ಸಡಗರದ ಸಂಕ್ರಾಂತಿ

Posted by

·

ಮಾಗಿದ ಚಳಿಯ ಮುಂಜಾನೆಯಲಿ
ಮೂಡಿದೆ ಮನೆಯಂಗಳದಲ್ಲಿ
ಚಿತ್ತಾರದ ರಂಗವಲ್ಲಿ…
ಎಳ್ಳು ಬೆಲ್ಲವ ಸವಿಯುವ
ಸಡಗರ ಸಂಭ್ರಮದ ಹಬ್ಬ
ಬಂದಿದೆ ಸಂಕ್ರಾಂತಿ ಹಬ್ಬ…

ಮಕರ ರಾಶಿಗೆ ಸಂಚರಿಸುತಲಿ
ಪಥವ ಬದಲಿಸಿದ ಸೂರ್ಯನು
ಉತ್ತರಾಯಣದೆಡೆಗೆ ಸಾಗುತ
ಹೊಸ ಕಾಂತಿಯಲಿ ಹೊಳೆಯುತ
ನಾಡಿನ ತುಂಬೆಲ್ಲ ಸಡಗರ
ಮರಳಿದೆ ಮಕರ ಸಂಕ್ರಮಣ…

ವರುಷದ ಮೊದಲ ಹಬ್ಬ
ತರಲಿ ಎಲ್ಲೆಡೆ ಸುಖ ಶಾಂತಿ
ಎಳ್ಳು ಬೆಲ್ಲದ ಸವಿಯು
ಮನೆ‌ ಮನಗಳ ಸಿಹಿಯಾಗಿಸಲಿ
ಕಡಲಿನ ಅಭ್ಯಂಜನವದು
ಮನದ ಪಾಪ ತೊಳೆಯಲಿ…

ಭೀಷ್ಮರೇ ಕಾದಿಹ ಪುಣ್ಯದಿನ
ಪ್ರೀತಿ ಸ್ನೇಹ ಸಾರಿ ಸಂಭ್ರಮಿಸೋಣ
ನಮ್ಮ ಹಬ್ಬಗಳೇ
ನಮ್ಮ ಸಂಸ್ಕೃತಿಗಳ ಪ್ರತೀಕ
ಸುಂದರ ನಾಳೆಗಳಿಗಾಗಿ
ಹಬ್ಬದ ಮಹತ್ವ ಸಾರೋಣ….

✍️ ಅಕ್ಷತಾ ಜಗದೀಶ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading