ಶೇಡಿ ಮಣ್ಣಿನ ನೀರಲಿ
ಹಾಲಕ್ಕಿ ಮಹಿಳೆಯ ಕೈಯಲಿ
ಮೂಡುತಲಿದೆ ಹಲಿ
ಮಕರ ಸಂಕ್ರಾಂತಿಯ
ಸಡಗರದ ಹಬ್ಬಕ್ಕೆ
ಮನೆಯಂಗಳದಲ್ಲಿ
ನಲಿದಾಡುತಲಿದೆ
ರಂಗವಲ್ಲಿಯ ರಂಗೋಲಿ…
ಸಾಂಪ್ರದಾಯಿಕ ರಂಗೋಲಿ
ಹಾಲಕ್ಕಿಯ ಹಾಡಲಿ
ಕೇಳಸಿಗುವ ಹಲಿ
ಒಂದೊಂದು ಹಬ್ಬಕ್ಕೆ
ವಿಭಿನ್ನ ರಂಗೋಲಿ
ಹಾಲಕ್ಕಿಗಳ ಮನೆಗಳಲ್ಲಿ
ಕಾಣಸಿಗುವುದು
ಈ ಬಗೆಯ ರಂಗೋಲಿ…
ಸಂಕ್ರಾಂತಿ ಎಂದರೆ ನಮಗೆ
ರಂಗೋಲಿ ಹಬ್ಬ
ಮನೆ ಮಂದಿಯೆಲ್ಲ ಸೇರಿ
ಬಿಡಿಸುವರು ಮನೆಯಂಗಳದ ತುಂಬ
ಬಗೆ ಬಗೆಯ ರಂಗೋಲಿ…
ನೋಡ ಬಯಸಿದರೆ
ಬನ್ನಿರಿ ನಮ್ಮ ಹಳ್ಳಿ
ಹಾಲಕ್ಕಿಗರ ಹಲಿಯಲಿ
ಕಾಣಸಿಗುವುದು
ಬಾಳ ನಲಿವಿನ ಜೋಕಾಲಿ…
✍️ ಅಕ್ಷತಾ ಜಗದೀಶ್


Leave a Reply