ಕೋಟಿ ಕೋಟಿ ನಮನ – ಅಕ್ಷತಾ ಜಗದೀಶ

Posted by

·

ಅಂಧಕಾರದಿಂದ ಬೆಳಕಿನೆಡೆಗೆ
ದಾರಿತೋರಿದ ಮಹಿಮನು
ಬದುಕಿನ ಮೌಲ್ಯವ ತಿಳಿಸಿ
ಜೀವನ ಪಾಠ ಕಲಿಸಿದಂತ
ಅಕ್ಷರ ಬ್ರಹ್ಮ ನು…
ನಿಮಗಿದೋ ನನ್ನ ಕೋಟಿ ಕೋಟಿ ನಮನ….

ಅಂದು ನೀವು ಕಲಿಸಿದ ಅಕ್ಷರ
ಇಂದಾಗಿದೆ ನನ್ನ‌ಬಾಳ ಬುತ್ತಿಯು
ಬದುಕಿಗೆ ಸ್ಪೂರ್ತಿಯಾಗಿ
ಗುರಿಗೆ ಗುರುವಾಗಿ
ಭವ್ಯ ಬೆಳಕನು ಚೆಲ್ಲಿದ ಗುರುವೇ
ನಿಮಗಿದೋ ನನ್ನ ಕೋಟಿ ಕೋಟಿ ನಮನ…

ಜ್ಞಾನದ ದೀವಿಗೆ ಮನದಲಿ ಬೆಳಗಿಸಿ
ಉತ್ತಮ ನಡೆ ನುಡಿ ಕಲಿಸಿ
ತಪ್ಪೆಸೆಗಿಸಿದಾಗ ತಿದ್ದಿ
ಮನದ ಪುಟದೊಳು ಸನ್ಮಾರ್ಗ ಮೂಡಿಸಿ
ಆಚಾರ ವಿಚಾರ ಸ್ಪುಟವಾಗಿ ಭೋದಿಸಿದಾತನೆ..
ನಿಮಗಿದೋ ನನ್ನ ಕೋಟಿ ಕೋಟಿ ನಮನ…

ಜೀವನಕ್ಕೆ ದಾರಿ ದೀಪವಾಗಿ
ಉತ್ತಮ ಮಾರ್ಗದರ್ಶಕರಾಗಿ
ಆದರ್ಶ ವ್ಯಕ್ತಿಯಾಗಿ
ಬದುಕಿನ ಪಯಣದುದ್ದಕ್ಕೂ
ಸ್ವಾವಲಂಬನೆಯ ಕಡಲಾಗಿ
ದಾರಿ ದೀಪವಾದ ಗುರುಗಳೇ
ನಿಮಗಿದೋ ನನ್ನ ಕೋಟಿ ಕೋಟಿ ನಮನ….

✍️ ಅಕ್ಷತಾ ಜಗದೀಶ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading