ಕೈತಪ್ಪಿ ಹೋಗಿದ್ದ ಅಂಕೋಲಾ ಕೋಟೆಯನ್ನು ೧೧ ವರ್ಷಗಳ ಬಳಿಕ ವಶಪಡಿಸಿಕೊಂಡ ಶಿವಾಜಿ!

Posted by

·

ಅಂಕೋಲೆಯ ಈಗಿನ ಕೆ.ಎಲ್.ಇ. ಸಂಸ್ಥೆಯ ಶಾಲಾ ಕಾಲೇಜು ಆವರಣಕ್ಕೆ ಸೇರಿದ ಅಂಕೋಲಾ ಕೋಟೆಯ ಜೊತೆಗಿದ್ದ ಶಿವಾಜಿ ಮಹಾರಾಜರ ನಂಟು...

ಸಹ್ಯಾದ್ರಿ ಪರ್ವತದ ಗುಂಟ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ ಶಿವಾಜಿ ಗೋವದ ಪೊಂಡ ಕೋಟೆಯನ್ನು ಬಿಜಾಪುರದ ಸುಲ್ತಾನನಿಂದ ಗೆದ್ದ ನಂತರ ಅಂಕೋಲಾ, ಕಡವಾದ ಹಾಗೂ ಶಿವೆಶ್ವರದ ಕೋಟೆಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ನಂತರ ಶಿವಾಜಿ 1664ರಲ್ಲಿ ಅಂಕೋಲಾ ಕೋಟೆಯನ್ನು ಗೆದ್ದುಕೊಳ್ಳುತ್ತಾನೆ ಹಾಗೂ ಈ ಪ್ರದೇಶವನ್ನು ಅಂಕೋಲಾ ಸುಭ (ಪ್ರಾಂತ್ಯ) ವೆಂದು ಹೆಸರಿಸುತ್ತಾನೆ (ಅಧಾರ Shivaji and his Times by PROF. JADUNATH SARKAR.page no. 274-276) ಶಿವಾಜಿಯ ರಾಜ್ಯ ಮುಂಬೈ ಹತ್ತಿರದ ಥಾಣ, ಬಿವಂಡಿ ಯಿಂದ ಅಂಕೋಲಾ ತನಕ ಪಶ್ಚಿಮ ಘಟ್ಟದ ಗುಂಟ ಹಬ್ಬಿರುತ್ತದೆ ಶಿವಾಜಿಯನ್ನು ಮಟ್ಟಹಾಕಲು ಔರಂಗಜೇಬನು ಅಂಬಾರದ ರಾಜ ಜಯ ಸಿಂಗ್ಹನ ನೇತೃತ್ವದಲ್ಲಿ ಸೈನ್ಯವನ್ನು ಕಳುಹಿಸಿ ಕೊಡುತ್ತಾನೆ, ಸೈನ್ಯವು ಒಂದೊಂದಾಗಿ ಶಿವಾಜಿಯ ಕೋಟೆಗಳನ್ನು ವಶಪಡಿಸಿಕೊಂಡು ಪುರಂದರ ಕೋಟೆಯನ್ನು ಮುತ್ತುತ್ತದೆ ಆಗ ಶಿವಾಜಿಯು ಜಯ ಸಿಂಗನ ಜೊತೆ ಒಪ್ಪಂದ ಮಾಡಿಕೊಂಡು ತನ್ನ ಹತೋಟಿಯಲ್ಲಿರುವ 35 ಕೋಟೆಗಳಲ್ಲಿ 23 ಕೋಟೆಗಳನ್ನು ಔರಂಗಜೆಬನಿಗೆ ಬಿಟ್ಟು ಕೊಡುತ್ತಾನೆ. ಜೂನ 11, 1665 ರಲ್ಲಿ ಏರ್ಪಟ್ಟ ಪುರಂದರ ಒಪ್ಪಂದದಂತೆ ಔರಂಗಜೆಬನಿಗೆ ಬಿಟ್ಟುಕೊಟ್ಟ 23 ಕೊಟೆಗಳೆಂದರೆ ಪುರಂದರ, ರುದ್ರಮಾಲ, ಕೊಂಡಾಣ, ಕರ್ನಾಲ, ಲೋಹಗಡ, ಇಸಾಗಡ, ತುಂಗ, ತಿಕೋಣ, ರೋಹಿದಾ, ನರದುರ್ಗ, ಮಾಹುಳಿ, ಭಂದರದುರ್ಗ, ಪ್ಹಾಳಸ್ಕೋಳ, ರೂಪಗಡ, ಭಕ್ತಗಡ, ಮುರಾಬಖಾನ, ಮಾನಿಕಗಡ, ಸರುಪಗಡ, ಸಾಕರಗಡ, ಮಾರಕಗಡ, ಅಂಕೋಲಾ, ಸೋನಗಡ ಮತ್ತು ಮಾನಗಡ. ಪುರಂದರ ಒಪ್ಪಂದದ ನಂತರ ಮೊಘಲರ ಆಳ್ವಿಕೆ ಅಂಕೋಲೆಯ ತನಕ ವಿಸ್ತರಿಸಿತ್ತು. ಮುಘಲ್ ಸೈನ್ಯ ಹಿಂತಿರುಗಿದ ನಂತರ ಅಂಕೋಲೆಯ ಕೋಟೆಯು ಬಿಜಾಪುರದ ಸುಲ್ತಾನನ ಆಳ್ವಿಕೆಗೆ ಒಳಪಡುತ್ತದೆ. ಆಗ್ರಾದ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದ ನಂತರ ಶಿವಾಜಿಯು ಪುನಃ 1675 ರಲ್ಲಿ ಅಂಕೋಲೆಯ ಕೋಟೆಯನ್ನು ಗೆದ್ದು ಕೊಳ್ಳುತ್ತಾನೆ.

ಅಂಕೋಲಾ ಕೋಟೆಯ ಕುರುಹುಗಳು
ಕೋಟೆ ಮಾರುತಿ ದೇವಸ್ಥಾನ, ಅಂಕೋಲಾ

ಮಾಹಿತಿ: ದೇವಿದಾಸ್ ಪ್ರಭು

ಮೂಲ: ANKOLA- CULTURE HISTORY AND ECOLOGY


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading