
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಈ ಹೆದ್ದಾರಿ ಸುರಂಗಮಾರ್ಗ ಇಡೀ ಕರಾವಳಿಯ ಭಾಗಕ್ಕೆ ಮೊತ್ತ ಮೊದಲದೆಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣದ ಭಾಗವಾದ ಸುರಂಗಮಾರ್ಗ ಜನಾಕರ್ಷಣಾ ಕೇಂದ್ರವೂ ಆಗಲಿದೆ ಎಂಬ ಮಾತು ಕೇಳಿಬಂದಿದೆ.
ಕಾರವಾರ ತಾಲೂಕಿನ ಬಿಣಗಾ ಗ್ರಾಮದ ಬಳಿ 346 ಮೀಟರ್ ಹಾಗೂ ಅಲಿಗದ್ದಾ ಗ್ರಾಮದ ಬಳಿ 350 ಮೀಟರ್ ಉದ್ದದ ಟನಲ್ ನಿರ್ಮಾಣ ಮಾಡಲಾಗಿದೆ.
ಸುರಂಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜನವರಿ ಅಂತ್ಯದ ವೇಳೆಗೆ ಹೆದ್ದಾರಿ ಸುರಂಗದ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.


Leave a Reply