ಅಂಕೋಲೆಯ ಬಾವಿಕೇರಿಯಲ್ಲಿ ಪತ್ತೆಯಾದ ಹದಿಮೂರನೆ ಶತಮಾನದ ಶಾಸನ

Posted by

·

ಅಂಕೋಲೆಯ ಬಾವಿಕೇರಿ ಗ್ರಾಮದ ಗರಡಿ ಮಾಸ್ತಿ ಗುಡಿಯ ಪಕ್ಕದಲ್ಲಿ ನಿಲ್ಲಿಸಿಡಲಾದ ಈ ಶಾಸನದ ಬಳಿ ಹೋಗಲು ಮುಖ್ಯ ರಸ್ತೆಯಿಂದ ಕಿರಿದಾದ ಓಣಿಯಿದೆ. 1983 ರಲ್ಲಿ ಈ ಶಾಸನ ಪತ್ತೆಯಾದಾಗ ಅದನ್ನು ನೋಡಲು ಹೋಗಿದ್ದೆ. ಆಗ ಈ ಪ್ರದೇಶವು ಗೇರುಮರಗಳಿಂದ ಸುತ್ತುವರೆದು ನಿರ್ಜನವಾಗಿತ್ತು. ಈ ಸಲ ಅಲ್ಲಿಗೆ ಹೋದಾಗ ಕಮಾನುಳ್ಳ ಬಾಗಿಲು ಅದೇ ತಾನೆ ಕಟ್ಟಲಾಗಿತ್ತು. ಶಾಸನದ ಸುತ್ತ ಮನೆಗಳು ಹಿತ್ತಿಲು, ನಿವೇಶನಗಳು, ವ್ಯವಸ್ಥಿತವಾಗಿ ನಿಲ್ಲಿಸಿದ ಶಾಸನದ ಜೊತೆ ವೀರಗಲ್ಲುಗಳನ್ನೂ ಕಂಡು ಆನಂದವಾಯಿತು.. “ಅಂಕೋಲೆಯ ನಾಡು” (ಸಾಲು ಎಂಟು) ಎಂಬ ಪದಗಳಿರುವ ಹದಿಮೂರನೆ ಶತಮಾನದ ವಿಜಯನಗರ ಸಂಗಮ ವಂಶದ ಕಾಲದ ಶಾಸನ ತುಸು ಪ್ರಯತ್ನಪಟ್ಟರೆ ಸುಲಭವಾಗಿ ಓದಬಹುದಾಗಿದೆ.

1 ಓಂ ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂ
2 ಬಿ ಚಂದ್ರ ಚಾಮರ ಚಾರವೆ ತ್ರೈಲೋಕ್ಯ ನಗರಾರಂ
3 ಭಂ ಮೂಲ ಸ್ತಂಭಾಯ ಶಂಭವೆ ಸ್ವಸ್ತಿ ಶ್ರೀ ವಿಜಯಾಭ್ಯು
4 ದಯ ಶಕ ವರುಷ ೧೨೮೪ನೆಯ ಪ್ಲವ ಸಂವತ್ಸರದ ಕಾ
5 ರ್ತಿಕ ಶು ೧ ಆ ಶ್ರೀಮನು ಮಹಾಮಂಡಲೇಶ್ವರಂ ಶ್ರೀ ವೀರ ಬು
6 ಕ್ಕರಾಯನ ವಿಜಯ ರಾಜ್ಯಾಭುದಯಕಾಲ ಶ್ರೀ ಮನು ಮಹಾಪ್ರ
7 ದಾನಂ ಬಸವೆಯ ದಂಣಾಯಕರು ಆ ಬುಕ್ಕರಾಯನ ಕೈಯಲು
8 ಪ್ರೀತ್ಯರ್ಥ ಧಾರಾಪೂರ್ವಕವಾಗಿ ಕೊಣ್ಡು ಅಂಕೋಲೆನಾಡವೊಳಗಣ ಬಾವಿಯ
9 ಕೇರಿಯ ಶಾಸನದ ಕ್ರಮವೆಂತಂಡೆ ಆ ವೂರ ಚತುಸ್ಸೀಮೆಯ ವಿವ
10 ರ ಮೂಡ ಸೆಳೆಯ ಹಳ್ಳ ತೆಂಕ ಬಡಗಡಿಯ ನಟ್ಟ ಕಲ್ಲು ಪಡುವ
11 ಸಮುದ್ರ ಮತ್ತು ತ್ರಿಕೋಣ ನಟ್ತ ಕಲ್ಲು ಯಿಂತೀ ಚತುಸ್ಸೀಮೆಸಮನ್ವಿತ ವ
12 ಹ ಗ್ರಾಮವನು ನಮ್ಮ ಶ್ರೀ ಗುರು ಕ್ರಿಯಾಶಕ್ತಿಯತೀಶ್ವರ ಶ್ರೀ ಪಾದ [ಪದ್ಮ] ಪ್ರೀ
13 ತ್ಯರ್ಥ ಧಾರಾಪೂರವಕ ಕೊಟ್ಟೆ ಉ ಯಿಂತಪ್ಪುದಕ್ಕೆ ಆ ಬಸವೆಯ
14 ದಣ್ಣಾಯ[ಕ]ರ ವೊಪ್ಪ ಶ್ರೀ ತ್ರಿಯಂಬಕ ಶ್ರೀ ಕ್ರಿಯಾಶಕ್ತಿಯತೀಶ್ವರರು
15 ಈ ಗ್ರಾಮವನು ಪ್ರತಿಷ್ಟಾ[ಪಿ]ಸಿ ಶ್ರೀ ಗೋಕರ್ಣ ಕ್ಷೇತ್ರದಲು ಮಹಾಬಲೆದೇ
16 ವರ ಪೂಜಾರ್ಥವಾಗಿಊ ಅಲ್ಲಿಯ ಛತ್ರದ ಬ್ರಾಂಹಣರ ಭೋಜನಕ್ಕೆ
17 ಊ ಧಾರಾಪೂರ್ವಕವಾಗಿ ಕೊಟ್ಟೆ ಉ ಯಿಂತಪ್ಪುದಕ್ಕೆ ಕ್ರಿಯಾಶ
18 ಕ್ತಿ ಯತೀಶ್ವರರ ವೊಪ್ಪ ಶ್ರೀ ತ್ರಿಯಂಬಕ ಸ್ವದತ್ತಾಂ ಪರದತ್ತಾಂ ವಾ ಯೋ
19 ಹರೇತ ವಸುಂಧರಾಂ ಷಷ್ಠಿರ್ವರುಷ ಸಹಸ್ರಾಣಿ ವಿಷ್ಟಾಯಾಂ
20 ಜಾಯತೇ ಕ್ರಿಮಿಃ ದಾನಂ ವಾ ಪಾಲನಂ ಯೋ ವೇತಿ ದಾನಾತ್ ಶ್ರೇಯೋನು
21 ಪಾಲನಮ್ ದಾನಾತ್ ಸ್ವರ್ಗಂ ಅವಾಪ್ನೋತಿ ಪಾಲನಾದಚ್ಯುತಪ
22 ದಮ್ ಸಾಮಾನ್ಯೋಮ್ ಧರ್ಮಸೇತು ನೃಪಾಣಂ ಕಾಲೇ ಕಾಲೇ
23 ಪಾಲನಾನ್ಯೋ ಭವದ್ಭಿಃ ಸರ್ವಾನೇತ್ ಭಾವಿನಃ ಪರ್ಥಿವೇನ್ದ್ರಾನ್
24 ಭೂಯೋ ಭುಯೋ ಯಾಚತೇ ರಾಮಚಂದ್ರಃ ಮಂಗ
25 ಳ ಮಹಾ ಶ್ರೀ ಶ್ರೀ ಶ್ರೀ

ಮಾಹಿತಿ: ನಂದನ್ ಐಗಳ್, ANKOLA-CULTURE HISTORY AND ECOLOGY


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading