ರಭಸವಾಗಿ ಹರಿಯುವ ತೊರೆಯೇ ಅಂಕೋಲಾದ ಆಂದಲೆ ಆಗಿದೆ!

Posted by

·

ಬಳಲೆ ಗುಡ್ಡದ ಉತ್ತರಕ್ಕೆ ತಗ್ಗಿನಲ್ಲಿದೆ ಆಂದಲೆ ಗ್ರಾಮ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ತೊರೆಯಿಂದಾಗಿ ಆಂದಲೆ ಹೆಸರು ಪಡೆದಿದೆ. [ಆರಂದ್ +ಏಲ್ > ಆರಂದೇಲ್> ಆಂದೇಲ್> ಆಂದಲೆ. (ಆರ್- ಜಲವಾಚಕ ಪ್ರತ್ಯಯ).] ಗುಡ್ಡಗಳಿಂದ ಸುತ್ತುವರೆದಿರುವುದರಿಂದ ತೇವಾಂಶವುಳ್ಳ ಸಾಗುವಳಿಯ ಭೂಮಿಯನ್ನು ಪಡೆದಿದೆ.

ಅದೇ ಹಳ್ಳದ ತಟದಲ್ಲಿ ನಿಂತಿರುವ ಗ್ರಾಮದ ದೈವತ ಹೊನ್ನ ಅಂತಹುದೇ ಜಲವಾಚಿಕ ಪ್ರತ್ಯಯವನ್ನು ಹೊಂದಿದೆ; ಜನ್ + ಕೋಡ್ (ಜನಿಯುವಿಕೆ ಅಂದರೆ ಆ ತೊರೆಯ ಹರಿಯುವಿಕೆ;) ಈ ಪ್ರತ್ಯಯವುಳ್ಳ ಸ್ಥಳನಾಮಗಳು ಅಂಕೋಲೆಯಲ್ಲಿ ಇನ್ನೂ ಕೆಲವಡೆ ಸಿಗುತ್ತವೆ. ಹಳ್ಳದಂಡೆಯ ಎತ್ತರದಲ್ಲಿ (ಕೋಡು) ನೆಲೆಗೊಂಡದ್ದರಿಂದ ಹೊನ್ನಪ್ಪದೇವರನ್ನು ಜನಗೋಡು ಹೊನ್ನ ಎಂದಿದ್ದಾರೆ. ಹೆಚ್ಚಿನ ಗ್ರಾಮದೈವತಗಳು, ನೆಲ-ಜಲ-ಕಾನು ಇವುಗಳ ಚೈತನ್ಯಗಳನ್ನು ಪ್ರತಿನಿಧಿಸುವುದರಿಂದ ಹಿಂದೆ ನದಿ- ತೊರೆಗಳ ಸನಿಹದಲ್ಲಿ ಇರುವಂತೆ ಈ ಹೊನ್ನ ಕೂಡ ಹಳ್ಳದ ಪಕ್ಕದಲ್ಲಿರುವ ದೈವ. ಹಿಂದಿನ ಹಂಚಿನ ಚಿಕ್ಕ ಗುಡಿಯನ್ನು ಗ್ರಾಮಸ್ಥರು ಕಾಂಕ್ರೀಟಿನಿಂದ ಹೊಸದಾಗಿಸಿದ್ದಾರೆ.

ಅಂಕೋಲೆಯ ಇನ್ನಿತರ ಗ್ರಾಮಗಳಂತೆಯೇ ಆಂದಲೆಯ ಆವಾರೆಯೂ ಗೌಲು ಹಬ್ಬ, ಅಂದರೆ ದೇವರಿಗೆ ಕೋಳಿ-ಕುರಿ ಅರ್ಪಿಸುವ ಹಬ್ಬ. ಪೂಜೆ, ಉಪ್ಪಾರ, ಶೂಲ, ಬಲಿ ಮುಂತಾದ ಗ್ರಾಮೀಣ ಆರಾಧನೆಗಳನ್ನೊಳಗೊಂಡ ಚಿಕ್ಕ ಜಾತ್ರೆ. ಬೇಯಿಸಿದ ಉಪ್ಪಾರವನ್ನು ಪ್ರಸಾದರೂಪದಲ್ಲಿ ಭಜಕರು ಸ್ವೀಕರಿಸುತ್ತಾರೆ.

ಮಾಹಿತಿ: ನಂದನ್ ಐಗಳ್, ANKOLA-CULTURE HISTORY AND ECOLOGY


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading