ಶಿವಾಜಿ ಕೋಟೆ, ಹಳಿಯಾಳ – ಯುದ್ಧತಂತ್ರಗಳಿಗೆ ಹೆಸರುವಾಸಿಯಾಗಿರುವ ಅಧ್ಬುತ ಕೋಟೆ

Posted by

·

ಕೋಟೆಗೆ ಹೋಗುವ ದಾರಿ

ಶಿವಾಜಿ ಕೋಟೆ ದಾಂಡೇಲಿಯಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಭಾರತದ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಪ್ರಕೃತಿಯನ್ನು ಪ್ರೀತಿಸುವ ಮತ್ತು ಭೂದೃಶ್ಯದ ನಡುವೆ ನಡೆಯುವ ಜನರಿಗೆ ಶಿವಾಜಿ ಫೋರ್ಟ್ ಒಂದು ಪರಿಪೂರ್ಣ ರಜಾತಾಣವಾಗಿದೆ. ಈ ಸ್ಥಳವು ಚಾರಣದ ಉದ್ದೇಶಗಳಿಗಾಗಿ ಮತ್ತು ಮಹಾರಾಷ್ಟ್ರದ ಪಾರಂಪರಿಕ ಸ್ಥಳವಾಗಿಯೂ ಸಹ ಸೂಕ್ತವಾಗಿದೆ. ಕರ್ನಾಟಕದ ಹಳಿಯಾಳ ತಾಲೂಕಿನಲ್ಲಿ ನೆಲೆಗೊಂಡಿರುವ ಈ ಶಿವಾಜಿ ಕೋಟೆ ದಾಂಡೇಲಿ ಪಟ್ಟಣದಿಂದ 25 ಕಿಲೋಮೀಟರ್ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವನ್ನು ಈ ಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕೋಟೆಯ ಒಳಾಂಗಣ

ಈ ಪುರಾತನ ಕೋಟೆಯು ಗೋವಾದ ಕದಂಬರಿಂದ ನಿರ್ಮಿಸಲ್ಪಟ್ಟಿತು ನಂತರ ಶಿವಾಜಿ ಮಹಾರಾಜರ ವಶವಾಯಿತು ಎಂದು ಹೇಳಲಾಗಿದೆ. 19 ನೇ ಶತಮಾನದಲ್ಲಿ ಇದು ಬ್ರಿಟಿಷರ ವಶದಲ್ಲಿತ್ತು ಮತ್ತು ಇಲ್ಲಿ ಕೋಟೆಯ ಒಳಾಂಗಣದಲ್ಲಿ ಬ್ರಿಟಿಷರು ಕೋರ್ಟ್ ಅನ್ನು ನಡೆಸುತ್ತಿದ್ದರು ಎನ್ನಲಾಗಿದೆ ನಂತರ ಇದನ್ನು ವೀರ ಯೋಧ ಸಂಗೊಳ್ಳಿರಾಯಣ್ಣ ವಶಪಡಿಸಿಕೊಂಡನು. ಈ ಕಟ್ಟಡವು ಛತ್ರಪತಿ ಶಿವಾಜಿಯ ಸಮಯದಲ್ಲಿ ಹೆಚ್ಚಾಗಿ ಬಳಸಲಾಗುತ್ತು ಹಾಗು ಆಗಿನ ಕಾಲದ ಯುದ್ಧ ತಂತ್ರಗಳ ಒಂದು ನೋಟವನ್ನು ನೀಡುತ್ತದೆ. ಪಾರಂಪರಿಕ ಪ್ರಭಾವಕ್ಕೆ ಒಳಗಾಗಿರುವ ಈ ಕೋಟೆಯು ದಾಂಡೇಲಿ ಪ್ರವಾಸದ ಅತ್ಯುತ್ತಮ ಆಕರ್ಷಣೆಯಾಗಿದೆ. ಈ ಕೋಟೆಯು ಅನೇಕ ವಾಸ್ತುಶಿಲ್ಪಗಳು ಹಾಗು ಶಾಶನಗಳನ್ನು ಒಳಗೊಂಡಿದೆ ಮತ್ತು ಅದನ್ನು ನೀವು ಇಲ್ಲಿ ವೀಕ್ಷಿಸಬಹುದು.

ಕೋಟೆಯ ಶಿಲ್ಪಕಲೆ ಮತ್ತು ಶಾಸನಗಳು

ಹಳಿಯಾಳ ಕೋಟೆಯ ವಿಶೇಷತೆ ಏನೆಂದರೆ, ಶತ್ರು ಸೈನ್ಯದ ಯಾರಾದರೂ ಕೋಟೆಯ ದ್ವಾರಗಳಿಗೆ ಮುತ್ತಿಗೆ ಹಾಕಿದಾಗ ಕಾರ್ಯರೂಪಕ್ಕೆ ತರಲಾಗುತಿತ್ತು ಎಂದು ಹೇಳಲಾಗುವ ಅನೇಕ ಯುದ್ಧ ತಂತ್ರಗಳನ್ನು ನೀವು ಇಲ್ಲಿ ನೋಡಬಹುದು ಮತ್ತು ಅನ್ವೇಷಿಸಬಹುದು. ದೊಡ್ಡ ಬಂಡೆಗಳಿಂದ ಮಾಡಿದ ಕೋಟೆಯ ಗೋಡೆಗಳು ಸುಮಾರು 25 ರಿಂದ 30 ಅಡಿ ಎತ್ತರವಾಗಿ ನಿಂತಿರುತ್ತವೆ. ಮರಾಠರ ಆಳ್ವಿಕೆಯ ಅವಧಿಯಲ್ಲಿ ಗಮನಾರ್ಹ ಇತಿಹಾಸ ಮತ್ತು ವ್ಯೂಹಾತ್ಮಕ ಪ್ರಾಮುಖ್ಯತೆಗಾಗಿ ಈ ಕೋಟೆಯು ಐತಿಹಾಸಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಕೋಟೆ ಆಗಿನ ನಿರ್ದಿಷ್ಟ ಸಮಯದ ಯುದ್ಧ ಸಿದ್ಧಾಂತದ ಬಗ್ಗೆ ಒಂದು ಅವಿಸ್ಮರಣೀಯ ನೋಟವನ್ನು ನೀಡುತ್ತದೆ. ಇದು ಸಂದರ್ಶಕರಿಗೆ ಮರಾಠಾ ಆಳ್ವಿಕೆಯ ಆಕರ್ಷಕ ವಾಸ್ತುಶಿಲ್ಪ ಶೈಲಿಯನ್ನು ನೋಡಲು ಅನುವು ಮಾಡಿಕೊಡುತ್ತದೆ. ಕೋಟೆಗೆ ಹೊಂದಿಕೊಂಡಂತೆ ಮಲ್ಲಿಕಾರ್ಜುನ ದೇವಾಲಯವಿದೆ ಇದು ಉತ್ತರದ ಗೋಡೆಯ ಪಕ್ಕದಲ್ಲಿದೆ, ಅದರ ಮುಂದೆ ನೇರವಾಗಿ ಸರೋವರವು ಇದೆ. ಈ ಸರೋವರವು ಹಳಿಯಾಳ ಕೋಟೆಯ ಸುತ್ತಳತೆಯ ಸುಮಾರು 25% ಅನ್ನು ಒಳಗೊಂಡಿದೆ. ಇದು ದೇವಾಲಯದ ಹಿಂಭಾಗದ ಭಾಗವಾಗಿದೆ.

ಮಲ್ಲಿಕಾರ್ಜುನನ ದೇವಾಲಯ

ಶಿವಾಜಿ ಕೋಟೆ, ಹಳಿಯಾಳ

ಶಿವಾಜಿ ಕೋಟೆಯನ್ನು ಹಳಿಯಾಳ ಕೋಟೆ ಎಂದೂ ಕರೆಯಲಾಗುತ್ತದೆ. ಈ ಕೋಟೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿದೆ. 19ನೇ ಶತಮಾನದ ಅವಧಿಯಲ್ಲಿ ಸಂಗೊಳ್ಳಿರಾಯಣ್ಣ ಈ ಕೋಟೆಯನ್ನು ಆಕ್ರಮಿಸಿಕೊಂಡನು. ಈ ಸ್ಥಳದ ಹೆಸರಿಗೆ, ಈ ಕೋಟೆಯನ್ನು ಹಳಿಯಾಳ ಕೋಟೆ ಎಂದು ಕರೆಯಲಾಗುತ್ತದೆ, ಇದು ದಾಂಡೇಲಿ ಪ್ರವಾಸೋದ್ಯಮದಲ್ಲಿ ಬಹಳ ಜನಪ್ರಿಯವಾಗಿದೆ.

ಕೋಟೆಯ ಒಳಾಂಗಣ

ಕೋಟೆಯ ವೀಕ್ಷಣಾ ಸಮಯ

ನೀವು ದಾಂಡೇಲಿ ಟ್ರಿಪ್ ಗಾಗಿ ಯೋಜಿಸುತ್ತಿದ್ದರೆ, ಹಚ್ಚ ಹಸಿರಿನ ಕಾಡುಗಳು ಮತ್ತು ಪ್ರಕೃತಿಯ ಪ್ರಶಾಂತತೆಯಿಂದ ಸುತ್ತುವರೆದಿರುವ ಶಿವಾಜಿ ಫೋರ್ಟ್ ಅನ್ನು ಒಳಗೊಂಡಿರಬೇಕು. ದಿನದ ಯಾವುದೇ ಸಮಯದಲ್ಲಿ ನೀವು ಈ ಫೋರ್ಟ್ ಗೆ ಭೇಟಿ ನೀಡಬಹುದು, ಏಕೆಂದರೆ ಇದು 24 ಗಂಟೆಗಳ ಕಾಲ ತೆರೆದಿರುತ್ತದೆ.

ಚಿತ್ರ ಕೃಪೆ: Journeys across Karnataka


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading