“ಸ್ವಸ್ತಿ ಸಮದಿಗತ ಪಂಚಮಹಾ ಶಬ್ದ ಮಹಾಮಂಡಳೇಶ್ವರಂ ಬನವಾಸಿ ಪುರವರಾಧೀಶ್ವರಂ ಕಾದಂಬ ಕುಲತಿಳ ಶ್ರೀಮಜ್ಜಯಕೇಶಿ ದೇವರು ವಿಜಯ ರಾಜ್ಯವುತ್ತರೋತ್ತರಾಭಿವೃದ್ಧಿ ಪ್ರವರ್ಧಮಾನಮಾ ಚಂದ್ರಾರ್ಕ ತಾರಾಂಬರಂ ಸಲುತ್ತಮಿರೆ” ಎಂದು ಗೋವೆಯ ಕಾದಂಬ ಎರಡನೇ ಜಯಕೇಶಿಯ ಆಳ್ವಿಕೆಯನ್ನು ಪ್ರಸ್ತಾಪಿಸುವ, ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲುಕಿನಲ್ಲಿರುವ ಈ ಶಾನನವನ್ನು ಡಾ. ಆರ್.ಎನ್. ಗುರವ ಅವರು ‘Kadambas of Goa and their Inscriptions’ ಎಂಬ ತಮ್ಮ ಪಿ.ಎಚ್ ಡಿ. ಮಹಾಪ್ರಬಂಧದಲ್ಲಿ ಪ್ರಕಟಿಸಿರುತ್ತಾರೆ. ಅಗ್ರಹಾರವಾದ ಪಳ್ಳೆಯಾಲದ(ಇಂದಿನ ಹಳಿಯಾಳ) ಮಹಾಜನರು ಅಲ್ಲಿಯ ದೇವಿಯ ಕೆರೆಗೋಸ್ಕರ ಭೂಮಿಯನ್ನು ದತ್ತಿಬಿಟ್ಟ ವಿಷಯವನ್ನು ಈ ಶಾಸನ ಹೇಳುತ್ತದೆ. ಪಳ್ಳೆಯಾಲ ಅಗ್ರಹಾರದ ಮಹಾಜನರು ಎಂತಹವರಿದ್ದರು, ಅವರ ಆಚಾರ-ವಿಚಾರಗಳ ಕುರಿತು ಅರಿಯಲು ಈ ಶಾಸನ ಪಾಠವನ್ನು ಅವಲೋಕಿಸಬಹುದು.
ಶಾಸನ ಪಾಠ :
- ಸ್ವಸ್ತಿ ಸಮದಿಗತ ಪಂಚಮಹಾ ಶಬ್ದ ಮಹಾಮಂಡಳೇಶ್ವರಂ
- ಬನವಾಸಿ ಪುರವರಾಧೀಶ್ವರಂ ಕಾದಂಬ ಕುಲತಿಳ
- ಕಂ ಶ್ರೀಮಜ್ಜಯಕೇಶಿ ದೇವರು ವಿಜಯ ರಾಜ್ಯವುತ್ತರೋತ್ತರಾಭಿ
- ವೃದ್ಧಿ ಪ್ರವರ್ಧಮಾನಮಾ ಚಂದ್ರಾರ್ಕ ತಾರಾಂಬರಂ ಸಲುತ್ತಮಿರೆ|| ಸ್ವಸ್ತಿ ಯಮನಿಯ
- ಮ ಸ್ವಧ್ಯಾಯ ದಾನ ಧಾರಣ ಮೌನಾನುಷ್ಠಾನ ಪಾರಾಯಣ ಜಪ ಸಮಾಧಿ ಶಿಳಸಘಂ
- ನರು ನುಡಿದು ಮತ್ತೇನ್ನರುಂ ಅಗ್ಣಿಷ್ಥೊಮಾದ್ಯನೇಕ ಯಜ್ಞ ಅವಿಬಿೃಷಾ ಮೇಗಾಹನ ಪವಿತ್ರಿಕೃತ ಶರಿ
- ರರುಂ ವಿದ್ವಜನನಬ್ಜಿನಿ ಮಿತ್ರರುಂ ಯಜನಾಯೂಜನ ಅಧ್ಯಯನಾಧ್ಯಾಪನ ದಾನ ಪ್ರತಿಗ್ರಹ
- ಧ್ಯಾನುಷ್ಠಾನ ವಿಧಾನ ನಿಧಾನ ದೀಪವತ್ತಿಗಳುಂ ಧರ್ಮಮೂರ್ತಿಗಳುಂ ಸಕಳ ವ್ಯಾಕರಣಠ್ಠ ಶಾಸ್ತ್ರಖಿಳ
- ಕಳಾ ಕಳಾಪ ಪರಿಜನ ಷಣ್ಮಖರುಂ ಡಬ ಕ್ರೋಧ ಲೋಭಾಸೂಯಾಧ್ಯಾಮ ಗುಣ ಬರ್ಹಿಮುಖರುಂ ಕವಿಗಮ
- ಕ ವಾದಿ ವಾಗ್ಮಿ ನಿಜನಮನಃ ಪದ್ಮಿನಿ ರಾಜಹಂಸರುಂ ಸರಸ್ವತಿ ಕಣ್ಣಾವತಂ ಸುರಂ ಗೌಡವೈದಭ ಪಂಚಾ
- ಳಾದಿ ನಾನಾರೀತಿ ಸಂಯ್ವಕ್ತ ಮೃದು ಮಧುರ ವಚನ ರಚನಾ ಮೃತಸ್ಯಾದಿನಿ ಸಂಸ್ಕೃತಾಪಭ್ರಂಸ ಪೈಶಾಚಿ
- ಕ ಪದನೀಯಚ ನಿಚ್ಚಿತ ಸುಕರ ದುಷ್ಕರ ಶಬೃಕಾಬ್ಯಾ ಗೋಷ್ಠಿ ವಿನೋದರುಂ ಅನವರತ ವಿನುತ
- ದಿವಿಜ ಧನುಜ ಯಕ್ಷ ರಾಕ್ಷಸ ಕಿನ್ನರ ನರ ತಿರಿಥಕೋಟಿ ಸಂದರ್ಭಿತ ತರುಣ ತರಣಿ ಭಾರುಣ
- ಮಯಾಭಾ ವಿಕಸಿತ ತರುಣಿ ತ ಚರಣಾರವಿಂದಂ ದ್ವಂ ದ್ವೇಯೇನಿಪ ಶ್ರೀಮತ್ತಾಂಚಿದೇವಿ ಲಬ್ದ ವರಪ್ರಸಾದ
- ರಂ ಚರ್ತುದಶ ಭುವನ ಭವನ ವಿಸ್ತಾರಿತ ದಶಶತಕ ಭಸ್ತಿಮಾಳಂಕೃತ ಭಾಸ್ಕರದೇವ ಚರಣ ಪೂ
- ಜಕ ರಣ ಪರಿಣತಾನಃ ಕರಣರುಂ ಹಿರಣ್ಯಕಶಿ ಪೌರಾಸ್ಠಳಣಿ ಧಾರಿತ ಸಕಳ ದೈತ್ಯಾರಿ ಶ್ರೀಮನ್ನ
- ರಸಿಂಹದೇವ ಪಾದಾರಾದನ ತತ್ಪರಾಯಣರುಂ ಯಾಚಕ ಜನ ಪರಿತೋಷಣ ವಿತರಣ ತರುಮಪ್ಪ
- ಸ್ವಸ್ತಿ ಸಕ ವರುಷ 10066 ರಕ್ತಾಕ್ಷಿ ಸಂವತ್ಸರದ ಪುಷ್ಯ[ಅಮವಾಸ್ಯೆ] ಮಂಗಳವಾರ ಸೂರ್ಯಗ್ರಹ
- ಣದನ್ದು ಶ್ರೀಮನ್ಮಾಹಗರಹಾರಂ ಪಾಳ್ಳಿಯಲ ಅಸೆ [ಮಹಾ] ಜನಗಳು ದೇವಿಂಗಿಱೆಗಿಬ್ಯ
- ವಸಾಯಂ ಸನ್ತತನ ದೇವಂತಾಗಿ ರಸರಬ್ಬಬ [ಪರಿಹಾರ] ವಾಗಿ ಪೆಬ್ಬುಲದೊಳಗೆ ಭಗ
- ವತ್ಯಾಷ್ಠಾನದಿಂ ಬಡಗಲು ಸತ್ತಿಕಂಬದೊಳಗೆ ಬಿಟ್ಟ ….. ಇನ್ತಿ ಧರ್ಮ್ಮಮಂ ಪ್ರತ್ಯೇಕಂ
- ಪ್ರತಿಪಾಳಿಸುವವರು ಪ್ರತಿಪಾಳಿಸದೇ ಕೆಡಿಸಿದಂತವರು ವಾರಣಾಸಿ ಪ್ರ
- ಯಾಗೆ ಕುರುಕ್ಷೇತ್ರದಲ್ಲಿ ಸಹಸ್ರ ಬ್ರಾಹ್ಮಣರವಂ ಸಹಸ್ರ ಕವಿಲಿಯರುಂ ನಳಿದ ದೋಷ|
- ಸ್ವಂದತಾಂ ಸಮಹಚ್ಛಕ್ಕಂ ದುಹ್ಖಮನ್ಯಾತ್ರ್ಥ ಪಾಲನಂ| ದಾನಾಮ್ವಾ ಪಾಲನ ಮ್ವೇ
- ತಿ ದಾನಾಚ್ಛೇಯೋನು ಪಾಲನಂ|| ಬಹುಭಿವ್ರ್ವಸುಧಾ ದತ್ತಾ ರಾಜಭಿಸ್ಯ
- ಗರಾದಿಭಃ ಯಸ್ಯ ಯಸ್ಯ ಯದಾ ಭೂಮಿಃ ತಸ್ಯ ತಸ್ಯ ತದಾ ಫಲಂ||
- ಸ್ವದತ್ತಾಂ ಪರದತ್ತಾಂ ವಾಯೋ ಹರೇತಿ ವಸುನ್ಧರಾಂ ಷಷ್ಠಿ ವರ್ಷ ಸಹಸ್ರಾಣಿ ವಿಷ್ಠಾ
- ಯಾಂ ಜಾಯತೇ ಕ್ರಿಮಿಃ|| ನವಿಷಂ ವಿಷಮಿತ್ಯಹುಃ ಬ್ರಹ್ಮಸ್ವಂ ವಿಷ
- ಮುಚ್ಯತೇ [|] ವಿಷ ಮೆಕಾಕಿನಹ್ಮಾತಿ ಬ್ರಹ್ಮಸ್ವ ಪುತ್ರ ಪೌತ್ರಿಕಾಂ||
ಈ ಶಾಸನದ ಕುರಿತು ಗುರವ ಅವರು ಹೇಳುವಂತೆ ‘ನಾಗವರ್ಮನು ಹೇಳಿದ ಮೂರೂವರೆ ಭಾಷೆಗಳಲ್ಲಿ ಪ್ರಾಕೃತವನ್ನು ಬಿಟ್ಟು ಉಳಿದ ಸಂಸ್ಕೃತ, ಅಪಭೃಂಶ ಮತ್ತು ಪೈಶಾಚಿಕ ಭಾಷೆಗಳು ಇಲ್ಲಿ ಬರುತ್ತವೆ. ಹಾಗೂ ದಂಡಿಯಿಂದ ಸ್ವೀಕೃತವಾದ ವೈದರ್ಭೀ ಮತ್ತು ಗೌಡೀ ರೀತಿಗಳಲ್ಲದೆ ವಾಮನನ ಪಾಂಚಾಲಿಯೂ ಇಲ್ಲಿ ಸಮಾವೇಶವಾಗಿದೆ. ಪ್ರಸ್ತುತ ಹಳಿಯಾಳ ಶಾಸನವು ಗೌಡೀ ರೀತಿಯ ಉದಾಹರಣೆಯಾಗಿದೆ. ನಮ್ಮ ನಾಡಿನ ಪೂರ್ವಜರು ಯಾವ ಬಗೆಯಾಗಿ ಬೇರೆ ಬೇರೆ ಭಾಷೆ ಹಾಗೂ ರೀತಿಗಳಲ್ಲಿ ಕಾವ್ಯವನ್ನು ರಚಿಸುತ್ತಿದ್ದರು, ಓದುತ್ತಿದ್ದರು ಮತ್ತು ಅದರಲ್ಲಿಯ ಸವಿಯನ್ನು ಆಸ್ವಾದಿಸುತ್ತಿದ್ದರು ಎಂಬುದು ಈ ಹಳಿಯಾಳ ಶಾಸನದಿಂದ ಚನ್ನಾಗಿ ವಿದಿತವಾಗುತ್ತದೆ.’
ಮಾಹಿತಿ ಸಿದ್ಧತೆಯಲ್ಲಿ ಸಹಕರಿಸಿದ ರವಿಕುಮಾರ್ ಕೆ. ನವಲಗುಂದ ಅವರಿಗೆ ಧನ್ಯವಾದಗಳು.
ಮಾಹಿತಿ: ಶ್ಯಾಮಸುಂದರ ಗೌಡ, ಅಂಕೋಲಾ



Leave a Reply