Category: ಕೋಟೆಗಳು
-

ಗಡದಗುಡ್ಡದ ಚಾರಣವೂ… ಕೋಟೆಯ ಹುಡುಕಾಟವೂ…
‘ಬಹದೂರಕಾನ ಹಿಮಾಮಕಾನಾ ಅಂಬೋರೋ| ದಂಡೇ ಬರುವದಾ ಸುದ್ದೀ ತೆಳದಾರಲ್ಲ | ಅವರೇ ದಂಡೇ ಬರತೀದಂಬೂ ಸುದ್ದಿ ತಿಳದಾರಲ್ಲ | ಅಲ್ಲಿಂದನೆಲಮಾಲೂಗೀಯನೇ ಕಡದಾರಲ್ಲ | ಕ್ವೊಟೆಬ್ಯೆಣದಲ್ ನೆಲಮಾಳುಗಿ ಕಡದಾರಲ್ಲ | ಅಲ್ಲಿಂದೇ ಎಲ್ಲೀಗ್ ಕಡದಾರಯ್ಯ | ಅಲ್ಲಿಂದ ಕ್ವೊಟೆ ಗುಡ್ಡದವರೆಗೂ ಕಡದಾರಯ್ಯ…’ ಇವು ಅಂಕೋಲೆಯ ಹಾಲಕ್ಕಿಗಳ ಗುಮಟೆಯ ದೀರ್ಘ ಹಾಡಿನ ಕೆಲವು ಸಾಲುಗಳು. ಬಹದ್ದೂರಖಾನ ಹಾಗೂ ಇಮಾಮಖಾನ ಎನ್ನುವವರು ಸೈನ್ಯ ಕಾಂಗಳಶೀ ಹೊಳೆ(ಕಾಳೀನದಿ) ದಂಡೆಯಲ್ಲಿ ಬೀಡುಬಿಟ್ಟಿದೆ ಮತ್ತದು ಅಂಕೋಲೆಯತ್ತ ದಾಳಿಗೆ ಬರುತ್ತಿದೆ ಎನ್ನುವ ಸುದ್ದಿ ತಿಳಿದ ಕೋಟೆಯ ಕಾವಲುಗಾರರು…
-

ಗೇರುಸೊಪ್ಪ ಮಹಾಸಂಸ್ಥಾನದ ಕಾನೂರ್ ಸೈನಿಕ ಕೋಟೆ
ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿರುವ ಕಾನೂರ್ ಕೋಟೆಯು ಹಿಂದೆ ಈಗಿನ ಉತ್ತರ ಕನ್ನಡ ಜಿಲ್ಲಾ ಗಡಿಗೆ ಒಳಪಡುವ ಗೇರುಸೊಪ್ಪ ಮಹಾಸಂಸ್ಥಾನದ ಪ್ರಾಂತ್ಯಕ್ಕೆ ಸೇರಿತ್ತು. ದಟ್ಟ ಕಾಡಿನ ಮಧ್ಯದಲ್ಲಿ ಹಳೆಯ ಕೋಟೆ ಹೊಂದಿರುವ ಈ ಸ್ಥಳವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ಕೆಳದಿ ಕೋಟೆ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು ಆಳಿದ ರಾಜವಂಶದ ಹೆಸರು ಕೆಳದಿ ಆದ್ದರಿಂದ ಈ ಕೋಟೆಗೆ ಕೆಳದಿ ಕೋಟೆ ಎಂದು ಹೆಸರು ಬಂದಿರಬಹುದು. ಗೋವರ್ಧನಗಿರಿ ಕೋಟೆ (ಕೋಟೆ ಇರುವುದು ಗೋವರ್ಧನಗಿರಿ ಬೆಟ್ಟ ಶ್ರೇಣಿಯಾಗಿರುವುದರಿಂದ) ಎಂದು ಕೂಡ ಕರೆಯಲ್ಪಡುವ…
-

ಶಿವಾಜಿ ಕೋಟೆ, ಹಳಿಯಾಳ – ಯುದ್ಧತಂತ್ರಗಳಿಗೆ ಹೆಸರುವಾಸಿಯಾಗಿರುವ ಅಧ್ಬುತ ಕೋಟೆ
ಶಿವಾಜಿ ಕೋಟೆ ದಾಂಡೇಲಿಯಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಭಾರತದ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಪ್ರಕೃತಿಯನ್ನು ಪ್ರೀತಿಸುವ ಮತ್ತು ಭೂದೃಶ್ಯದ ನಡುವೆ ನಡೆಯುವ ಜನರಿಗೆ ಶಿವಾಜಿ ಫೋರ್ಟ್ ಒಂದು ಪರಿಪೂರ್ಣ ರಜಾತಾಣವಾಗಿದೆ. ಈ ಸ್ಥಳವು ಚಾರಣದ ಉದ್ದೇಶಗಳಿಗಾಗಿ ಮತ್ತು ಮಹಾರಾಷ್ಟ್ರದ ಪಾರಂಪರಿಕ ಸ್ಥಳವಾಗಿಯೂ ಸಹ ಸೂಕ್ತವಾಗಿದೆ. ಕರ್ನಾಟಕದ ಹಳಿಯಾಳ ತಾಲೂಕಿನಲ್ಲಿ ನೆಲೆಗೊಂಡಿರುವ ಈ ಶಿವಾಜಿ ಕೋಟೆ ದಾಂಡೇಲಿ ಪಟ್ಟಣದಿಂದ 25 ಕಿಲೋಮೀಟರ್ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವನ್ನು ಈ ಪ್ರದೇಶದ ಪ್ರಮುಖ ಪ್ರವಾಸಿ…
-

ಕೈತಪ್ಪಿ ಹೋಗಿದ್ದ ಅಂಕೋಲಾ ಕೋಟೆಯನ್ನು ೧೧ ವರ್ಷಗಳ ಬಳಿಕ ವಶಪಡಿಸಿಕೊಂಡ ಶಿವಾಜಿ!
ಅಂಕೋಲೆಯ ಈಗಿನ ಕೆ.ಎಲ್.ಇ. ಸಂಸ್ಥೆಯ ಶಾಲಾ ಕಾಲೇಜು ಆವರಣಕ್ಕೆ ಸೇರಿದ ಅಂಕೋಲಾ ಕೋಟೆಯ ಜೊತೆಗಿದ್ದ ಶಿವಾಜಿ ಮಹಾರಾಜರ ನಂಟು… ಸಹ್ಯಾದ್ರಿ ಪರ್ವತದ ಗುಂಟ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ ಶಿವಾಜಿ ಗೋವದ ಪೊಂಡ ಕೋಟೆಯನ್ನು ಬಿಜಾಪುರದ ಸುಲ್ತಾನನಿಂದ ಗೆದ್ದ ನಂತರ ಅಂಕೋಲಾ, ಕಡವಾದ ಹಾಗೂ ಶಿವೆಶ್ವರದ ಕೋಟೆಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ನಂತರ ಶಿವಾಜಿ 1664ರಲ್ಲಿ ಅಂಕೋಲಾ ಕೋಟೆಯನ್ನು ಗೆದ್ದುಕೊಳ್ಳುತ್ತಾನೆ ಹಾಗೂ ಈ ಪ್ರದೇಶವನ್ನು ಅಂಕೋಲಾ ಸುಭ (ಪ್ರಾಂತ್ಯ) ವೆಂದು ಹೆಸರಿಸುತ್ತಾನೆ (ಅಧಾರ Shivaji and his Times by…
-

ಸದಾಶಿವಗಡದ ಸಂಪತ್ತಿಗಾಗಿ ಕಾದಾಡಿದ ಆಂಗ್ಲರು ಮತ್ತು ಪೋರ್ಚುಗೀಸರು
ಸದಾಶಿವಗಡವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಒಂದು ಗ್ರಾಮ. ಗಮನಾರ್ಹ ಮತ್ತು ಆಕರ್ಷಕವಾಗಿರುವ ಇದು ಈಗ ಕಾಳಿ ನದಿ ಸೇತುವೆಯ ಸಮೀಪದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ, ಇದನ್ನು ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ನಿರ್ಮಿಸಲಾಗಿದೆ. ಭೌಗೋಳಿಕ ರಚನೆಈ ಕೋಟೆಯನ್ನು ಕಾಳಿ ನದಿಯ ಉತ್ತರ ದಂಡೆಯಲ್ಲಿರುವ ಹಳೆಯ ಕೋಟೆಯ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಇಲ್ಲಿ ಕಾಳಿ ಸಮುದ್ರವನ್ನು ಸೇರುತ್ತಾಳೆ. ಇದು ಸುಮಾರು 8 ಮೀಟರ್ ಎತ್ತರದ ಪ್ರಾಕಾರಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಸುಮಾರು 2 ಮೀಟರ್ ಅಗಲವಿತ್ತು.…
-

ಮಿರ್ಜಾನ್ ಕೋಟೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಎಂಬಲ್ಲಿರುವ ಮಿರ್ಜಾನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ 66 (ಹಿಂದಿನ ರಾ.ಹೆ ಸಂಖ್ಯೆ 17)ರಲ್ಲಿ ಗೋಕರ್ಣದಿಂದ 9 ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.5 ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ಉಪನದಿಯಾದ ಕುದುರೆ ಹಳ್ಳದ(ಹೊಳೆ) ದಂಡೆಯ ಮೇಲೆ ನಿರ್ಮಾಣವಾಗಿದೆ. (ಕುಮಟಾದಿಂದ ಸುಮಾರು ಹತ್ತು(10) ಕಿ.ಮೀ. ದೂರ). ರಾಜರ ಆಳ್ವಿಕೆ1500ರ ದಶಕದಲ್ಲಿ ಮಿರ್ಜಾನ್ ಅನ್ನು ವಿಜಯನಗರದ ಸಾಮಂತರು ಆಳುತ್ತಿದ್ದರು. ಗೇರುಸೊಪ್ಪದ ಚೆನ್ನಭೈರದೇವಿಯು ಅತ್ಯಂತ ಪ್ರಸಿದ್ಧ ರಾಣಿ. ಆಕೆಯ…
-
ಮರೆಯಾಗುತ್ತಿರುವ ಉತ್ತರ ಕನ್ನಡದ ಚಂದಾವರ ಕೋಟೆ
ಉತ್ತರಕನ್ನಡದ ಅಸ್ಮಿತೆ ಆಗಬೇಕಿದ್ದ ಚಂದಾವರ ಹಾಗು ಅಲ್ಲಿಯ ಐತಿಹಾಸಿಕ ಕೋಟೆ ಇಂದಿಗೆ ಕೇವಲ ಕಥೆ ಮಾತ್ರ. ಇದೊಂದು ದುರಂತವೇ ಸರಿ. ಪಾಂಡ್ಯರು, ಕದಂಬರು ಕಟ್ಟಿ ಆಳಿದ ಚಂದಾವರ ಇಂದು ಇತಿಹಾಸ ತಜ್ಞರ ಬಾರಿ ನಿರ್ಲಕ್ಷಕ್ಕೊಳಗಾಗಿದೆ. ಇಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ಐತಿಹಾಸಿಕ ಶಾಸನಗಳು ದೇವಾಲಯಗಳು ಮಾರುದಕ್ಕೂ ಸುಂಕದ ಕಟ್ಟೆಗಳಿವೆ. ಸ್ಥಳೀಯರು ಇಷ್ಟು ವರುಷ ಹೇಳಿಕೊಂಡು ಬಂದಂತೆ ಕೋಟೆಯ ಸ್ಥಳಕ್ಕೆ ಕಷ್ಟಪಟ್ಟು ತೆರಳಿ ಇಂದು ಒಂದೆರೆಡು ಅವಶೇಷಗಳನ್ನ ಪತ್ತೆ ಹಚ್ಚಿದ್ದೇನೆ. ಚಿತ್ರ 1 2 3 4 5 ಕೋಟೆಯ…
