿಕಾಲದಿಂದ ನಡೆದುಬಂದಿದೆ. ಇಲ್ಲಿ ವಧು ವರರ ಆಯ್ಕೆಗೆ ಪಾಲಕರ ವಿನಂತಿ ಅಥವಾ ಪರವಾನಗಿಯ ಅವಶ್ಯಕತೆಯೂ ಇಲ್ಲ. ಸೇರಿದ ಜನರ ಮಧ್ಯದಲ್ಲಿ ಈ ಆಯ್ಕೆ. ಹಾಂ, ಇದು ನಮ್ಮ ಬಂಡಿಹಬ್ಬದ ಸಂಪ್ರದಾಯದ…

  • ಸಾತನಬಯಲಿನ ಸಿದ್ದಿನಾಸ

    ಸಿದ್ದಿ ಜನಾಂಗ ನಮ್ಮ ಜಿಲ್ಲೆಯ ಒಂದು ಬುಡಕಟ್ಟು ಎಂದು ಪರಿಗಣಿಸಲ್ಪಟ್ಟ ಸಮುದಾಯ. ಅಂಕೋಲೆ, ಹಳಿಯಾಳ, ಯಲ್ಲಾಪುರ ತಾಲೂಕುಗಳಲ್ಲಿ ವಾಸವಾಗಿರುವ ಸಿದ್ದಿಗಳು ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರಾದರೂ ಅಂಕೋಲೆಯ ಸಾತನಬಯಲಿನ ಸಿದ್ದಿನಾಸ ದೇವರಿಗೆ ನಡೆದುಕೊಳ್ಳುತ್ತಾರೆ. ಅಂಕೋಲೆ ತಾಲೂಕಿನ ಹಳವಳ್ಳಿ ಗ್ರಾಮದ ಮಜರೆ ಮಳಲಗಾಂವದಲ್ಲಿ ಹಸೆಹಳ್ಳವು ಗಂಗಾವಳಿ ನದಿಯನ್ನು ಕೂಡುವ ಸ್ಥಳದಲ್ಲಿ ಈ ಸಾತ್ತನಬಯಲು ಇದೆ. ಮಳಲಗಾಂವದವರೇ ಆದ ಸಾಣು ಶಿವಾ ಸಿದ್ದಿ ಇಲ್ಲಿಯ ಅರ್ಚಕರು. ಇಲ್ಲಿ ಕಾಡಿನ ನಡುವೆಯೇ ಬೃಹತ್ತಾದ ಸಿದ್ದಿ ಸಮುದಾಯ ಭವನವು ಇದೇ ವರ್ಷ…

  • ಅಡುಕಲ – ಬೇಸಾಯಗಾರರಿಗೆ ಇದೇ ಕೇಳಿದನ್ನು ನೆರವೇರಿಸುವ ಅಕ್ಷಯ ಪಾತ್ರೆ

    ಅಡುಕಲವು ಅಕ್ಕಿ ದಾಸ್ತಾನು ಮಾಡುವ ಒಂದು ದೊಡ್ಡ ಮಡಕೆ ಅನ್ನುವುದಕ್ಕಿಂತ ಕರಾವಳಿಯ ಬೇಸಾಯಗಾರರ ಧಾರ್ಮಿಕ ಭಾವನೆಗಳನ್ನು ತುಂಬಿಕೊಂಡಿರುವ ಭಂಡಾರ ಎನ್ನುವುದು ಸಮಂಜಸವಾದೀತು. ಕುಂಬಾರಿಕೆ ಪಾರಿಭಾಷಿಕ ಕೋಶದಲ್ಲಿ, ಕನ್ನಡ ಶಬ್ದಕೋಶಗಳಲ್ಲಿ ಅಡಕಲು ಗಡಿಗೆ ಎಂದರೆ ಗ್ರಾಮೀಣರು ಕಾಳು-ಕಡಿ, ಹಣ ಆಹಾರಪದಾರ್ಥಗಳನ್ನು ಹಾಕಿಡಲು ಒಂದರ ಮೇಲೊಂದು ಮಡಕೆಗಳನ್ನು ಏರಿಸಿಡುವುದೆಂದು ಹೇಳಿದೆ. ಅಂಕೋಲೆ ಕಡೆಯ ಅಡುಕಲ (ಇಡಕಲು) ಒಂದು ಮೂಡೆ ಅಕ್ಕಿ ಹಿಡಿಯುವಷ್ಟು ಗಾತ್ರದ, ಅಗಲ ಬಾಯಿಯ ದೊಡ್ಡ ಗಡಿಗೆ. ಒಂದು ಮಾನಿಗೆ (15 ಕೊಳಗ) ಹತ್ತು ಕೊಳಗದ ಅಡುಕಲಗಳೂ ಇರುತ್ತವೆ.…

  • ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !

    ಉತ್ತರ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಕೆಲವು ಮನೆಗಳಲ್ಲಿ ಎಷ್ಟು ಆಸ್ಥೆಯಿಂದ ಈ ಸ್ವಾತಿ ಮಹಾ ನಕ್ಷತ್ರದ ಮಳೆ ನೀರನ್ನು ಸಂಗ್ರಹಿಸುತ್ತಾರೆ ಎಂದರೆ, ಅದಕ್ಕೆಂದೇ ದೊಡ್ಡದೊಡ್ಡ ಸ್ಟೀಲ್ ಪಾತ್ರೆಗಳು, ಹಂಡೆಗಳನ್ನು ಮೀಸಲಿಟ್ಟಿದ್ದಾರೆ. ಸ್ವಾತಿ ಮುತ್ತಿನ ಮಳೆಹನಿಯೇ..ಈ ಹಾಡು ನಾವೆಲ್ಲ ಕೇಳಿದ್ದೇವೆ. ಇಲ್ಲಿ ಸ್ವಾತಿ ಎಂಬುದು ಒಂದು ನಕ್ಷತ್ರ.  ಈ ನಕ್ಷತ್ರದಲ್ಲಿ ಬೀಳುವ ಮಳೆಯೇ ಚಿಪ್ಪಿನೊಳಗಿನ ಮುತ್ತಾಗುತ್ತದೆ ಎಂಬ ಒಂದು ನಂಬಿಕೆಯಂತೂ ಮೊದಲಿನಿಂದಲೂ ಇದೆ. ಆದರೆ ಇದಕ್ಕೂ ಮೀರಿ ಈ ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆ ನೀರಿಗೆ ಔಷಧ…

You cannot copy content of this page